Hardik Pandya Replaces Rohit Sharma: ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡವೆಂದು ಪರಿಗಣಿಸಲ್ಪಟ್ಟ ಮುಂಬೈ ಇಂಡಿಯನ್ಸ್, ಐಪಿಎಲ್ 2024ರ ಋತುವಿಗೆ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನಾಗಿ ಘೋಷಿಸಿದೆ. ಇದರೊಂದಿಗೆ ತಂಡದಲ್ಲಿ ರೋಹಿತ್ ಶರ್ಮಾ ಕ್ಯಾಪ್ಟನ್ಸಿ ಯುಗ ಅಂತ್ಯಗೊಂಡಿದೆ.
ಇದನ್ನೂ ಓದಿ: ಕಾರುಗಳ ನಡುವೆ ಭೀಕರ ಅಪಘಾತ: ತಲೆಗೆ ಗಂಭೀರ ಪೆಟ್ಟುಬಿದ್ದು MLC ನಿಧನ
ಈ ಬದಲಾವಣೆಯನ್ನು ಪ್ರಕಟಿಸಿದ ಮುಂಬೈ ಇಂಡಿಯನ್ಸ್’ನ ಗ್ಲೋಬಲ್ ಆಫ್ ಪರ್ಫಾರ್ಮೆನ್ಸ್ ಮುಖ್ಯಸ್ಥ ಮಹೇಲಾ ಜಯವರ್ಧನೆ, “ಇದು ಮುಂಬೈ ಇಂಡಿಯನ್ಸ್’ನ ಪರಂಪರೆಯನ್ನು ಬಲಪಡಿಸುವ ಮತ್ತು ಭವಿಷ್ಯಕ್ಕಾಗಿ ತಯಾರಿ ಮಾಡುವ ಒಂದು ಭಾಗವಾಗಿದೆ” ಎಂದು ಹೇಳಿದರು.
ಮುಂಬೈ ಇಂಡಿಯನ್ಸ್ ತಂಡ ಸಚಿನ್’ನಿಂದ ಹರ್ಭಜನ್ ಮತ್ತು ರಿಕಿಯಿಂದ ರೋಹಿತ್’ವರೆಗೆ ಅಸಾಧಾರಣ ನಾಯಕರನ್ನು ಕಂಡಿದೆ. ಇದೀಗ, ಹಾರ್ದಿಕ್ ಪಾಂಡ್ಯ IPL 2024 ಋತುವಿಗಾಗಿ ಮುಂಬೈ ಇಂಡಿಯನ್ಸ್ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ.
ಕಳೆದ ಎರಡು ಋತುಗಳಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿ ಹಾರ್ದಿಕ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಗುಜರಾತ್ ತನ್ನ ಚೊಚ್ಚಲ ಋತುವಿನಲ್ಲೇ ಹಾರ್ದಿಕ್ ನಾಯಕತ್ವದಲ್ಲಿ ಪ್ರಶಸ್ತಿ ಗೆದ್ದುಕೊಂಡಿತ್ತು. ಇನ್ನು 2ನೇ ಸೀಸನ್’ನಲ್ಲಿ ಫೈನಲ್’ವರೆಗೆ ತಂಡ ಪ್ರಯಾಣಿಸಿತ್ತು.
ಹಾರ್ದಿಕ್ ನಾಯಕತ್ವದಲ್ಲಿ ಹೊಸ ಅಧ್ಯಾಯ:
ಈ ಬದಲಾವಣೆ ಮುಂಬೈ ಇಂಡಿಯನ್ಸ್ ಅಭಿಮಾನಿಗಳಲ್ಲಿ ಕುತೂಹಲವನ್ನು ಸೃಷ್ಟಿಸಿದೆ. ರೋಹಿತ್ ಶರ್ಮಾ ರೂಪದಲ್ಲಿ ಯಶಸ್ವಿ ನಾಯಕನ ನಿರ್ಗಮನದೊಂದಿಗೆ, ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ತಂಡದ ಹೊಸ ಅಧ್ಯಾಯ ಪ್ರಾರಂಭವಾಗುತ್ತಿದೆ.
ಇದನ್ನೂ ಓದಿ: “ನನಗೆ ‘ಅದು’ ಬೇಕು… ಆದ್ರೆ ನನ್ನ ಗಂಡ ಸಹಕರಿಸುತ್ತಿಲ್ಲ…”-ಪುಷ್ಪಾ ನಟಿ ಅನಸೂಯ ಬೇಸರ
ಐಪಿಎಲ್’ನ ಅತ್ಯಂತ ಯಶಸ್ವಿ ತಂಡ:
ಮುಂಬೈ ಇಂಡಿಯನ್ಸ್ ಐಪಿಎಲ್’ನ ಅತ್ಯಂತ ಯಶಸ್ವಿ ತಂಡವೆಂದು ಪರಿಗಣಿಸಲ್ಪಟ್ಟಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಈ ತಂಡ ಐದು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿದೆ. ಅಷ್ಟೇ ಅಲ್ಲದೆ, ಮುಂಬೈ 10 ಬಾರಿ ಪ್ಲೇಆಫ್ ಟಿಕೆಟ್ ಕಾಯ್ದಿರಿಸಿದೆ. ತಂಡವು 2013 ರಲ್ಲಿ ತನ್ನ ಮೊದಲ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದಾದ ಬಳಿಕ 2015, 2017, 2019 ಮತ್ತು 2020ರಲ್ಲಿ ಪ್ರಶಸ್ತಿ ಗೆದ್ದುಕೊಂಡಿತ್ತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ