Late Eating Problems: ಸರಿಯಾದ ಸಮಯಕ್ಕೆ ಆಹಾರ ಸೇವಿಸದಿರುವುದೂ ಸಹ ಹೃದ್ರೋಗದ ಅಪಾಯ ಹೆಚ್ಚಿಸಬಹುದು, ಎಚ್ಚರ!

Late Eating Problems: ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದಿರುವುದು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ ಎಂಬ ಆಘಾತಕಾರಿ ಮಾಹಿತಿಯನ್ನು ಹೊಸ ಸಂಶೋಧನೆಯೊಂದು ಬಹಿರಂಗಪಡಿಸಿದೆ. 

Written by - Yashaswini V | Last Updated : Jan 3, 2024, 08:35 AM IST
  • ತಡವಾಗಿ ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ ಎಂದು ಕೆಲವರಿಗೆ ತಿಳಿದಿರಬಹುದು
  • ಆದರೆ ಅದು ಎಷ್ಟು ಅಪಾಯಕಾರಿ ಎಂದು ಯಾರಿಗೂ ತಿಳಿದಿಲ್ಲ.
  • ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದಿರುವುದು ಕೇವಲ ಅಸಿಡಿಟಿಯನ್ನಷ್ಟೇ ಹೆಚ್ಚಿಸುವುದಿಲ್ಲ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೊಸ ಸಂಶೋಧನೆಯೊಂದು ಬಹಿರಂಗಪಡಿಸಿದೆ.
Late Eating Problems: ಸರಿಯಾದ ಸಮಯಕ್ಕೆ ಆಹಾರ ಸೇವಿಸದಿರುವುದೂ ಸಹ ಹೃದ್ರೋಗದ ಅಪಾಯ ಹೆಚ್ಚಿಸಬಹುದು, ಎಚ್ಚರ! title=

Late Night Eating: ಈ ಫಾಸ್ಟ್ ಬ್ಯುಸಿ ಲೈಫ್ ನಲ್ಲಿ ಜನರು ಬಿಡುವಿಲ್ಲದ ವೇಳಾಪಟ್ಟಿಯಿಂದ ಸಮಯಕ್ಕೆ ಸರಿಯಾಗಿ ಆಹಾರವನ್ನು ಸಹ ಸೇವಿಸುವುದಿಲ್ಲ. ಕೆಲವರು ಮುಂಜಾನೆ ಉಪಹಾರವನ್ನು ಮಧ್ಯಾಹ್ನದವರೆಗೆ ಸೇವಿಸಿದರೆ ಇನ್ನೂ ಕೆಲವರು ರಾತ್ರಿ ಭೋಜನವನ್ನು ತಡರಾತ್ರಿವರೆಗೆ ತಿನ್ನುವ ಅಭ್ಯಾಸ ಹೊಂದಿರುತ್ತಾರೆ. ಆದರೆ, ಈ ರೀತಿ ತಡವಾಗಿ ಆಹಾರ ಸೇವಿಸುವುದರಿಂದ ಹೃದಯಾಘಾತದ ಅಪಾಯ ಹೆಚ್ಚಿಸುತ್ತದೆ ಎಂಬ ಆಘಾತಕಾರಿ ಮಾಹಿತಿಯನ್ನು ಸಂಶೋಧನೆಯೊಂದು ಬಹಿರಂಗಪಡಿಸಿದೆ. 

ಹೌದು, ಸಾಮಾನ್ಯವಾಗಿ, ತಡವಾಗಿ ಆಹಾರ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ನಿಮಗೆ ತಿಳಿದಿರಬಹುದು. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದಿರುವುದರಿಂದ ಕೇವಲ ಅಸಿಡಿಟಿಯಷ್ಟೇ ಹೆಚ್ಚಾಗುವುದಿಲ್ಲ ಇದರಿಂದ ಹೃದಯಾಘಾತದ ಅಪಾಯವೂ ಹೆಚ್ಚಾಗುತ್ತದೆ ಎಂದು ಹೊಸ ಸಂಶೋಧನೆಯಿಂದ ತಿಳಿದುಬಂದಿದೆ. 

ಗಮನಾರ್ಹ ವಿಷಯವೆಂದರೆ, ಇದು ನಿರ್ಲಕ್ಷಿಸುವ ವಿಷಯವಲ್ಲ. ಇದರ ಅಪಾಯ ಪ್ರತಿ ಗಂಟೆಗೆ 6 ಪ್ರತಿಶತದಷ್ಟು ಹೆಚ್ಚಾಗುತ್ತದೆ ಎಂದು ಸಂಶೋಧನೆಯಲ್ಲಿ ಉಲ್ಲೇಖಿಸಲಾಗಿದೆ. ಈ ಅಧ್ಯಯನದಲ್ಲಿ ಯಾವೆಲ್ಲಾ ವಿಷಯಗಳ ಬಗ್ಗೆ ಉಲ್ಲೇಖಿಸಲಾಗಿದೆ? ಆರೋಗ್ಯಕರ ದಿನಚರಿ ಹೇಗಿರಬೇಕು ಎಂದು ತಿಳಿಯೋಣ... 

ಇದನ್ನೂ ಓದಿ- ಹುರಿದ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಹಲವಾರು ಪ್ರಯೋಜನಗಳು

ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದಿದ್ದರೆ ಏನಾಗುತ್ತದೆ? 
ಗ್ಲೋಬಲ್ ಬರ್ಡನ್ ಆಫ್ ಡಿಸೀಸ್‌ನ ಅಧ್ಯಯನದ ಪ್ರಕಾರ, 2019 ರಲ್ಲಿ ಒಟ್ಟು 1.86 ಕೋಟಿ ಜನರು ಸಾವನ್ನಪ್ಪಿದ್ದಾರೆ. ಅದರಲ್ಲಿ ಸುಮಾರು 80 ಲಕ್ಷ ಜನರ ಸಾವಿಗೆ ಆಹಾರವೇ ಪ್ರಮುಖ ಕಾರಣವಂತೆ. ಹೌದು, ವಿಶ್ವದ ಮೂರನೇ ಒಂದರಷ್ಟು ಜನರ ಸಾವಿಗೆ ಆಹಾರವೇ ಕಾರಣ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಸರಿಯಾದ ಸಮಯಕ್ಕೆ ಆಹಾರ ಸೇವಿಸದೇ ಇರುವುದರಿಂದ ಹಾಗೂ ದೈನಂದಿನ ಡಯಟ್ ನಲ್ಲಿ ಸಮತೋಲಿತ ಆಹಾರವನ್ನು ಸೇವಿಸದೇ ಇರುವುದರಿಂದ ಇದು ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಕೆಲವು ಸಂದರ್ಭಗಳಲ್ಲಿ ಇದು ಮಾರಣಾಂತಿಕವೂ ಆಗಿರಬಹುದು ಎಂದು ಸಂಶೋಧನೆಯಲ್ಲಿ ತಿಳಿಸಲಾಗಿದೆ. 

ತಡವಾದ ಆಹಾರ ಸೇವನೆಯಿಂದ ಹೆಚ್ಚಾಗುತ್ತೆ ಹೃದ್ರೋಗದ ಅಪಾಯ: 
ಫ್ರೆಂಚ್ ಸಂಶೋಧನಾ ಸಂಸ್ಥೆಯ ಅಧ್ಯಯನದ ಪ್ರಕಾರ, ದಿನದ ಮೊದಲ ಆಹಾರವನ್ನು ಎಂದರೆ ಉಪಾಹಾರ/ಮುಂಜಾನೆ ಬ್ರೇಕ್ಫಾಸ್ಟ್ ಅನ್ನು ತಡವಾಗಿ ತಿನ್ನುವುದು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಇದನ್ನು ಲಘುವಾಗಿ ತೆಗೆದುಕೊಳ್ಳುವಂತಿಲ್ಲ. ಏಕೆಂದರೆ ಇದರ ಅಪಾಯವು ಪ್ರತಿ ಗಂಟೆಗೆ 6 ಪ್ರತಿಶತದಷ್ಟು ಹೆಚ್ಚಾಗುತ್ತದೆ. ಅಂದರೆ, ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವ ವ್ಯಕ್ತಿಗೆ ಹೋಲಿಸಿದರೆ, 1 ಗಂಟೆ ತಡವಾಗಿ ತಿನ್ನುವ ವ್ಯಕ್ತಿಗೆ ಹೃದಯಾಘಾತದ ಅಪಾಯವು 6 ಪ್ರತಿಶತದಷ್ಟು ಹೆಚ್ಚಾಗುತ್ತದೆ. ಇನ್ನೂ ರಾತ್ರಿಯ ಭೋಜನವನ್ನು ತಡವಾಗಿ ಸೇವಿಸುವವರಲ್ಲಿಯೂ ಈ ಅಪಾಯ ಹೆಚ್ಚಿದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. 

ಇದನ್ನೂ ಓದಿ- ದೇಹದಲ್ಲಿನ ವಿಟಮಿನ್ ಬಿ 12 ಕೊರತೆಯನ್ನು ನೀಗಿಸುತ್ತದೆ ಈ ಆಹಾರಗಳು

ನೇಚರ್ ಕಮ್ಯುನಿಕೇಷನ್ಸ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಆಹಾರ ಸೇವನೆಯ ಮಾದರಿಗಳು ಮತ್ತು ಹೃದ್ರೋಗದ ನಡುವಿನ ಸಂಬಂಧವನ್ನು ಅಧ್ಯಯನ ಮಾಡಲು ಸಂಶೋಧಕರು ತಮ್ಮ ಸಂಶೋಧನೆಯಲ್ಲಿ ಸುಮಾರು 103,389 ಜನರ ಡೇಟಾವನ್ನು ಬಳಸಿದ್ದಾರೆ.

ಅಧ್ಯಯನದ ಪ್ರಕಾರ ಆರೋಗ್ಯವಂತರಾಗಿರಲು ದಿನಚರಿ ಹೇಗಿರಬೇಕು? 
ಈ ಅಧ್ಯಯನದ ಪ್ರಕಾರ, ಯಾವುದೇ ವ್ಯಕ್ತಿ ಆರೋಗ್ಯವಂತರಾಗಿರಲು ಬಯಸಿದರೆ ಅವರ ದೈನಂದಿನ ಆಹಾರದ ಸಮಯ ಈ ಕೆಳಕಂದಂತಿರಬೇಕು. 
* ದಿನದ ಮೊದಲ ಆಹಾರವನ್ನು (ಉಪಹಾರ) ಬೆಳಿಗ್ಗೆ 8 ಗಂಟೆಗೆ ತೆಗೆದುಕೊಳ್ಳಬೇಕು. 
* ಮಧ್ಯಾಹ್ನದ ಊಟವನ್ನು 12 ರಿಂದ 1 ಗಂಟೆಯ ನಡುವೆ ತೆಗೆದುಕೊಳ್ಳಬೇಕು. 
* ಸಂಜೆಯ ತಿಂಡಿಗಳನ್ನು 5 ಗಂಟೆಗೆ ತೆಗೆದುಕೊಳ್ಳಬೇಕು.
* ರಾತ್ರಿಯ ಊಟವನ್ನು 8 ಗಂಟೆಗೆ ತೆಗೆದುಕೊಳ್ಳಬೇಕು. 

ಸೂಚನೆ:  ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಂಶೋಧನೆಯ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News