Tea Disadvantage : ಬಹುತೇಕ ಪ್ರತಿಯೊಬ್ಬ ವ್ಯಕ್ತಿಯು ಪದೇ ಪದೇ ಟೀ ಕುಡಿಯುವುದಕ್ಕೆ ಇಷ್ಟಪಡುತ್ತಾರೆ. ಯಾವುದೇ ಸೀಸನ್ ಆಗಿರಲಿ, ದಿನ ಆರಂಭವಾಗುವುದೇ ಬೆಳಗ್ಗಿನ ಟೀ ನಿಂದ. ಆದರೆ ಚಳಿಗಾಲದಲ್ಲಿ ಈ ರೂಢಿ ಇನ್ನಷ್ಟು ಹೆಚ್ಚಾಗುತ್ತದೆ. ಜನರು ಬಿಸಿ ಟೀ ಕುಡಿಯುವುದರಿಂದ ದೇಹ ಬೆಚ್ಚಗೆ ಹಿಡಲು ಸಹಕಾರಿ ಎಂದು ಭಾವಿಸುತ್ತಾರೆ. ಆದರೆ ನೀವು ಪದೇ ಪದೇ ಟೀ ಅನ್ನು ಕುಡಿಯುತ್ತಿದ್ದರೆ ಎಚ್ಚರದಿಂದ ಇರುವುದು ಒಳ್ಳೆಯದು! ಏಕೆಂದರೆ ಟೀ ಆರೋಗ್ಯಕ್ಕೆ ಇದು ಅಪಾಯಕಾರಿ ಎಂದು ತಿಳಿದುಬಂದಿದೆ.
ತಜ್ಞರ ಪ್ರಕಾರ, ನೀವು ದಿನಕ್ಕೆ ಅನೇಕ ಬಾರಿ ಟೀ ಕುಡಿಯುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಏಕೆಂದರೆ ಇದರಲ್ಲಿ ಟ್ಯಾನಿನ್ ಎಂಬ ವಸ್ತುವು ದೇಹದಲ್ಲಿ ಕಬ್ಬಿಣದ ಕೊರತೆಯನ್ನು ಕಡಿಮೆ ಮಾಡುತ್ತದೆ, ಇದರಿಂದ ಅನೇಕ ರೋಗಕ್ಕೆ ಆಮಂತ್ರಣ ಕೊಟ್ಟಂತಾಗುತ್ತದೆ. ಅತಿಯಾದ ಟೀ ಕುಡಿವುದರಿಂದ ಜೀರ್ಣಕ್ರಿಯೆ ಹಾಳಾಗುತ್ತದೆ. ಹಾಗಾದ್ರೆ ಹೆಚ್ಚು ಟೀ ಕುಡಿಯುವುದರಿಂದ ದೇಹದಲ್ಲಿ ಯಾವ ಸಮಸ್ಯೆಗೆ ಎಡಮಾಡಿ ಕೊಟ್ಟಂತಾಗುತ್ತದೆ ಎನ್ನುವ ಮಾಹಿತಿ ಇಲ್ಲಿದೆ.
ಅತಿಯಾಗಿ ಟೀ ಕುಡಿಯುವುದರಿಂದ ದೇಹದ ಮೇಲೆ ಬೀರುವ ಪರಿಣಾಮಗಳು
ಹೊಟ್ಟೆಗೆ ಸಂಬಂಧಿಸಿ ಸಮಸ್ಯೆಗಳು
ನಾವು ಪ್ರತಿ ದಿನ ಟೀ ಕುಡಿಯುವುದು ಕಾಮನ್, ಆದರೆ ಇತ್ತೀಚೆಗೆ ಚಳಿಗಾಲ ಪ್ರಾರಂಭವಾಗಿರುವುದರಿಂದ ಬೆಚ್ಚಗಿನ ಅನುಭವ ಪಡೆಯುವ ಉದ್ದೇಶದಿಂದ ಮಿತಿಗೆ ಮೀರಿದ್ದಕ್ಕೂ ಜಾಸ್ತಿನೇ ಟೀ ಕುಡಿಯಲು ಶುರುಮಾಡಿದ್ದೇವೆ. ಈ ರೀತಿ ಕುಡಿಯುವುದರಿಂದ ಹೊಟ್ಟೆಗೆ ಸಂಬಂಧಿಸಿದ ಅನೇಕ ಕಾಯಿಲೆ ಕಾಣಿಸಿಕೊಳ್ಳುತ್ತವೆ. ಇದರಿಂದ ಅಸಿಡಿಟಿ ಮಲಬದ್ಧತೆಯಂತಹ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಹೆಚ್ಚು.
ಇದನ್ನೂ ಓದಿ: ಪಪ್ಪಾಯಿ ಎಲ್ಲರಿಗೂ ಒಳ್ಳೆಯದಲ್ಲ, ಈ ಸಮಸ್ಯೆಯಿದ್ದರೆ ತಪ್ಪಿಯೂ ತಿನ್ನಬೇಡಿ
ದೇಹದ ಮೇಲಾಗುವ ಸಮಸ್ಯೆಗಳು
ಟೀಯಲ್ಲಿರುವ ಕೇಫಿನ್ ದೇಹದಲ್ಲಿ ಅನೇಕ ಸಮಸ್ಯೆಗಳಿಗೆ ದಾರಿ ಉಂಟು ಮಾಡಿಕೊಟ್ಟಂತಾಗುತ್ತದೆ. ಅಲ್ಲದೇ ನಿದ್ರಾಹೀನತೆ, ಆಯಾಸ ಮತ್ತು ದೌರ್ಬಲ್ಯದಂತಹ ಸಮಸ್ಯೆಗಳನ್ನು ಎದುರಿಸಬೇಕಾಗುವ ಸಾಧ್ಯತೆ ಹೆಚ್ಚಿದೆ. ಅತಿಯಾಗಿ ಟೀ ಕುಡಿಯುವುದರಿಂದ ವಾಕರಿಕೆಯಂತಹ ಸಮಸ್ಯೆ ಜೊತೆಗೆ ಇದರಿಂದ ವಾಂತಿ ಆಗುವ ಸಾಧ್ಯತೆಯೇ ಹೆಚ್ಚು. ಅಧಿಕ ಪ್ರಮಾಣದಲ್ಲಿ ಟೀ ಸೇವಿಸುವುದರಿಂದ ದೇಹದಲ್ಲಿ ನೀರಿನ ಸಮಸ್ಯೆ ಉಂಟಾಗುತ್ತದೆ, ಏಕೆಂದರೆ ಟೀ ಸೇವನೆಯು ಹೆಚ್ಚು ಮೂತ್ರಕ್ಕೆ ಕಾರಣವಾಗುತ್ತದೆ. ಇದೆ ಕಾರಣಕ್ಕೆ ಹೆಚ್ಚು ಆಯಾಸ ಆಗುವುದು.
ದುರ್ವಾಸನೆ ಹೊಡೆಯುವ ಸಾಧ್ಯತೆ
ಚಳಿಗಾಲದಲ್ಲಿ ಬಹುತೇಕರು ಅಧಿಕ ಪ್ರಮಾಣದಲ್ಲಿ ಟೀ ಕುಡಿಯಲು ಇಷ್ಟಪಡುತ್ತಾರೆ. ಆದರೆ ಟೀ ಕುಡಿಯುವವರಿಗೆ ಅದು ತಿಳಿಯದು ಹೆಚ್ಚು ಟೀ ಕುಡಿಯುವುದರಿಂದ ಬಾಯಿಂದ ದುರ್ವಾಸನೆಯಂತಹ ಸಮಸ್ಯೆಗಳು ಎದುರಾಗುತ್ತದೆ ಎಂದು. ಇದರೊಂದಿಗೆ ಅನೇಕ ಗಂಭೀರ ಅಪಾಯವಾಗುವ ಸಾಧ್ಯತೆ ಇವೆ. ಹಾಗಾಗಿ ಚಳಿಗಾಲದಲ್ಲಿ ಪದೇ ಪದೇ ಟೀ ಕುಡಿಯುವ ಅಭ್ಯಾಸವನ್ನು ಖಡಿತಗೊಳಿಸುವುದು ಆದಷ್ಟು ಒಳ್ಳೆಯದು.
( ಸೂಚನೆ : ಈ ಲೇಖನವು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಝೀ ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. )
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://youtu.be/--phA9ji8NM
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.