ನವದೆಹಲಿ: ರೈಲಿನಲ್ಲಿ ಪ್ರಯಾಣಿಸುವವರು ಆಗಾಗ್ಗೆ ತಮ್ಮ ರೈಲನ್ನು ಮಿಸ್ ಮಾಡಿಕೊಳ್ಳುವ ಅಥವಾ ಕೆಲವೊಮ್ಮೆ ತಮ್ಮ ನಿಲ್ದಾಣ ಬಿಟ್ಟು ಒಂದೆರಡು ನಿಲ್ದಾಣಗಳ ಮುಂದಕ್ಕೆ ಹೋಗಿ ರೈಲು ಹತ್ತುವ ಸಂದರ್ಭಗಳು ಬರಬಹುದು. ಸಾಂದರ್ಭಿಕವಾಗಿ ಆರ್ಪಿಎಫ್ ಮತ್ತು ಜಿಆರ್ಪಿಯ ಸಿಬ್ಬಂದಿ ಪ್ರಯಾಣಿಕರ ಟಿಕೆಟ್ಗಳನ್ನು ಪರಿಶೀಲಿಸುತ್ತಾರೆ. ಈ ಸಮಯದಲ್ಲಿ, ಕೆಲವರು ಪ್ರಯಾಣಿಕರಿಂದ ಸಾಕಷ್ಟು ಹಣ ವಸೂಲಿ ಮಾಡುತ್ತಾರೆ. ಅಂತಹ ಅನೇಕ ವೀಡಿಯೊಗಳು ಇತ್ತೀಚಿಗೆ ಕಂಡು ಬಂದಿವೆ. ಆದ್ದರಿಂದ, ರೈಲಿನ ಪ್ರಯಾಣಕ್ಕೆ ಸಂಬಂಧಿಸಿದ ಎಲ್ಲಾ ನಿಯಮಗಳನ್ನು ತಿಳಿದುಕೊಳ್ಳುವುದು ರೈಲು ಪ್ರಯಾಣಿಕರಿಗೆ ಬಹಳ ಮುಖ್ಯವಾಗಿದೆ.
1. ರೈಲಿನ ಒಳಗೆ ಅಥವಾ ಹೊರಗೆ ಟಿಕೆಟ್ ಪರಿಶೀಲಿಸುವ ಹಕ್ಕು ಟಿಟಿಇ ಮತ್ತು ಮೊಬೈಲ್ ಮೊಬೈಲ್ ಸ್ಕ್ವಾಡ್ ಅಧಿಕಾರಿಗಳಿಗೆ ಮಾತ್ರ ಇರುತ್ತದೆ.
2. ಆದಾಗ್ಯೂ, ಪ್ರಯಾಣಿಕರ ಟಿಕೆಟ್ಗಳನ್ನು ಪರಿಶೀಲನೆ ಸಮಯದಲ್ಲಿ, ಟಿಟಿಇ ಅಥವಾ ಮೊಬೈಲ್ ಸ್ಕ್ವಾಡ್ ಅಧಿಕಾರಿಗಳು ಆರ್ಪಿಎಫ್, ಜಿಆರ್ಪಿ ಜವಾನರ ಸಹಾಯವನ್ನು ಪಡೆಯಬಹುದು. ಆದರೆ, ಆರ್ಪಿಎಫ್, ಜಿಆರ್ಪಿ ಜವಾನರು ಟಿಕೆಟ್ ಪರಿಶೀಲಿಸುವ ಹಕ್ಕನ್ನು ಹೊಂದಿಲ್ಲ.
3. ಕಾಯ್ದಿರಿಸಿದ ಟಿಕೆಟ್ ಪಡೆದ ಪ್ರಯಾಣಿಕರು ಬೋರ್ಡಿಂಗ್ ನಿಲ್ದಾಣಕ್ಕೆ ಬರದಿದ್ದರೆ, ಟಿಟಿಇ ಬೇರೆ ಪ್ರಯಾಣಿಕರಿಗೆ ಆಸನವನ್ನು ತಕ್ಷಣವೇ ಬದಲಾಯಿಸಲಾಗುವುದಿಲ್ಲ. ಟಿಟಿಇ ಅದಕ್ಕಾಗಿ ಕನಿಷ್ಠ ಎರಡು ನಿಲ್ದಾಣಗಳು ಮತ್ತು ಒಂದು ಗಂಟೆ ಪ್ರಯಾಣಿಕರಿಗೆ ಕಾಯಬೇಕಾಗುತ್ತದೆ. ಹಲವು ಬಾರಿ ಬೋರ್ಡಿಂಗ್ ನಿಲ್ದಾಣದಿಂದ ಮುಂದಿನ ಎರಡು-ಮೂರು ನಿಲ್ದಾಣಗಳಲ್ಲಿ ಅನೇಕ ಪ್ರಯಾಣಿಕರು ರೈಲನ್ನು ಹತ್ತುತ್ತಾರೆ.
4. ಒಂದು ವೇಳೆ ಪ್ರಯಾಣಿಕರಿಗೆ ಮಧ್ಯದ ಸ್ಥಾನ(ಸೀಟ್)ವನ್ನು ಖಚಿತಪಡಿಸಲಾಗಿದ್ದರೆ, ನಿಯಮಗಳ ಪ್ರಕಾರ, ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ರವರೆಗೆ ಮಾತ್ರ ಮಲಗಬಹುದು. ಅದಕ್ಕೂ ಮೊದಲು ಅಥವಾ ನಂತರ, ಆತ ಆಸನವನ್ನು ಬಿಟ್ಟು ಕೆಳ ಬೆರ್ತ್ನಲ್ಲಿ ಕುಳಿತು ಪ್ರಯಾಣಿಸಬೇಕಾಗುತ್ತದೆ.
5. ನಿಮ್ಮ ಟಿಕೆಟ್ ಕಳೆದುಹೋದರೆ, ಪ್ರಯಾಣಕ್ಕೆ 24 ಗಂಟೆಗಳ ಮೊದಲು ಬೋರ್ಡಿಂಗ್ ಸ್ಟೇಷನ್ನ ಮುಖ್ಯ ಮೀಸಲಾತಿ ಮೇಲ್ವಿಚಾರಕರನ್ನು ಭೇಟಿ ಮಾಡುವ ಮೂಲಕ ನೀವು ನಕಲಿ ಟಿಕೆಟ್ಗೆ ವಿನಂತಿಸಬಹುದು. ಮನವಿ ಮೇರೆಗೆ ನಿಮಗೆ ನಕಲಿ ಟಿಕೆಟ್ ನೀಡಲಾಗುವುದು.
6. ಟಿಕೆಟ್ ಪರಿಶೀಲಿಸುವ ಸಮಯ ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ ನಿಗದಿಯಾಗಿದ್ದು, ರಾತ್ರಿ 10 ಗಂಟೆಯ ನಂತರ ಟಿಟಿಇ ನಿಮಗೆ ತೊಂದರೆ ಕೊಡಲು ಸಾಧ್ಯವಿಲ್ಲ. (ಒಂದು ವೇಳೆ ನಿಮ್ಮ ಬೋರ್ಡಿಂಗ್ ಸಮಯ ರಾತ್ರಿ 10 ಗಂಟೆಯ ನಂತರವಿದ್ದರೆ ಆ ವೇಳೆ ಪ್ರಯಾಣಿಕರು ಟಿಟಿಇ ಗೆ ಸಹಕರಿಸಬೇಕು)