18 ವರ್ಷಕ್ಕೆ ವಿವಾಹ, 20 ವರ್ಷಕ್ಕೆ ಮಗು: 2 ಮದುವೆ, 2 ವಿಚ್ಛೇದನ.. ಲೈಫಲ್ಲಿ ನೋವಿದ್ರೂ ಈಗ ಈಕೆ ಸೂಪರ್ ಸ್ಟಾರ್ ನಟಿ

Shweta Tiwari: ಇಂದು ನಾವು ಇಲ್ಲಿ ಮಾತನಾಡುತ್ತಿರುವ ನಟಿಯ ಬೇರಾರು ಅಲ್ಲ, ಶ್ವೇತಾ ತಿವಾರಿ. ಧಾರಾವಾಹಿಗಳಲ್ಲಿ ಅದ್ಭುತವಾಗಿ ನಟಿಸುತ್ತಿದ್ದ ನಟಿ ಸಿನಿಮಾಗಳಲ್ಲೂ ತಮ್ಮ ನಟನಾ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ.

Written by - Bhavishya Shetty | Last Updated : Dec 15, 2023, 08:22 PM IST
    • ಅನೇಕ ನಟಿಯರು ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿರುತ್ತಾರೆ
    • ಧಾರಾವಾಹಿಗಳಲ್ಲಿ ಅದ್ಭುತವಾಗಿ ನಟಿಸುತ್ತಿದ್ದ ನಟಿ
    • ಶ್ವೇತಾ ತಿವಾರಿ ಭೋಜ್‌ಪುರಿ ಸಿನಿಉದ್ಯಮದಲ್ಲಿ ಸಾಕಷ್ಟು ಹೆಸರು ಗಳಿಸಿದ್ದರು
18 ವರ್ಷಕ್ಕೆ ವಿವಾಹ, 20 ವರ್ಷಕ್ಕೆ ಮಗು: 2 ಮದುವೆ, 2 ವಿಚ್ಛೇದನ.. ಲೈಫಲ್ಲಿ ನೋವಿದ್ರೂ ಈಗ ಈಕೆ ಸೂಪರ್ ಸ್ಟಾರ್ ನಟಿ  title=
shweta tiwari

Shweta Tiwari: ಬಾಲಿವುಡ್ ಮತ್ತು ಟಿವಿ ಲೋಕದ ಅನೇಕ ನಟಿಯರು ನಟನಾ ಜಗತ್ತಿನಲ್ಲಿ ಸಾಕಷ್ಟು ಹೆಸರು ಗಳಿಸಿದ್ದಾರೆ. ಆದರೆ ಪರದೆ ಮೇಲೆ ನಗುತ್ತಾ ಕಾಣಿಸಿಕೊಳ್ಳುವ ಇವರು ತಮ್ಮ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿರುತ್ತಾರೆ. ಅಂತೆಯೇ ಇಲ್ಲೊಬ್ಬ ನಟಿ ವೃತ್ತಿ ಜೀವನದಲ್ಲಿ ಯಶಸ್ಸು ಮತ್ತು ಖ್ಯಾತಿಯ ಉತ್ತುಂಗಕ್ಕೇರಿದ್ದರೂ, ವೈಯಕ್ತಿಕ ಜೀವನದಲ್ಲಿ ಇನ್ನೂ ಒಂಟಿಯಾಗಿದ್ದಾರೆ.

ಇದನ್ನೂ ಓದಿ: ಪತಿ, ಮಕ್ಕಳು ಇರುವಾಗಲೇ ಬೇರೊಬ್ಬರ ಜೊತೆ ಅಕ್ರಮ ಸಂಬಂಧ ಬೆಳೆಸಿದ ಸೆಲೆಬ್ರಿಟಿಗಳು

ಇಂದು ನಾವು ಇಲ್ಲಿ ಮಾತನಾಡುತ್ತಿರುವ ನಟಿಯ ಬೇರಾರು ಅಲ್ಲ, ಶ್ವೇತಾ ತಿವಾರಿ. ಧಾರಾವಾಹಿಗಳಲ್ಲಿ ಅದ್ಭುತವಾಗಿ ನಟಿಸುತ್ತಿದ್ದ ನಟಿ ಸಿನಿಮಾಗಳಲ್ಲೂ ತಮ್ಮ ನಟನಾ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ.

ಶ್ವೇತಾ ತಿವಾರಿ ಅವರು ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದಾಗ ಕೇವಲ 12 ವರ್ಷ ವಯಸ್ಸಾಗಿತ್ತು. ಬಾಲಿವುಡ್ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸುವ ಮೊದಲು, ಶ್ವೇತಾ ತಿವಾರಿ ಭೋಜ್‌ಪುರಿ ಸಿನಿಉದ್ಯಮದಲ್ಲಿ ಸಾಕಷ್ಟು ಹೆಸರು ಗಳಿಸಿದ್ದರು.

ಭೋಜ್‌ಪುರಿ ಉದ್ಯಮದಲ್ಲಿ ಕೆಲಸ ಮಾಡುತ್ತಿರುವಾಗ, ನಿರ್ದೇಶಕ ರಾಜಾ ಚೌಧರಿ ಅವರೊಂದಿಗೆ ಶ್ವೇತಾ ತಿವಾರಿ ಸಂಬಂಧ ಬೆಳೆದಿತ್ತು. ಆ ಬಳಿಕ ಕೇವಲ 18 ನೇ ವಯಸ್ಸಿನಲ್ಲಿ ಅವರನ್ನು ವಿವಾಹವಾದರು. ಈ ಮದುವೆಗೆ ನಟಿಯ ಮನೆಯವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಎಲ್ಲರ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗದರು.

2007 ರಲ್ಲಿ ರಾಜಾ ಚೌಧರಿಯಿಂದ ವಿಚ್ಛೇದನ ಪಡೆದರು. ಅದಾದ ಬಳಿಕ ತಮ್ಮ ಮಗಳು ಪಾಲಕ್ ಜೊತೆ ವರ್ಷಗಳ ಕಾಲ ಒಬ್ಬಂಟಿಯಾಗಿ ಜೀವನ ನಡೆಸಿದರು. ಆದರೆ 2012 ರಲ್ಲಿ ಅಭಿನವ್ ಕೊಹ್ಲಿ ಶ್ವೇತಾ ಜೀವನದಲ್ಲಿ ಎಂಟ್ರಿ ಪಡೆದರು.

ಇದನ್ನೂ ಓದಿ: ರೋಹಿತ್ ಶರ್ಮಾ 10 ವರ್ಷಗಳ ನಾಯಕತ್ವ ಅಂತ್ಯ: ಮುಂಬೈ ಇಂಡಿಯನ್ಸ್’ಗೆ ಹಾರ್ದಿಕ್ ಪಾಂಡ್ಯ ನೂತನ ನಾಯಕ

2013 ರಲ್ಲಿ ಅಭಿನವ್ ಕೊಹ್ಲಿಯನ್ನು ಎರಡನೇ ಬಾರಿಗೆ ಮದುವೆಯಾದ ಶ್ವೇತಾ, ಗಂಡು ಮಗುವಿಗೆ ಜನ್ಮ ನೀಡಿದರು. ಆದರೆ 2019 ರಲ್ಲಿ ಅಭಿನವ್ ಕೊಹ್ಲಿಯಿಂದಲೂ ವಿಚ್ಛೇದನ ಪಡೆದರು. ಇದೀಗ ತನ್ನ ಇಬ್ಬರು ಮಕ್ಕಳನ್ನು ಒಂಟಿ ತಾಯಿಯಾಗಿ ಶ್ವೇತಾ ನೋಡಿಕೊಳ್ಳುತ್ತಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News