UV Lamp: ಗ್ಯಾಜೆಟ್ಸ್ ಮೇಲಿರುವ ಬ್ಯಾಕ್ಟೀರಿಯಾ, ವೈರಸ್‌ಗಳನ್ನು ಕ್ಷಣಾರ್ಧದಲ್ಲಿ ಕೊಲ್ಲುತ್ತೆ ಈ ಯುವಿ ಲೈಟ್

UV Lamp: ಹಲವು ಪ್ರಮುಖ ಉದ್ದೇಶಗಳಿಗಾಗಿ ಬಳಸಲ್ಪಡುವ ಯುವಿ ಲೈಟ್ ಕೊರೊನಾವೈರಸ್ ವಿರುದ್ಧ ಹೋರಾಡುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನಿಮಗೆ ತಿಳಿದಿದೆಯೇ? 

Written by - Yashaswini V | Last Updated : Dec 24, 2023, 07:55 AM IST
  • ಕೊರೊನಾವೈರಸ್ ನಿಂದ ರಕ್ಷಣೆ ಪಡೆಯಲು ಮಾಸ್ಕ್ ಧರಿಸುವುದರ ಜೊತೆಗೆ, ಸ್ಯಾನಿಟೈಸರ್ ಬಳಸುವುದು ಸಹ ಬಹಳ ಮುಖ್ಯ.
  • ಆದಾಗ್ಯೂ, ನಾವು ಬಳಸುವ ಲ್ಯಾಪ್‌ಟಾಪ್, ಸ್ಮಾರ್ಟ್‌ಫೋನ್‌ಗಳಂತಹ ಸಾಧನಗಳ ಮೇಲ್ಮೈನಲ್ಲೂ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ಅಂಟಿಕೊಳ್ಳುತ್ತವೆ.
  • ಇವುಗಳಿಂದಲೂ ಕರೋನಾ ಅಪಾಯ ಹೆಚ್ಚಾಗಬಹುದು ಎಂಬುದನ್ನು ನಿರ್ಲಕ್ಷಿಸುವಂತಿಲ್ಲ.
UV Lamp: ಗ್ಯಾಜೆಟ್ಸ್ ಮೇಲಿರುವ ಬ್ಯಾಕ್ಟೀರಿಯಾ, ವೈರಸ್‌ಗಳನ್ನು ಕ್ಷಣಾರ್ಧದಲ್ಲಿ ಕೊಲ್ಲುತ್ತೆ ಈ ಯುವಿ ಲೈಟ್  title=

UV Lamp: ಇತ್ತೀಚಿನ ದಿನಗಳಲ್ಲಿ ಕೋವಿಡ್-19 ಮತ್ತೆ ವೇಗವಾಗಿ ಹೆಚ್ಚಾಗುತ್ತಿದೆ. ಪ್ರಸ್ತುತ ಭರತದಲ್ಲಿ ಕೊರೊನಾ ಹೊಸ ತಳಿ ಜೆ‌ಎನ್ 1 ಉಲ್ಬಣಗೊಳ್ಳುತ್ತಿರುವುದು ಜನರಲ್ಲಿ ಆತಂಕ ಹೆಚ್ಚಿಸಿದೆ. ಕೊರೊನಾವೈರಸ್ ನಿಂದ ರಕ್ಷಣೆ ಪಡೆಯಲು ಮಾಸ್ಕ್ ಧರಿಸುವುದರ ಜೊತೆಗೆ, ಸ್ಯಾನಿಟೈಸರ್ ಬಳಸುವುದು ಸಹ ಬಹಳ ಮುಖ್ಯ. ಆದಾಗ್ಯೂ, ನಾವು ಬಳಸುವ ಲ್ಯಾಪ್‌ಟಾಪ್, ಸ್ಮಾರ್ಟ್‌ಫೋನ್‌ಗಳಂತಹ ಸಾಧನಗಳ ಮೇಲ್ಮೈನಲ್ಲೂ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ಅಂಟಿಕೊಳ್ಳುತ್ತವೆ. ಇವುಗಳಿಂದಲೂ ಕರೋನಾ ಅಪಾಯ ಹೆಚ್ಚಾಗಬಹುದು ಎಂಬುದನ್ನು ನಿರ್ಲಕ್ಷಿಸುವಂತಿಲ್ಲ. ಆದಾಗ್ಯೂ, ಚಿಂತಿಸುವ ಅಗತ್ಯವಿಲ್ಲ. ಈ ಲೇಖನದಲ್ಲಿ ನಾವು ನಿಮಗೆ ಗ್ಯಾಜೆಟ್ ಗಳ ಮೇಲ್ಮೈನಲ್ಲಿರುವ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳನ್ನು ತೊಡೆದುಹಾಕಬಲ್ಲ ಶಕ್ತಿಶಾಲಿ ಸಾಧನದ ಬಗ್ಗೆ ಮಾಹಿತಿ ನೀಡಲಿದ್ದೇವೆ. 

ವಾಸ್ತವವಾಗಿ, ಹಲವು ಪ್ರಮುಖ ಉದ್ದೇಶಗಳಿಗಾಗಿ ಬಳಸಲ್ಪಡುವ ಯುವಿ ಲೈಟ್ ಕೊರೊನಾವೈರಸ್ ವಿರುದ್ಧ ಹೋರಾಡುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನಿಮಗೆ ತಿಳಿದಿದೆಯೇ? ಇದು ನಿಮ್ಮ ಸಾಧನಗಳಲ್ಲಿ ಅಂಟಿಕೊಂಡಿರುವ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳಿಂದ ನಿಮ್ಮನ್ನು ರಕ್ಷಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. 

ಹೌದು, ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿರುವ ಯುವಿ ಲೈಟ್ ಎಂದರೆ ನೇರಳಾತೀತ ದೀಪಗಳ ಸಹಾಯದಿಂದ ನೀವು ನಿಮ್ಮ ಗ್ಯಾಜೆಟ್ ಗಳ ಮೇಲ್ಮೈನಲ್ಲಿ ಅಂಟಿಕೊಂಡಿರುವ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳನ್ನು ಕೆಲವೇ ಸೆಕೆಂಡುಗಳಲ್ಲಿ ಸಂಪೂರ್ಣವಾಗಿ ನಾಶಪಡಿಸಬಹುದು.  

ಇದನ್ನೂ ಓದಿ- 2023ರಲ್ಲಿ ಬಿಡುಗಡೆಯಾದ ಅತ್ಯುತ್ತಮ 5G ಸ್ಮಾರ್ಟ್‌ಫೋನ್‌ಗಳು ಇವು ! ವೈಶಿಷ್ಟ್ಯದಲ್ಲಿಯೂ ಟಾಪ್! ಬೆಲೆಯೂ ಅಗ್ಗ !

ಏನಿದು ಯುವಿ ಲ್ಯಾಂಪ್: 
ಯುವಿ ಲ್ಯಾಂಪ್, ನೆರಳಾತೀತ ಬೆಳಕು ಎಂತೆಲ್ಲಾ ಕರೆಯಲ್ಪಡುವ ಯುವಿ ಲೈಟ್ ಮಾನವನ ಕಣ್ಣಿಗೆ ಗೋಚರಿಸದ ಸೂರ್ಯನ ಬೆಳಕಿನ ಭಾಗವಾಗಿದೆ. ಇದು ವಿದ್ಯುತ್ಕಾಂತೀಯ ವರ್ಣಪಟಲದಲ್ಲಿ ಗೋಚರ ಬೆಳಕಿಗಿಂತ ಹೆಚ್ಚು ಶಕ್ತಿಯುತವಾಗಿದೆ. ನೀರು, ಗಾಳಿ, ಮೇಲ್ಮೈಗಳು ಮತ್ತು ಉಪಕರಣಗಳನ್ನು ಸೋಂಕುರಹಿತಗೊಳಿಸಲು ಇದನ್ನು ಬಳಸಲಾಗುತ್ತದೆ. ಪ್ರಮುಖವಾದ ವಿಷಯವೆಂದರೆ, ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳನ್ನು ನಾಶಪಡಿಸಲು ಯುವಿ ಲೈಟ್ ಅನ್ನು ಹಲವು ವಿಧಗಳಲ್ಲಿ ಬಳಸಬಹುದು. ಇದನ್ನು ಪ್ರಮುಖವಾಗಿ, ಆಸ್ಪತ್ರೆಗಳು, ಚಿಕಿತ್ಸಾಲಯಗಳು, ಆಹಾರ ಉದ್ಯಮ ಮತ್ತು ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳಿಂದ ಸೋಂಕಿನ ಅಪಾಯವಿರುವ ಇತರ ಸ್ಥಳಗಳಲ್ಲಿ ಬಳಸಲಾಗುತ್ತದೆ.

ಎರಡು ರೀತಿಯಲ್ಲಿ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳನ್ನು ನಾಶಪಡಿಸುತ್ತೆ ಯುವಿ ಲೈಟ್: 
ಯುವಿ ಲೈಟ್ ನಲ್ಲಿ ಎರಡು ವಿಧಗಳಿವೆ: UV-A ಮತ್ತು UV-B. UV-A ಬೆಳಕಿನ ತರಂಗಾಂತರವು 320 ರಿಂದ 400 ನ್ಯಾನೊಮೀಟರ್‌ಗಳ ನಡುವೆ ಇದ್ದರೆ, UV-B ಬೆಳಕಿನ ತರಂಗಾಂತರವು 290 ರಿಂದ 320 ನ್ಯಾನೊಮೀಟರ್‌ಗಳ ನಡುವೆ ಇರುತ್ತದೆ.
ಈ ಯುವಿ ಲೈಟ್ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳನ್ನು ಎರಡು ರೀತಿಯಲ್ಲಿ ನಾಶಪಡಿಸುತ್ತದೆ. ಅವುಗಳೆಂದರೆ... 

ಡಿಎನ್‌ಎ ಮತ್ತು ಆರ್‌ಎನ್‌ಎಗೆ ಹಾನಿ:- 
ಯುವಿ ಲೈಟ್   ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ಡಿಎನ್‌ಎ ಮತ್ತು ಆರ್‌ಎನ್‌ಎ ಎಳೆಗಳನ್ನು ಒಡೆಯುವ ಸಾಮರ್ಥ್ಯವನ್ನು ಹೊಂದಿದ್ದು, ಇದು ಅವುಗಳ  ಸಂತಾನೋತ್ಪತ್ತಿಯನ್ನು ತಡೆಯುತ್ತದೆ.  ಮಾತ್ರವಲ್ಲ, ಅವುಗಳ ಬದುಕುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. 

ಇದನ್ನೂ ಓದಿ- ನಿಮ್ಮ ಫೋನ್ ನಲ್ಲಿ ಈ ಆಪ್ ಗಳಿದ್ದರೆ ಲೀಕ್ ಆಗುತ್ತದೆ ಎಲ್ಲಾ ಪರ್ಸನಲ್ ಫೋಟೋಗಳು !

ಪ್ರೋಟೀನ್‌ಗಳಿಗೆ ಹಾನಿ:- 
ಯುವಿ ಲೈಟ್ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ಪ್ರೋಟೀನ್‌ಗಳ ಮೇಲೆ ದಾಳಿ ಮಾಡುವ ಮೂಲಕ ಅವುಗಳ ಕಾರ್ಯಗಳನ್ನು ಅಡ್ಡಿಪಡಿಸುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News