Indian cricket team in 2024: 2024 ವರ್ಷ ಪ್ರಾರಂಭವಾಗಿದೆ. ಭಾರತ ಕ್ರಿಕೆಟ್ ತಂಡ ಈ ವರ್ಷ ಟಿ20 ವಿಶ್ವಕಪ್ ಆಡಲಿದ್ದು, ಎರಡನೇ ಬಾರಿಗೆ ಈ ಮಾದರಿಯಲ್ಲಿ ವಿಶ್ವ ಚಾಂಪಿಯನ್ ಆಗಲು ಪ್ರಯತ್ನಿಸಲಿದೆ. ಅಂದಹಾಗೆ ಈ ಸ್ವರೂಪದ ಟಿ20 ತಂಡ ಇನ್ನೇನು ಕೆಲವೇ ದಿನಗಳಲ್ಲಿ ಪ್ರಕಟವಾಗಲಿದ್ದು, ಭಾರತದ 4 ಆಟಗಾರರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಹೊಸ ವರ್ಷ, ಹೊಸ ನಿರೀಕ್ಷೆಗಳ ಜೊತೆಗೆ ಕ್ರಿಕೆಟ್ ಮೈದಾನದಲ್ಲಿ ಹೊಸ ಇತಿಹಾಸವನ್ನು ಬರೆಯಲು ಟೀಂ ಇಂಡಿಯಾ ಸಿದ್ಧವಾಗುತ್ತಿದೆ. ಭಾರತವಲ್ಲದೆ ಈ ವರ್ಷ ಹಲವು ತಂಡಗಳು ಟಿ20 ವಿಶ್ವಕಪ್ ಆಡಲಿವೆ. ಅದರಲ್ಲೂ ಈ ವರ್ಷ ಎಲ್ಲರ ಕಣ್ಣು 4 ಭಾರತೀಯ ಆಟಗಾರರ ಮೇಲಿದೆ. ಅವಕಾಶ ಸಿಕ್ಕರೆ ಈ ನಾಲ್ವರು ಅಮೆರಿಕ ಮತ್ತು ವೆಸ್ಟ್ ಇಂಡೀಸ್’ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್’ನಲ್ಲಿ ಸಂಚಲನ ಮೂಡಿಸೋದು ಪಕ್ಕಾ.
ಈ ನಾಲ್ವರಲ್ಲಿ ಮೊದಲ ಹೆಸರು ಶುಭ್ಮನ್ ಗಿಲ್. 2023ರಲ್ಲೂ ಶುಭ್‌ಮನ್ ಸಂಚಲನ ಮೂಡಿಸಿದ್ದರು. ಅಷ್ಟೇ ಅಲ್ಲದೆ, ಎಲ್ಲಾ ಸ್ವರೂಪಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು. 2023 ರಲ್ಲಿ ನಡೆದ ಟಿ20 ಅಂತರಾಷ್ಟ್ರೀಯ ಪಂದ್ಯದಲ್ಲಿ ಶುಭಮನ್ 13 ಪಂದ್ಯಗಳಲ್ಲಿ ಒಂದು ಶತಕ ಸೇರಿದಂತೆ ಒಟ್ಟು 312 ರನ್ ಸೇರಿಸಿದ್ದರು.
2023ರ ಟಿ20ಯಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ್ದ ಸೂರ್ಯಕುಮಾರ್ ಯಾದವ್ 2024ರಲ್ಲೂ ಅಬ್ಬರಿಸಲು ಸಿದ್ಧರಾಗಿದ್ದಾರೆ. ಕಳೆದ ವರ್ಷ 18 ಪಂದ್ಯಗಳಲ್ಲಿ 2 ಶತಕ ಮತ್ತು 5 ಅರ್ಧ ಶತಕಗಳ ಸಹಾಯದಿಂದ 733 ರನ್ ಗಳಿಸಿದ್ದರು.
'ಮಿಸ್ಟರ್ ಫಿನಿಶರ್' ಖ್ಯಾತಿಯ ರಿಂಕು ಸಿಂಗ್ ಅವರನ್ನು ಐಪಿಎಲ್’ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. 2023 ರಲ್ಲಿ, ರಿಂಕು ಭಾರತದ ಪರ 12 T20 ಪಂದ್ಯಗಳನ್ನು ಆಡಿದ್ದು, 180.68 ರ ಸ್ಟ್ರೈಕ್ ರೇಟ್’ನಲ್ಲಿ ಸುಮಾರು 65 ರ ಸರಾಸರಿಯಲ್ಲಿ 262 ರನ್ ಗಳಿಸಿದ್ದರು. ಈ ಅವಧಿಯಲ್ಲಿ ಅವರ ಅತ್ಯುತ್ತಮ ಸ್ಕೋರ್ ಔಟಾಗದೆ 68 ರನ್ ಆಗಿತ್ತು.
'ಮಿಸ್ಟರ್ ಫಿನಿಶರ್' ಖ್ಯಾತಿಯ ರಿಂಕು ಸಿಂಗ್ ಅವರನ್ನು ಐಪಿಎಲ್’ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. 2023 ರಲ್ಲಿ, ರಿಂಕು ಭಾರತದ ಪರ 12 T20 ಪಂದ್ಯಗಳನ್ನು ಆಡಿದ್ದು, 180.68 ರ ಸ್ಟ್ರೈಕ್ ರೇಟ್’ನಲ್ಲಿ ಸುಮಾರು 65 ರ ಸರಾಸರಿಯಲ್ಲಿ 262 ರನ್ ಗಳಿಸಿದ್ದರು. ಈ ಅವಧಿಯಲ್ಲಿ ಅವರ ಅತ್ಯುತ್ತಮ ಸ್ಕೋರ್ ಔಟಾಗದೆ 68 ರನ್ ಆಗಿತ್ತು.