Cars With Air Purifier: ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಏರ್ ಪ್ಯೂರಿಫೈಯರ್ ಕಾರುಗಳು

Cars With Air Purifier: ನೀವು ಅಗ್ಗದ ಬೆಲೆಯಲ್ಲಿ  ಏರ್ ಪ್ಯೂರಿಫೈಯರ್ ಕಾರ್ ಕೊಳ್ಳುವ ಬಗ್ಗೆ ಯೋಚಿಸುತ್ತಿದ್ದರೆ ಇಲ್ಲಿದೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ  ಟಾಪ್ 5 ಏರ್ ಪ್ಯೂರಿಫೈಯರ್ ಕಾರುಗಳು. 

Written by - Yashaswini V | Last Updated : Nov 14, 2023, 10:14 AM IST
  • ಭಾರತದ ಅನೇಕ ನಗರಗಳಲ್ಲಿ ವಾಯು ಮಾಲಿನ್ಯವು ಒಂದು ದೊಡ್ಡ ಸಮಸ್ಯೆಯಾಗಿದೆ.
  • ಅದರಲ್ಲೂ ಈ ದೀಪಾವಳಿಯ ಸಮಯದಲ್ಲಿ ವಾಯುಮಾಲಿನ್ಯ ಒಂದು ಅತಿದೊಡ್ಡ ಸಮಸ್ಯೆ
Cars With Air Purifier: ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಏರ್ ಪ್ಯೂರಿಫೈಯರ್ ಕಾರುಗಳು  title=

Cars With Air Purifier: ಕಾಡುಗಳ ನಾಶ ಹಾಗೂ ಆಧುನಿಕತೆಯ ಬೆಳವಣಿಗೆಯೊಂದಿಗೆ ವಾಯು ಮಾಲಿನ್ಯ ಹೆಚ್ಚಾಗಿದೆ.  ಇಂತಹ ಸಂದರ್ಭದಲ್ಲಿ ನೀವು ಏರ್ ಪ್ಯೂರಿಫೈಯರ್ ಕಾರ್ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಈ ಲೇಖನದಲ್ಲಿದೆ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಟಾಪ್ 5 ಏರ್ ಪ್ಯೂರಿಫೈಯರ್ ಕಾರುಗಳ ಪಟ್ಟಿ. 

ಏರ್ ಪ್ಯೂರಿಫೈಯರ್‌ಗಳೊಂದಿಗೆ ಬರುವ ಟಾಪ್ 5 ಬಜೆಟ್ ಸ್ನೇಹಿ ಕಾರುಗಳೆಂದರೆ:- 
ಕಿಯಾ ಸೋನೆಟ್: 

ಏರ್ ಪ್ಯೂರಿಫೈಯರ್‌ನೊಂದಿಗೆ ಲಭ್ಯವಿರುವ ಕೈಗೆಟುವ ಬೆಲೆಯ ಕಾರುಗಳ ಪಟ್ಟಿಯಲ್ಲಿ  ಕಿಯಾ ಸೋನೆಟ್ ಕಾರ್ ಪ್ರಥಮ ಸ್ಥಾನದಲ್ಲಿದೆ. ಎಚ್‌ಟಿ‌ಕೆ ಪ್ಲಸ್ ರೂಪಾಂತರದೊಂದಿಗೆ ಲಭ್ಯವಿರುವ ಈ ಕಾರ್ ಅನ್ನು ಸ್ಮಾರ್ಟ್ ಪ್ಯೂರ್ ಏರ್ ಪ್ಯೂರಿಫೈಯರ್ ಕಾರ್ ಎಂದು ಕರೆಯಲಾಗುತ್ತದೆ. ಏರ್ ಪ್ಯೂರಿಫೈಯರ್ ಘಟಕವು ಮುಂಭಾಗದ ಆಸನಗಳ ನಡುವೆ ಸೆಂಟರ್ ಕನ್ಸೋಲ್ ಆರ್ಮ್‌ರೆಸ್ಟ್‌ನಲ್ಲಿದ್ದು ಇದು ವೈರಸ್ ಮತ್ತು ಬ್ಯಾಕ್ಟೀರಿಯಾದಿಂದ ರಕ್ಷಣೆ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಕಾರ್ ಬೆಲೆ  9.64 ಲಕ್ಷ (ಎಕ್ಸ್ ಶೋ ರೂಂ) ರೂ.ಗಳು. 

ಹ್ಯುಂಡೈ ವೆನ್ಯೂ: 
ಭಾರತದ ಪ್ರಸಿದ್ದ ಕಾರು ಕಂಪನಿಗಳಲ್ಲಿ ಒಂದಾದ ಹುಂಡೈ ಕಂಪನಿಯ ಹ್ಯುಂಡೈ ವೆನ್ಯೂ ಅಂತರ್ನಿರ್ಮಿತ ಏರ್ ಪ್ಯೂರಿಫೈಯರ್‌ ಕಾರ್ ಕೂಡ ಬಜೆಟ್ ಸ್ನೇಹಿ ಕಾರ್ ಎಂತಲೇ ಹೇಳಬಹುದು. ಇದರ ಬೆಲೆ 9.76 ಲಕ್ಷ (ಎಕ್ಸ್ ಶೋ ರೂಂ) ರೂ.ಗಳು. 

ಇದನ್ನೂ ಓದಿ- Free... Free...Free.. ಗ್ರಾಹಕರಿಗೆ ದೀಪಾವಳಿ ಹಬ್ಬಕ್ಕೆ ಬಂಬಾಟ್ ಉಡುಗೊರೆ ನೀಡಿದೆ ಈ ಟೆಲಿಕಾಂ ಕಂಪನಿ!

ಕಿಯಾ ಸೆಲ್ಟೋಸ್: 
ಕಿಯಾ ಕಂಪನಿ ಸೋನೆಟ್‌ನಂತೆ, ಕಿಯಾ ಸೆಲ್ಟೋಸ್ ಕೂಡ ಏರ್ ಪ್ಯೂರಿಫೈಯರ್‌ನೊಂದಿಗೆ ಲಭ್ಯವಿರುವ ಕಡಿಮೆ ಬಜೆಟ್ ಕಾರ್ ಆಗಿದ್ದು ಇದರ ಬೆಲೆ 2.10 ಲಕ್ಷದಿಂದ (ಎಕ್ಸ್ ಶೋ ರೂಂ)  ಪ್ರಾರಂಭವಾಗುತ್ತದೆ. 

ಟಾಟಾ ನೆಕ್ಸನ್: 
ಅತ್ಯಂತ ಜನಪ್ರಿಯ ಸಬ್-4 ಮೀಟರ್ ಎಸ್‌ಯುವಿ ಕಾರ್ ಆಗಿರುವ ಹೊಸ ಟಾಟಾ ನೆಕ್ಸಾನ್ ಧೂಳಿನ ಸಂವೇದಕದೊಂದಿಗೆ ಏರ್ ಪ್ಯೂರಿಫೈಯರ್ ಅನ್ನು ಹೊಂದಿದೆ. ಇದರ ಬೆಲೆ 12.50 ಲಕ್ಷದಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತದೆ. 

ಇದನ್ನೂ ಓದಿ- Electricity Bill: ವಿದ್ಯುತ್ ಬಿಲ್ ಕಡಿಮೆ ಮಾಡಲು ನಿಮ್ಮ ಮನೆಯ ಈ 3 ಗ್ಯಾಜೆಟ್‌ಗಳನ್ನು ಇಂದೇ ಬದಲಾಯಿಸಿ

ಹ್ಯುಂಡೈ ವೆರ್ನಾ: 
ಹ್ಯುಂಡೈ ಕಂಪನಿಯ ಮತ್ತೊಂದು ಏರ್ ಪ್ಯೂರಿಫೈಯರ್ ಕಾರ್ ಎಂದರೆ ಹ್ಯುಂಡೈ ಉನ್ನತ-ಸ್ಪೆಕ್ SX (O) ರೂಪಾಂತರದ ಕಾರ್. ಅದರ ವಿಭಾಗದಲ್ಲಿ ಏರ್ ಪ್ಯೂರಿಫೈಯರ್ ಹೊಂದಿರುವ ಏಕೈಕ ಕಾಂಪ್ಯಾಕ್ಟ್ ಸೆಡಾನ್‌ ಕಾರ್ ಇದಾಗಿದೆ. ಇದರ ಬೆಲೆ 14.66 ಲಕ್ಷ (ಎಕ್ಸ್ ಶೋ ರೂಂ) ರೂ. ಆಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News