Chandra mohan : ಚಿತ್ರರಂಗಕ್ಕೆ ಆಘಾತ : ಖ್ಯಾತ ಹಿರಿಯ ನಟ ಚಂದ್ರಮೋಹನ್ ವಿಧಿವಶ..!

Chandra Mohan death : ತೆಲುಗು ಚಿತ್ರರಂಗದಲ್ಲಿ ತಮ್ಮ ಅದ್ಭುತ ನಟನೆಯ ಮೂಲಕ ಜನ ಮೆಚ್ಚುಗೆಗೆ ಪಾತ್ರರಾಗಿದ್ದ ಹಿರಿಯ ನಟ ಚಂದ್ರಮೋಹನ್‌ ಅವರು ಇಂದು ವಿಧಿವಶರಾಗಿದ್ದಾರೆ. ಅವರ ನಿಧನ ಚಿತ್ರರಂಗಕ್ಕೆ ತೀರಿಸಲಾಗದ ನಷ್ಟ ಉಂಟುಮಾಡಿದೆ.

Written by - Krishna N K | Last Updated : Nov 11, 2023, 01:30 PM IST
  • ಹಿರಿಯ ನಟ ಚಂದ್ರಮೋಹನ್‌ ಅವರು ಇಂದು ವಿಧಿವಶರಾಗಿದ್ದಾರೆ.
  • ತಮ್ಮ ಅದ್ಭುತ ನಟನೆಯ ಮೂಲಕ ಜನ ಮೆಚ್ಚುಗೆಗೆ ಪಾತ್ರರಾಗಿದ್ದ ನಟ.
  • ಅವರು ಪತ್ನಿ ಜಲಂಧರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
Chandra mohan : ಚಿತ್ರರಂಗಕ್ಕೆ ಆಘಾತ : ಖ್ಯಾತ ಹಿರಿಯ ನಟ ಚಂದ್ರಮೋಹನ್ ವಿಧಿವಶ..! title=

Actor Chandra Mohan : ಟಾಲಿವುಡ್‌ ಹಿರಿಯ ನಟ ಚಂದ್ರಮೋಹನ್ ಅವರು ಇಂದು ನಿಧನರಾಗಿದ್ದಾರೆ. ಹೈದರಾಬಾದ್ ಅಪೋಲೋ ಆಸ್ಪತ್ರೆಯಲ್ಲಿ ಬೆಳಗ್ಗೆ 9.45ಕ್ಕೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. ಅವರು ಪತ್ನಿ ಜಲಂಧರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಸೋಮವಾರ ಹೈದರಾಬಾದ್‌ನಲ್ಲಿ ಚಂದ್ರಮೋಹನ್‌ ಅವರ ಅಂತ್ಯಕ್ರಿಯೆ ನಡೆಯಲಿದೆ. ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಚಂದ್ರಮೋಹನ್ ಜೊತೆಗಿನ ಸಂಬಂಧವನ್ನು ಸಾಮಾಜಿಕ ಜಾಲತಾಣದ ಮೂಲಕ ನೆನಪಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: 35 ಕೋಟಿಗೆ ‌ʼಬ್ಯಾಡ್‌ ಮ್ಯಾನರ್ಸ್ʼ ಹಕ್ಕು ಸೇಲ್:‌ ಜೂ.ರೆಬಲ್‌ಸ್ಟಾರ್ ಚಿತ್ರದ ರೈಟ್ಸ್ ಜಯಣ್ಣನ ಪಾಲು..!

ಚಂದ್ರಮೋಹನ್ ಹುಟ್ಟಿದ್ದು ಕೃಷ್ಣಾ ಜಿಲ್ಲೆಯ ಪಮಿಡಿಮುಕ್ಕದಲ್ಲಿ. ಇವರ ನಿಜವಾದ ಹೆಸರು ಮಲ್ಲಂಪಲ್ಲಿ ಚಂದ್ರಶೇಖರ್ ರಾವ್. ಚಂದ್ರಮೋಹನ್ ಅವರ ಪತ್ನಿ ಜಲಂಧರ್ ಲೇಖಕಿ. ದಂಪತಿಗೆ ಮಥುರಾ ಮೀನಾಕ್ಷಿ ಮತ್ತು ಮಾಧವಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮಥುರಾ ಮೀನಾಕ್ಷಿ ಅಮೆರಿಕದಲ್ಲಿ ಸೈಕಾಲಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದರೆ, ಎರಡನೇ ಮಗಳು ಮಾಧವಿ ಚೆನ್ನೈನಲ್ಲಿ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದಾರೆ.

ಚಂದ್ರಮೋಹನ್ ಅವರು 1966 ರಲ್ಲಿ, ವರವ ರತ್ನಂ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ತಮ್ಮ ಚೊಚ್ಚಲ ಚಿತ್ರದಲ್ಲಿನ ಅತ್ಯುತ್ತಮ ನಟನೆಗಾಗಿ ನಂದಿ ಪ್ರಶಸ್ತಿ ಪಡೆದರು. ಎರಡು ಫಿಲಂಫೇರ್ ಮತ್ತು 6 ನಂದಿ ಪ್ರಶಸ್ತಿಗಳನ್ನು ಪಡೆದಿರುವ ಚಂದ್ರಮೋಹನ್ ಹಲವು ಚಿತ್ರಗಳಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ನಟಿಸಿದ್ದರು. ಚಂದ್ರಮೋಹನ್ ತಮ್ಮ 55 ವರ್ಷಗಳ ಚಿತ್ರರಂಗದಲ್ಲಿ 932 ಚಿತ್ರಗಳಲ್ಲಿ ನಟಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News