“ಆಕೆ ನನ್ನನ್ನು ಸಾಯಿಸಿತ್ತಾಳೆ”- ಮದುವೆಯಾಗಿ ವರ್ಷವಾಗ್ತಿದ್ದಂತೆ ಪತ್ನಿ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಕೆಎಲ್ ರಾಹುಲ್

KL Rahul statement: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ಕೆ ಎಲ್ ರಾಹುಲ್ ಮತ್ತು ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಕಳೆದ ವರ್ಷ ಜನವರಿ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಂದಹಾಗೆ ಪ್ರಸ್ತುತ ರಾಹುಲ್ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಆಡುತ್ತಿದ್ದಾರೆ.

Written by - Bhavishya Shetty | Last Updated : Jan 1, 2024, 08:12 PM IST
    • ಭಾರತದ ವಿಕೆಟ್ ಕೀಪರ್ ಕಂ ಬ್ಯಾಟರ್ ಕೆಎಲ್ ರಾಹುಲ್
    • ರಾಹುಲ್ ಮತ್ತು ಅಥಿಯಾ ಶೆಟ್ಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ
    • ರಾಹುಲ್‌’ಗೆ ಪತ್ನಿ ಅಥಿಯಾ ಶೆಟ್ಟಿ ಅವರಿಂದ ಸಾಕಷ್ಟು ಬೆಂಬಲ ಸಿಕ್ಕಿತು.
“ಆಕೆ ನನ್ನನ್ನು ಸಾಯಿಸಿತ್ತಾಳೆ”- ಮದುವೆಯಾಗಿ ವರ್ಷವಾಗ್ತಿದ್ದಂತೆ ಪತ್ನಿ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಕೆಎಲ್ ರಾಹುಲ್ title=
KL Rahul statement about Athiya

KL Rahul statement: ಭಾರತದ ವಿಕೆಟ್ ಕೀಪರ್ ಕಂ ಬ್ಯಾಟರ್ ಕೆಎಲ್ ರಾಹುಲ್ ತಮ್ಮ ಪತ್ನಿಯಿಂದ ಈ ಒಂದು ವಿಷಯವನ್ನು ಮುಚ್ಚಿಟ್ಟಿದ್ದಾರಂತೆ, ಒಂದು ವೇಳೆ ಈ ರಹಸ್ಯ ಗೊತ್ತಾದರೆ, ಆಕೆ ನನ್ನನ್ನು ಸಾಯಿಸಿಬಿಡುತ್ತಾಳೆ ಎಂದು ಸ್ವತಃ ಅವರೇ ಹೇಳಿದ್ದಾರೆ.

ಇದನ್ನೂ ಓದಿ: 2024ರ ಟಿ20 ವಿಶ್ವಕಪ್’ನಲ್ಲಿ ಯಾರಿಲ್ಲದಿದ್ದರೂ ಈ ನಾಲ್ವರು ಇದ್ದೇ ಇರ್ತಾರೆ… ಇವರಿಗೆ ಸ್ಥಾನ ಖಚಿತ!

ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ಕೆ ಎಲ್ ರಾಹುಲ್ ಮತ್ತು ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಕಳೆದ ವರ್ಷ ಜನವರಿ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಂದಹಾಗೆ ಪ್ರಸ್ತುತ ರಾಹುಲ್ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಆಡುತ್ತಿದ್ದಾರೆ.

31ರ ಹರೆಯದ ಕೆಎಲ್ ರಾಹುಲ್ ಇತ್ತೀಚೆಗಷ್ಟೇ ಗಾಯಕ್ಕೆ ತುತ್ತಾಗಿದ್ದರಿಂದ ಚೇತರಿಸಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಂಡಿದ್ದರು. ಈ ಅವಧಿಯಲ್ಲಿ ರಾಹುಲ್‌’ಗೆ ಪತ್ನಿ ಅಥಿಯಾ ಶೆಟ್ಟಿ ಅವರಿಂದ ಸಾಕಷ್ಟು ಬೆಂಬಲ ಸಿಕ್ಕಿತು.

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ಶತಕ ಸಿಡಿಸಿದ್ದು, ಈ ಪಂದ್ಯದಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದರೆ, ಇನಿಂಗ್ಸ್ ಮತ್ತು 32 ರನ್‌’ಗಳಿಂದ ಭಾರತದ ಸೋಲನ್ನು ತಪ್ಪಿಸಲು ಸಾಧ್ಯವಾಗಲಿಲ್ಲ. ಇದರ ಹೊರತಾಗಿಯೂ, ಅನುಭವಿ ಸುನಿಲ್ ಗವಾಸ್ಕರ್ ಅವರು ಟೆಸ್ಟ್ ಕ್ರಿಕೆಟ್‌’ನಲ್ಲಿ ಭಾರತದ ಅಗ್ರ 10 ಶತಕಗಳಲ್ಲಿ ರಾಹುಲ್ ಶತಕವನ್ನು ಸೇರಿಸಿ ಮೆಚ್ಚುಗೆ ಸೂಚಿಸಿದ್ದರು.

ಸ್ಟಾರ್ ಸ್ಪೋರ್ಟ್ಸ್‌’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಾಹುಲ್, “ಅಥಿಯಾ ಕಷ್ಟದ ಸಮಯದಲ್ಲಿ ನನ್ನೊಂದಿಗೆ ಇದ್ದಳು. ಯಾವಾಗಲೂ ಇರುತ್ತಾಳೆ. ಹೆಚ್ಚಿನ ದಿನಗಳಲ್ಲಿ ನನಗಿಂತ ಹೆಚ್ಚು ಕೋಪಗೊಳ್ಳೋದು ಅವರು, ಆಗ ನಾನು ಆಕೆಯನ್ನು ಸಮಾಧಾನ ಪಡಿಸುತ್ತಿದ್ದೆ. ಆದರೆ ಅಂತಹ ಪರಿಸ್ಥಿತಿ ನಾನು ಎದುರಿಸಿದ್ದನ್ನು ಅಥಿಯಾ ನೋಡಿದ್ದು ಅದೇ ಮೊದಲು” ಎಂದಿದ್ದಾರೆ.

“ನಮ್ಮಿಬ್ಬರಿಗೂ ಕಷ್ಟವಾಗಿತ್ತು. ಆದರೆ ನಮಗೆ ಬೇಕಾದ ಸಮಯವನ್ನೂ ನೀಡುತ್ತಿದ್ದೆ,  ನೆಗೆಟಿವಿಟಿ ಇದ್ದರೂ ಸಹ,  ಸಂತೋಷದಿಂದ ಜೀವನದಲ್ಲಿ ಸಣ್ಣಪುಟ್ಟ ವಿಷಯಗಳನ್ನು ಆನಂದಿಸಿದೆ. ಈ ಸಮಯದಲ್ಲಿ ನನ್ನ ಜೊತೆ ನನ್ನ ಪತ್ನಿ ಸಮಯ ಕಳೆಯುತ್ತಿದ್ದಳು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ವರ್ಷದ ಕೊನೆ ದಿನ ದಾಖಲೆಯ ಮದ್ಯ ಮಾರಾಟ: ಒಂದೇ ದಿನದಲ್ಲಿ 18.85 ಕೋಟಿ ರೂ. ವಹಿವಾಟು

“ಮೈದಾನದಲ್ಲಿದ್ದಾಗ ಆಕೆಯ ಬಗ್ಗೆ ನಾನು ಯೋಚನೆಯೇ ಮಾಡುವುದಿಲ್ಲ. ಈ ವಿಷಯ ತಿಳಿದರೆ, ಆಕೆ ನನ್ನನ್ನು ನಿಜವಾಗಿಯೂ ಸಾಯಿಸುತ್ತಾಳೆ. ಇದು ಕೇವಲ ಕ್ರಿಕೆಟ್ ಬಗ್ಗೆ ಮಾತ್ರ. ಆದರೆ ಅವಳು ತನ್ನ ಜೀವನವನ್ನು ನನಗಾಗಿ ಅರ್ಪಿಸುತ್ತಾಳೆ. ಬಹಳಷ್ಟು ಪ್ರೀತಿಯನ್ನು ನೀಡುತ್ತಾಳೆ” ಎಂದು ಕೊಂಡಾಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News