ಈ ಆಹಾರಗಳನ್ನು ಸೇವಿಸಿದ ಬಳಿಕ ತಪ್ಪಿಯೂ ನೀರು ಕುಡಿಯಬೇಡಿ!

Health News Kannada : ಕೆಲವು ರೀತಿಯ ಆಹಾರದೊಂದಿಗೆ ನೀರನ್ನು ಸೇವಿಸುವುದರಿಂದ ಅಜೀರ್ಣ ಮತ್ತು ಅಸ್ವಸ್ಥತೆ ಉಂಟಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತದೆ. 

Written by - Chetana Devarmani | Last Updated : Nov 20, 2023, 01:14 PM IST
  • ನೀರು ಕುಡಿಯುವುದರ ಅನಾನುಕೂಲ
  • ಈ ಆಹಾರ ಸೇವಿಸಿದ ಬಳಿಕ ನೀರು ಕುಡಿಯಬಾರದು
  • ಅಜೀರ್ಣ ಉಂಟಾಗುವ ಸಾಧ್ಯತೆಗಳಿವೆ
ಈ ಆಹಾರಗಳನ್ನು ಸೇವಿಸಿದ ಬಳಿಕ ತಪ್ಪಿಯೂ ನೀರು ಕುಡಿಯಬೇಡಿ!  title=
Water

Water Side Effects : ಏನಾದರೂ ತಿಂದ ಬಳಿಕ ನೀರು ಕುಡಿಯುವುದು ಸಹಜ. ಊಟಕ್ಕೆ ಕುಳಿತರೆ ಹತ್ತಿರದಲ್ಲಿ ನೀರು ಇಡುತ್ತಾರೆ. ಆದರೆ ಕೆಲವು ರೀತಿಯ ಆಹಾರ ಸೇವಿಸುವಾಗ ನೀರು ಕುಡಿಯಬಾರದು ಎನ್ನುತ್ತಾರೆ ಆರೋಗ್ಯ ತಜ್ಞರು. ಕೆಲವು ರೀತಿಯ ಆಹಾರದೊಂದಿಗೆ ನೀರನ್ನು ಸೇವಿಸುವುದರಿಂದ ಅಜೀರ್ಣ ಮತ್ತು ಅಸ್ವಸ್ಥತೆ ಉಂಟಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತದೆ. 

ಮೊಸರು: ಮೊಸರು ಪ್ರೋಬಯಾಟಿಕ್‌ಗಳಲ್ಲಿ ಸಮೃದ್ಧವಾಗಿದೆ. ಮೊಸರು ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ನೀವು ಮೊಸರು ತಿನ್ನುವಾಗ ನೀರು ಕುಡಿಯಬಾರದು. ಅದು ಪ್ರೋಬಯಾಟಿಕ್‌ಗಳ ಮೇಲೆ ಪರಿಣಾಮ ಬೀರುತ್ತದೆ.

ಇದನ್ನೂ ಓದಿ : ನಿಮಗೆ ಹಲ್ಲು ನೋವು ಇದೆಯಾ? ಹಾಗಿದ್ದಲ್ಲಿ ಶೀಘ್ರ ಗುಣಮುಖಕ್ಕಾಗಿ ಇಲ್ಲಿದೆ ಸುಲಭ ಮಾರ್ಗ ...! 

ಮಸಾಲೆಯುಕ್ತ ಆಹಾರಗಳು: ಮಸಾಲೆಯುಕ್ತ ಆಹಾರವನ್ನು ಸೇವಿಸುವಾಗ ಅನೇಕ ಜನರು ಸಾಕಷ್ಟು ನೀರು ಕುಡಿಯುತ್ತಾರೆ. ಅಂತಹ ಆಹಾರವನ್ನು ಸೇವಿಸುವಾಗ ನೀರು ಕುಡಿಯುವುದು ಉರಿಯೂತವನ್ನು ಉಲ್ಬಣಗೊಳಿಸುತ್ತದೆ. ಮಸಾಲೆಯುಕ್ತ ಆಹಾರವನ್ನು ಸೇವಿಸುವಾಗ ಬಾಯಿಯನ್ನು ತಂಪಾಗಿಸಲು ಹಾಲು ಮತ್ತು ಮೊಸರು ತೆಗೆದುಕೊಳ್ಳಬೇಕು. 

ಅನ್ನ: ಅನೇಕ ಜನರು ಅನ್ನವನ್ನು ತಿನ್ನುವಾಗ ಹೆಚ್ಚು ನೀರು ಸೇವಿಸುತ್ತಾರೆ. ಇದನ್ನು ಕುಡಿಯುವುದರಿಂದ ಜೀರ್ಣಕ್ರಿಯೆಗೆ ಬೇಕಾದ ಆಮ್ಲಗಳು ಕರಗುತ್ತವೆ. ಚಯಾಪಚಯವನ್ನು ನಿಧಾನಗೊಳಿಸುತ್ತದೆ. ಈ ಕಾರಣದಿಂದಾಗಿ ತೂಕ ಹೆಚ್ಚಾಗುವ ಸಾಧ್ಯತೆಗಳಿವೆ.

ಸಿಟ್ರಸ್ ಹಣ್ಣುಗಳು: ದ್ರಾಕ್ಷಿ, ಕಿತ್ತಳೆ, ಮೂಸಂಬಿ ಮುಂತಾದ ಸಿಟ್ರಸ್ ಹಣ್ಣುಗಳು ನೈಸರ್ಗಿಕವಾಗಿ ಹೆಚ್ಚಿನ ನೀರಿನ ಅಂಶವನ್ನು ಹೊಂದಿರುತ್ತವೆ. ಇದಲ್ಲದೆ, ಇವುಗಳನ್ನು ತಿನ್ನುವಾಗ ನೀರು ಕುಡಿಯುವುದರಿಂದ ಹೊಟ್ಟೆಯಲ್ಲಿ ಅಸ್ವಸ್ಥತೆ ಉಂಟಾಗುತ್ತದೆ. ಹಾಗಾಗಿ ಇವುಗಳನ್ನು ತಿಂದ ನಂತರ ಗ್ಯಾಪ್ ಕೊಟ್ಟು ನೀರು ಕುಡಿಯುವುದು ಉತ್ತಮ.

ಇದನ್ನೂ ಓದಿ : ಈ ಸೊಪ್ಪಿನಲ್ಲಿದೆ ಆರೋಗ್ಯದ ಗಣಿ.. ತೂಕ ಇಳಿಕೆ ಜೊತೆ ಕ್ಯಾನ್ಸರ್ ಕೋಶಗಳನ್ನೂ ಶಮನ ಮಾಡುತ್ತೆ! 

ಬಾಳೆಹಣ್ಣು : ಬಾಳೆಹಣ್ಣು ತಿನ್ನುವಾಗಲೂ ನೀರು ಕುಡಿಯಬೇಡಿ. ಏಕೆಂದರೆ ಬಾಳೆಹಣ್ಣಿನಲ್ಲಿ ಫೈಬರ್ ಸಮೃದ್ಧವಾಗಿದೆ. ಬಾಳೆಹಣ್ಣು ತಿನ್ನುವಾಗ ಹೆಚ್ಚು ನೀರು ಕುಡಿದರೆ ಗ್ಯಾಸ್ಟ್ರಿಕ್ ಜ್ಯೂಸ್ ಹೊಟ್ಟೆಯಲ್ಲಿ ಕರಗುತ್ತದೆ. ಈ ಕಾರಣದಿಂದಾಗಿ, ಚಯಾಪಚಯವು ನಿಧಾನಗೊಳ್ಳುತ್ತದೆ. ಹಾಗಾಗಿ ಬಾಳೆಹಣ್ಣು ತಿನ್ನುವಾಗ ನೀರು ಕುಡಿಯಬೇಡಿ ಎಂದು ತಜ್ಞರು ಸಲಹೆ ನೀಡುತ್ತಾರೆ.

ಗಮನಿಸಿ: ಈ ಮಾಹಿತಿಯನ್ನು ತಜ್ಞರು ಮತ್ತು ಅಧ್ಯಯನಗಳಿಂದ ಸಂಗ್ರಹಿಸಲಾಗಿದೆ. ಈ ಲೇಖನವು ಜಾಗೃತಿಗಾಗಿ ಮಾತ್ರ. ಯಾವುದೇ ಆರೋಗ್ಯ ಸಮಸ್ಯೆಗಳಿಗೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News