ಚಾಮರಾಜನಗರ: ಹನೂರು ತಾಲೂಕಿನ ಪ್ರಸಿದ್ಧ ಧಾರ್ಮಿಕ ಸ್ಥಳವಾದ ಮಲೆ ಮಹದೇಶ್ವರ ಬೆಟ್ಟದಲ್ಲಿ ಕಡೆ ಕಾರ್ತಿಕ ಸೋಮವಾರದ ಪ್ರಯುಕ್ತ ವಿಶೇಷ ಪೂಜೆ ಸಂಪ್ರದಾಯದಂತೆ ನೆರವೇರಿತು.
ಕೊನೆಯ ಕಾರ್ತಿಕ ಸೋಮವಾರದ ಹಾಗೂ ಎಣ್ಣೆ ಮಜ್ಜನ ಪ್ರಯುಕ್ತ ದೇವಾಲಯದಲ್ಲಿ ಮುಂಜಾನೆಯಿಂದ ವಿಶೇಷ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ಬೆಳಗಲಾಯಿತು. ಕಾರ್ತಿಕ ಮಾಸದ ಕೊನೆಯ ದಿನವಾದ ಸೋಮವಾರ ಮಹಾ ಜ್ಯೋತಿ ದರ್ಶನ ರಾತ್ರಿ 9:30 ಇರಲಿದ್ದು ಲಕ್ಷಾಂತರ ಮಂದಿ ಭಕ್ತರು ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದಾರೆ.
ಕಾರ್ತಿಕ ಮಾಸದ ದೀಪೋತ್ಸವ ಹಿನ್ನೆಲೆಯಲ್ಲಿ ದೀಪದ ಗಿರಿ ಒಡ್ಡುಗೆ ಬಳಿ ಅಳವಡಿಸಲಾಗಿರುವ ಬೃಹತ್ ಹಣತೆಗೆ ಬಿಳಿ ಬಣ್ಣ ಬಳಿದು ಮೇಲ್ಭಾಗ ಚಪ್ಪರವನ್ನು ನಿರ್ಮಿಸಿ ತಳಿರು ತೋರಣಗಳಿಂದ ಸಿಂಗಾರ ಮಾಡಲಾಗಿದ್ದು ಇಂದು ರಾತ್ರಿ ಸಾಲೂರು ಬೃಹನ್ ಮಠದ ಪೀಠಾಧಿಪತಿ ಶಾಂತ ಮಲ್ಲಿಕಾರ್ಜುನ ಸ್ವಾಮಿ ಅವರ ಸಮ್ಮುಖದಲ್ಲಿ ಬೇಡಗಂಪಣ ಅರ್ಚಕರಿಂದ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಿದ್ದು ಬಳಿಕ ಮಹಾ ಜ್ಯೋತಿಯನ್ನು ಬೆಳಗಿಸಲಾಗುತ್ತದೆ.
ಇದನ್ನೂ ಓದಿ- ಸಂಜೆ 7 ಗಂಟೆಯ ನಂತರ ಈ 5 ಕೆಲಸಗಳನ್ನು ಮಾಡಿ, ನಿಮ್ಮ ಜೀವನ ಬದಲಾಗುತ್ತದೆ
ಈ ಮಹಾಜ್ಯೋತಿ ಕಾಣಲು ತಮಿಳುನಾಡು ಸೇರಿದಂತೆ ರಾಜ್ಯದ ನಾನಾಭಾಗಗಳಿಂದ ಲಕ್ಷಕ್ಕೂ ಅಧಿಕ ಮಂದಿ ಭಕ್ತರು ಭೇಟಿ ಕೊಟ್ಟಿದ್ದು ಪ್ರಾಧಿಕಾರದ ವತಿಯಿಂದ ಭಕ್ತರಿಗೆ ಕುಡಿಯುವ ನೀರು, ದಾಸೋಹ, ನೆರಳಿನ ವ್ಯವಸ್ಥೆ ಸೇರಿದಂತೆ ಇನ್ನಿತರ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ. ಇದಲ್ಲದೆ ಕ್ಷೇತ್ರಕ್ಕೆ ನಿರಂತರವಾಗಿ ಬರುತ್ತಿರುವ ಪಾದಯಾತ್ರಿಕರಿಗೆ ವಿಶೇಷ ಪಾಸ್ ಗಳನ್ನು ವಿತರಿಸಲಾಗುತ್ತಿದೆ. ದೀಪಾವಳಿ ಜಾತ್ರಾ ಮಹೋತ್ಸವದಿಂದ ಕಾರ್ತಿಕ ಮಾಸದವರೆಗೆ ಸುಮಾರು ಹದಿಮೂರು ಸಾವಿರ ಜನ ಪಾದಯಾತ್ರಿಕರು ಪಾದಯಾತ್ರೆ ಮೂಲಕ ಮಲೆ ಮಾದೇಶ್ವರ ದರ್ಶನ ಪಡೆದಿದ್ದಾರೆ.
ಪ್ರವೇಶ ದ್ವಾರ ದುರಸ್ತಿ:
ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟದಲ್ಲಿ ದರ್ಶನ ಪಡೆಯುವ ಭಕ್ತಾದಿಗಳಿಗೆ ಸೂಕ್ತ ಪ್ರವೇಶ ದ್ವಾರ ಇಲ್ಲದೆ ತೊಂದರೆಯಾಗುತ್ತಿತ್ತು. ಹಿನ್ನೆಲೆ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ರವರು ಗೇಟ್ ನಂಬರ್ ಎರಡರಲ್ಲಿ ಉಚಿತ ದರ್ಶನ, ಗೇಟ್ ನಂಬರ್ ಮೂರರಲ್ಲಿ ಸಚಿವರು ಶಾಸಕರು, ಇನ್ನಿತರರಿಂದ ಶಿಫಾರಸ್ಸು ಪತ್ರ ತರುವವರಿಗೆ ಗೇಟ್ ನಂಬರ್ ನಾಲ್ಕರಲ್ಲಿ ಅಂಗವಿಕಲರು ,ಗರ್ಭಿಣಿಯರು, ಬಾಣಂತಿಯರು, ವಯೋ ವೃದ್ಧರಿಗೆ , ಅತಿಥಿ ಗಣ್ಯರಿಗೆ ಸ್ವಾಮಿಯ ದರ್ಶನ ಪಡೆಯಲು ಸೂಕ್ತ ವ್ಯವಸ್ಥೆ ಕಲ್ಪಿಸಿದ್ದಾರೆ.
ಇದನ್ನೂ ಓದಿ- ಹಣಕ್ಕೆ ಸಂಬಂಧಿಸಿದ ಈ ಒಂದು ವಿಷಯ ನಿಮ್ಮನ್ನು ಕೋಟ್ಯಾಧೀಶರನ್ನಾಗಿ ಮಾಡುತ್ತೆ!
ಇನ್ನು, ಕಡೇ ಕಾರ್ತಿಕ ಸೋಮವಾರ ಪ್ರಯುಕ್ತ ದೇವಾಲಯಕ್ಕೆ ವಿವಿಧ ಬಗೆ ಫಲಪುಷ್ಪಗಳಿಂದ ಅಲಂಕಾರ ಮಾಡಲಾಗಿದ್ದು ಜೊತೆಗೆ ವಿದ್ಯುತ್ ದೀಪಲಂಕಾರ ಕೂಡ ಜಗಮಗಿಸುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://youtu.be/--phA9ji8NM
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.