Hardik Pandya Replacement : ಐಸಿಸಿ ವಿಶ್ವಕಪ್ ನಲ್ಲಿ ಈ ಬಾರಿ ಭಾರತ ಅದ್ಭುತ ಪ್ರದರ್ಶನ ನೀಡಿದೆ. ತಂಡದ ಆಟಗಾರರು ಮೈದಾನದಲ್ಲಿ ಕಮಾಲ್ ಮಾಡಿದ್ದಾರೆ. ಬ್ಯಾಟರ್ ಹಾಗೂ ಬೌಲರ್ ಗಳ ಅದ್ಭುತ ಪ್ರದರ್ಶನದಿಂದ ಟೀಮ್ ಇಂಡಿಯಾ ಒಂದೇ ಒಂದು ಪಂದ್ಯ ಸೋಲದೇ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ. ಆದರೆ ಕ್ರಿಕೆಟ್ ಅಭಿಮಾನಿಗಳಿಗೆ ಹಾರ್ದಿಕ್ ಪಾಂಡ್ಯ ಆಟ ನೋಡಲು ಸಿಗದಿರುವುದು ಬೇಸರ ತಂದಿದೆ. ಗಾಯದಿಂದಾಗಿ ಹಾರ್ದಿಕ್ ಟೂರ್ನಿಯಿಂದಲೇ ಹೊರಗುಳಿಯಬೇಕಾಯಿತು.
ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದರಿಂದ ಅವರು ಸರಣಿಯಿಂದ ಹೊರಗುಳಿದಿದ್ದರು. ಅದರ ನಂತರದ ಪಂದ್ಯಗಳಲ್ಲಿ ಹಾರ್ದಿಕ್ ಪಾಂಡ್ಯ ಬದಲು ಶಮಿ ಬೌಲಿಂಗ್ ಮತ್ತು ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ನಲ್ಲಿ ಮೋಡಿ ಮಾಡಿದರು. ಶಮಿ ಬಂದ ನಂತರ ಬೌಲಿಂಗ್ ಬಲಗೊಂಡಿತು.
ಇದನ್ನೂ ಓದಿ : “ವಿಶ್ವಕಪ್’ನಲ್ಲಿ ಬುಮ್ರಾಗಿಂತ ಹೆಚ್ಚು ವಿಕೆಟ್ ಕಬಳಿಸೋ ತಾಕತ್ ಇರೋದು ಈ ಬೌಲರ್’ಗೆ”- ಗೌತಮ್ ಗಂಭೀರ್ ಮೆಚ್ಚಿದ್ದು ಯಾರನ್ನು?
ಕ್ರಿಕೆಟ್ ತಂಡಕ್ಕೆ ಆರನೇ ಬೌಲರ್ ಮುಖ್ಯ. ಅಲ್ಲದೆ, ವೇಗದ ಬೌಲರ್ ಇರುವುದು ತಂಡವನ್ನು ಮತ್ತಷ್ಟು ಬಲಗೊಳಿಸುತ್ತದೆ. ಹಾಗಾಗಿ ಈಗ ಭಾರತ ತಂಡದಲ್ಲಿ ಹಾರ್ದಿಕ್ ಪಾಂಡ್ಯಗೆ ಬದಲಿಯಾಗುವ ಆಟಗಾರ ಯಾರು ಎಂಬ ಪ್ರಶ್ನೆ ಮೂಡಿದೆ. ವೇಗದ ಬೌಲರ್ ಪ್ರಸಿದ್ಧ ಕೃಷ್ಣ ಅವರನ್ನೂ ಬದಲಿ ಆಟಗಾರನಾಗಿ ಪ್ರಕಟಿಸಲಾಗಿದೆ.
ಹಾರ್ದಿಕ್ ಪಾಂಡ್ಯಗೆ ಪರಿಪೂರ್ಣ ಬದಲಿ ಯಾರೂ ಇಲ್ಲ ಎಂದು ಅನೇಕರು ಅಭಿಪ್ರಾಯ ಪಟ್ಟಿದ್ದಾರೆ. ಅದನ್ನು ಗಮನದಲ್ಲಿಟ್ಟುಕೊಂಡು ನೋಡುವುದಾದರೆ ಸೈಯದ್ ಮುಷ್ತಾಕ್ ಅಲಿ (SMAT) ದೇಶೀಯ T20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಮೂವರು ವೇಗದ ಬೌಲಿಂಗ್ ಆಲ್‌ರೌಂಡರ್‌ಗಳು ಮುಂದಿನ ದಿನಗಳಲ್ಲಿ ಭಾರತ ತಂಡಕ್ಕೆ ಮತ್ತೊಬ್ಬ ಹಾರ್ದಿಕ್ ಪಾಂಡ್ಯ ಆಗಬಹುದು ಎಂಬುದು ಅನೇಕರ ಅಭಿಪ್ರಾಯ.
ಫ್ಯೂಚರ್ ಹಾರ್ದಿಕ್ ಪಾಂಡ್ಯ?
ಅಭಿಮನ್ಯುಸಿಂಗ್ ರಜಪೂತ್ : ಬರೋಡಾ ಪರ ಆಡುವ ಅಭಿಮನ್ಯುಸಿಂಗ್ ರಜಪೂತ್ ಇನ್ನಿಂಗ್ಸ್‌ನ ಎಲ್ಲಾ ಹಂತಗಳಲ್ಲಿ ಬೌಲಿಂಗ್ ಮಾಡಬಹುದು. ಅವರ ವಯಸ್ಸು 25 ವರ್ಷ. ಅವರು ಇತ್ತೀಚಿನ SMAT ಸರಣಿಯಲ್ಲಿ 17.69 ಸರಾಸರಿಯಲ್ಲಿ 13 ವಿಕೆಟ್‌ಗಳನ್ನು ಪಡೆದರು. ಅಸ್ಸೋಂ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಆಡಿದ ಎಲ್ಲ ಓರ್ ಒಟ್ಟುಗೂಡಿಸಿ ಕೇವಲ 29 ರನ್ ನೀಡಿದ್ದಾರೆ. ಅಲ್ಲದೇ ನಾಲ್ಕು ವಿಕೆಟ್ ಪಡೆದು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಬರೋಡಾ 6 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.
ಅಭಿಮನ್ಯುಸಿಂಗ್ ರಜಪೂತ್ ಬೌಲಿಂಗ್ ಮಾತ್ರವಲ್ಲದೇ, ಬ್ಯಾಟಿಂಗ್ ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಬರೋಡಾ ತಂಡದಿಂದ ಮೂರನೇ ಬ್ಯಾಟರ್ ಆಗಿ ಬರುವ ಅಭಿಮನ್ಯುಸಿಂಗ್ ರಜಪೂತ್ ಪಂಜಾಬ್ ವಿರುದ್ಧದ ಅಂತಿಮ ಪಂದ್ಯದಲ್ಲಿ 42 ಎಸೆತಗಳಲ್ಲಿ 61 ರನ್ ಗಳಿಸಿದರು. ಆದರೆ ಈ ಪಂದ್ಯದಲ್ಲಿ ಪಂಜಾಬ್ 20 ರನ್ ಗಳಿಂದ ಗೆದ್ದು ಚಾಂಪಿಯನ್ ಆಯಿತು.
ಇದನ್ನೂ ಓದಿ : IPL 2024 : CSK ಫ್ಯಾನ್ಸ್ ಗೆ ಬಿಗ್ ಶಾಕ್.. ಹರಾಜಿಗೂ ಮುನ್ನವೇ ಈ 3 ಆಟಗಾರರು ತಂಡದಿಂದ ಔಟ್!?
ಅವರ ಬ್ಯಾಟಿಂಗ್ ಸರಾಸರಿ 24.40. ನಿರ್ದಿಷ್ಟವಾಗಿ ಹೇಳುವುದಾದರೆ, ಅವರು 136.66 ಸ್ಟ್ರೈಕ್ ರೇಟ್‌ನಲ್ಲಿ ಸರಣಿಯುದ್ದಕ್ಕೂ 123 ರನ್ ಗಳಿಸಿದರು. ಈಗಾಗಲೇ SMAT ಸರಣಿಯಲ್ಲಿ ಒಂದು ಶತಕ ಮತ್ತು ಐದು ವಿಕೆಟ್‌ಗಳನ್ನು ಪಡೆದಿದ್ದಾರೆ. ಐಪಿಎಲ್ ಮಾತ್ರವಲ್ಲದೆ ಭಾರತ ತಂಡದಲ್ಲೂ ಅವರಿಗೆ ಬೇಡಿಕೆ ಬರುವುದು ಖಚಿತ ಎನ್ನಲಾಗಿದೆ.
ಮುಂದಿನ ಶಾರ್ದೂಲ್ ಠಾಕೂರ್?
ಆಕಾಶ್ ಸೇನ್‌ಗುಪ್ತಾ : ಆಕಾಶ್ ಸೇನ್‌ಗುಪ್ತಾ ಸಹ ತಮ್ಮ ಅಮೋಘ ಪ್ರದರ್ಶನದಿಂದ ಅನೇಕರನ್ನು ಅಚ್ಚರಿಗೊಳಿಸಿದರು. ಅವರ ಅತ್ಯುತ್ತಮ ಪ್ರದರ್ಶನವೇ ಅಸ್ಸೋಂ ತಂಡವನ್ನು ಸೆಮಿಫೈನಲ್‌ಗೆ ತಲುಪಿಸಿದೆ. ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರೂ, ಸರಣಿಯ ಆರಂಭಿಕ ಪಂದ್ಯದಲ್ಲಿ 18 ಎಸೆತಗಳಲ್ಲಿ 40 ರನ್ ಗಳಿಸಿದರು. ಸ್ಟ್ರೈಕ್ ರೇಟ್ 205 ಆಗಿದೆ. ಶಾರ್ದೂಲ್ ಠಾಕೂರ್ ಅವರಂತೆ ಆಕಾಶ್ ಸೇನ್‌ಗುಪ್ತಾ ಪ್ರದರ್ಶನ ನೀಡುವರು ಎನ್ನಲಾಗಿದೆ. ಬೌಲಿಂಗ್‌ನಲ್ಲಿ ನಿಯಮಿತ ಅಂತರದಲ್ಲಿ ವಿಕೆಟ್‌ಗಳನ್ನು ಪಡೆದರು. ಸೆಮಿಫೈನಲ್‌ನಲ್ಲಿ ಆಕಾಶ್ ಸೇನ್‌ಗುಪ್ತಾ 2 ವಿಕೆಟ್ ಪಡೆದರು.
ಇವರಾಗಬಹುದೇ ಕ್ಯಾಪ್ಟನ್ ಮೆಟೀರಿಯಲ್!
ದರ್ಶನ್ ಮಿಸಾಲ್ : ಗೋವಾ ತಂಡದ ನಾಯಕ ದರ್ಶನ್ ಮಿಸಾಲ್ ಕ್ಯಾಪ್ಟನ್ ಮೆಟೀರಿಯಲ್ ಎನಿಸಿಕೊಳ್ಳುತ್ತಿದ್ದಾರೆ. ಈ ಬಾರಿಯ SMAT ಯಲ್ಲಿ ಅವರು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಿದ್ದಾರೆ. ಅವರು ನಾಲ್ಕನೇ ಮತ್ತು ಐದನೇ ಆಟಗಾರನಾಗಿ ಕಣಕ್ಕಿಳಿಯುತ್ತಾರೆ. ದರ್ಶನ್ ಮಿಸಾ ವೇಗದ ಬೌಲರ್ ಅಲ್ಲ. ಆದರೆ ಎಡಗೈ ಮಿಸ್ಟರಿ ಸ್ಪಿನ್ನರ್ ಆಗಿದ್ದು ತಂಡಕ್ಕೆ ಬಲ ನೀಡುತ್ತದೆ.
ಮಿಸಾಲ್ ಆರು ಪಂದ್ಯಗಳಲ್ಲಿ ಎಂಟು ವಿಕೆಟ್ ಪಡೆದರು. 187.50 ರ ಸ್ಟ್ರೈಕ್ ರೇಟ್ ನೊಂದಿಗೆ 150 ರನ್‌ಗಳನ್ನು ಸಿಡಿಸಿದ್ದಾರೆ. ಒಟ್ಟಾರೆಯಾಗಿ ಮಿಸಾಲ್ 67 T20I ಗಳನ್ನು ಆಡಿದ್ದಾರೆ. 694 ರನ್ ಗಳಿಸಿದ್ದಾರೆ ಮತ್ತು 55 ವಿಕೆಟ್‌ಗಳನ್ನು ಪಡೆದಿದ್ದಾರೆ. ಟಿ20ಯಲ್ಲಿ ಕೃನಾಲ್ ಪಾಂಡ್ಯ ಅವರಂತೆಯೇ ಆಡುವ ಎಡಗೈ ಸ್ಪಿನ್ನರ್ ಮುಂಬರುವ ಐಪಿಎಲ್ ಬಿಡ್‌ನಲ್ಲಿ ಪ್ರಮುಖ ಆಟಗಾರನಾಗಲಿದ್ದಾರೆ ಎನ್ನಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.