ನವದೆಹಲಿ: ಇಂಗ್ಲೆಂಡ್ ತಂಡವು ಚಾಂಪಿಯನ್ ಆದ ಬಗ್ಗೆ ಈಗ ಹಲವು ಟೀಕೆಗಳ ಸುರಿಮಳೆ ಸುರಿದಿವೆ. ಅದರಲ್ಲಿ ಪ್ರಮುಖವಾಗಿ ರನ್ ಓಡುವ ಸಂದರ್ಭದಲ್ಲಿ ಮಾರ್ಟಿನ್ ಗುಪ್ಟಿಲ್ ಎಸೆತ ಬಾಲ್ ಬೆನ್ ಸ್ಟೋಕ್ ಬ್ಯಾಟಿಗೆ ತಗುಲಿ ಬೌಂಡರಿ ಗೆರೆ ತಲುಪಿತ್ತು.
ಇದರಿಂದಾಗಿ ಪಂದ್ಯದ ಫಲಿತಾಂಶದ ಚಿತ್ರಣವನ್ನೇ ಬದಲಿಸುವಲ್ಲಿ ಈ ಓವರ್ ಥ್ರೋ ಮಹತ್ವದ ಪಾತ್ರ ವಹಿಸಿತ್ತು. ಈಗ ಬಂದಿರುವ ಮಾಹಿತಿ ಪ್ರಕಾರ ಬೆನ್ ಸ್ಟೋಕ್ ಅವರು ಅಂಪೈರ್ ಬಳಿ ತೆರಳಿ ಈ ಓವರ್ ಥ್ರೋ ಹಿಂತೆಗೆದುಕೊಳ್ಳಲು ಸೂಚಿಸಿದ್ದರು ಎನ್ನಲಾಗಿದೆ.
ಸಿಡ್ನಿ ಮಾರ್ನಿಂಗ್ ಗೆ ಜೇಮ್ಸ್ ಆಂಡರ್ಸನ್ ನೀಡಿರುವ ಹೇಳಿಕೆಯಲ್ಲಿ " ಸಂಪ್ರದಾಯದ ಪ್ರಕಾರ ಸ್ಟಂಪ್ ಗೆ ಎಸೆತದ ಬಾಲ್ ನಿಮಗೆ ತಗುಲಿ ನೀವು ಓಡದಿರುವ ಗ್ಯಾಪ್ ನಲ್ಲಿ ಹೋಗಿ ಮುಂದೆ ಅದು ಬೌಂಡರಿ ತಲುಪಿದಲ್ಲಿ ಆಗ ಏನೂ ಮಾಡಲು ಸಾಧ್ಯವಿಲ್ಲ. ಮೈಕಲ್ ವಾನ್ ಜೊತೆಗೆ ಮಾತುಕತೆ ನಡೆಸುತ್ತಿದ್ದಾಗ ಅವರು ಬೆನ್ ಸ್ಟೋಕ್ ಅಂಪೈರ್ ಬಳಿ ಹೋಗಿ ಈ ಓವರ್ ಥ್ರೋ ನ್ನು ಹಿಂತೆಗೆದುಕೊಳ್ಳಲು ಸೂಚಿಸಿದರು. ಆದರೆ ಇದು ನಿಯಮದಲ್ಲಿ ಅದೇ ರೀತಿ ಇದೆ ' ಎಂದು ಅಂಡರ್ಸನ್ ಹೇಳಿದ್ದರು.
ಈ ಓವರ್ ಥ್ರೋ ವಿಚಾರವಾಗಿ ಮಾತನಾಡಿರುವ ಮಾಜಿ ಆಸ್ಟ್ರೇಲಿಯಾದ ಅಂಪೈರ್ ಸೈಮನ್ ಟೌಪೇಲ್ ಇದು ನಿಜಕ್ಕೂ ತಪ್ಪು ,ಇಂಗ್ಲೆಂಡ್ ಗೆ ಐದು ರನ್ ಗಳನ್ನು ನೀಡಬೇಕಾಗಿತ್ತೆ ಹೊರತು ಆರು ರನ್ ಗಳಲ್ಲಿ ಇದು ತೀರ್ಪುನಲ್ಲಿನ ತಪ್ಪು ಎಂದು ಫಾಕ್ಸ್ ಸ್ಪೋರ್ಟ್ ಗೆ ಹೇಳಿದ್ದರು.