Watch: ಅಹೋರಾತ್ರಿ ಧರಣಿ, ಬೆಳಿಗ್ಗೆ ವಿಧಾನಸೌಧದ ಬಳಿಯೇ ವಾಕಿಂಗ್ ಮುಗಿಸಿದ ಬಿಜೆಪಿ ಶಾಸಕರು!

ಇಂದಾದರೂ ಬಹುಮತ ಸಾಬೀತು ಪಡಿಸುತ್ತಾ ಮೈತ್ರಿ ಸರ್ಕಾರ?

Last Updated : Jul 19, 2019, 08:45 AM IST
Watch: ಅಹೋರಾತ್ರಿ ಧರಣಿ, ಬೆಳಿಗ್ಗೆ ವಿಧಾನಸೌಧದ ಬಳಿಯೇ ವಾಕಿಂಗ್ ಮುಗಿಸಿದ ಬಿಜೆಪಿ ಶಾಸಕರು! title=
Pic Courtesy: ANI

ಬೆಂಗಳೂರು: ಗುರುವಾರ ವಿಶ್ವಾಸ ಮತಯಾಚನೆಗೆ ಸಮಯ ನಿಗದಿಯಾಗಿದ್ದರೂ, ವಿಶ್ವಾಸ ಮತಯಾಚನೆ ಮಾಡದೆ 'ವಿಪ್' ನೆಪ ಒಡ್ಡಿ ಕಾಲಹರಣ ಮಾಡಲಾಗಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಸರ್ಕಾರದ ವಿರುದ್ಧ ಬಿಜೆಪಿ ಶಾಸಕರು ಸದನದ ಸಭಾಂಗಣದಲ್ಲೇ ಅಹೋರಾತ್ರಿ ಧರಣಿ ನಡೆಸಿದ್ದಾರೆ. 

ಏತನ್ಮಧ್ಯೆ, ಮಧ್ಯಪ್ರವೇಶಿಸಿ ಬಹುಮತ ಸಾಬೀತಿಗೆ ಸೂಚನೆ ನೀಡುವಂತೆ ಗುರುವಾರ ಮಧ್ಯಾಹ್ನ ಬಿಜೆಪಿ ನಿಯೋಗ ರಾಜ್ಯಪಾಲರನ್ನು ಭೇಟಿಯಾಗಿತ್ತು. ಅದರಂತೆ ಇಂದು ಮಧ್ಯಾಹ್ನದೊಳಗೆ ಬಹುಮತ ಸಾಬೀತುಪಡಿಸಲು ರಾಜ್ಯಪಾಲ ವಾಜುಬಾಯಿ ವಾಲಾ ಮುಖ್ಯಮಂತ್ರಿಗಳಿಗೆ ಗಡುವು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್-ಜೆಡಿಎಸ್ ಸರ್ಕಾರಕ್ಕೆ ಇಂದು ಅಗ್ನಿಪರೀಕ್ಷೆ ಎದುರಾಗಿದೆ.

ರಾತ್ರಿಯಿಡೀ ವಿಧಾನಸಭೆಯಲ್ಲಿ ಬೀಡು ಬಿಟ್ಟಿದ್ದ ಬಿಜೆಪಿ ಶಾಸಕರು ಇಂದು ಬೆಳಿಗ್ಗೆ ವಿಧಾನಸೌಧದ ಬಳಿಯೇ ವಾಕ್ ಮುಗಿಸಿದರು.

ಬಿಜೆಪಿ ನಾಯಕರ ಅಹೋರಾತ್ರಿ ಧರಣಿ ಮತ್ತು ಮುಂಜಾನೆಯ ವಾಕಿಂಗ್ ಹೇಗಿತ್ತು: ಆ ದೃಶ್ಯಾವಳಿಗಳನ್ನೊಮ್ಮೆ ನೋಡಿ...

Trending News