Best cricketer of 2023: 2023 ರಲ್ಲಿ ಭಾರತದ ಪುರುಷರ ತಂಡದ ಪರ ಆಡಿದ ಸ್ಟಾರ್ ಓಪನರ್ ಶುಭ್ಮನ್ ಗಿಲ್ ಅತ್ಯುತ್ತಮ ಕ್ರಿಕೆಟಿಗ ಎಂದು ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಹೇಳಿದ್ದಾರೆ. ಅಂದಹಾಗೆ ಗಿಲ್, ODI ಕ್ರಿಕೆಟ್’ನ 29 ಇನ್ನಿಂಗ್ಸ್’ಗಳಲ್ಲಿ ಗಮನಾರ್ಹ 1584 ರನ್‌ಗಳನ್ನು ಗಳಿಸಿದ್ದಾರೆ. 63.36 ಸರಾಸರಿ ಮತ್ತು 105.45 ಸ್ಟ್ರೈಕ್ ರೇಟ್’ಗಳನ್ನು ಹೊಂದಿದ್ದಾರೆ.
ಇದನ್ನೂ ಓದಿ: ಇದು ಅಂತಿಂಥಾ ಮನೆಯಲ್ಲ ಸ್ವಾಮಿ…? ಎಷ್ಟೊಂದು ವೈಭವದಿಂದಿದೆ ನೋಡಿ ವರ್ತೂರ್ ಸಂತೋಷ್ ಅರಮನೆ
ಆದರೆ ಅದೇ ವರ್ಷ (2023)ದಲ್ಲಿ ಟೆಸ್ಟ್ ಮತ್ತು T20I ಗಳಲ್ಲಿ ಅವರ ಕೊಡುಗೆಗಳು ತುಲನಾತ್ಮಕವಾಗಿ ಸಾಧಾರಣವಾಗಿದೆ, ಕ್ರಮವಾಗಿ 28.67 ಮತ್ತು 26.00 ರ ಸರಾಸರಿಯಲ್ಲಿ 258 ಮತ್ತು 312 ರನ್’ಗಳನ್ನು ಅವರು ಕಲೆಹಾಕಿದ್ದರು.
ಸ್ಟಾರ್ ಸ್ಪೋರ್ಟ್ಸ್ ಶೋ 'ಫಾಲೋ ದಿ ಬ್ಲೂಸ್' ಸಂದರ್ಭದಲ್ಲಿ ಮಾತನಾಡಿದ ಗವಾಸ್ಕರ್, 2023 ರಲ್ಲಿ ಅತ್ಯುತ್ತಮ ಪ್ರದರ್ಶನದೊಂದಿಗೆ ಎಲ್ಲರನ್ನು ಬೆರಗುಗೊಳಿಸಿದ ಭಾರತೀಯ ಆಟಗಾರ ಶುಭ್ಮನ್ ಗಿಲ್ ಎಂದು ಹೇಳಿದ್ದಾರೆ.
"ಬ್ರೇಕ್ ಔಟ್ ಪರ್ಫಾರ್ಮರ್… 2023ರ ಋತುವಿನಲ್ಲಿ ಆಟದ ಎಲ್ಲಾ ಸ್ವರೂಪಗಳಲ್ಲಿ ಶುಭ್ಮನ್ ಗಿಲ್ ಬ್ಯಾಟ್ ಮಾಡಿದ ರೀತಿಗೆ ಭೇಷ್ ಎನ್ನಬೇಕು" ಎಂದು ಹೇಳಿದ್ದಾರೆ. “ಆದರೆ ಕೊನೆಯಲ್ಲಿ, ಟೆಸ್ಟ್ ಕ್ರಿಕೆಟ್’ನಲ್ಲಿ ಕೊಂಚ ವಿಫಲರಾದರು. ಆದರೆ ODI ಮತ್ತು T20 ಪ್ರದರ್ಶನಗಳು ಅಸಾಧಾರಣವಾಗಿತ್ತು" ಎಂದಿದ್ದಾರೆ.
ಇದನ್ನೂ ಓದಿ: ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್’ಗೆ ಬಂಧನ ಭೀತಿ: ನಿವಾಸದ ಹೊರಗೆ ಹೆಚ್ಚಿದ ಬಿಗಿಭದ್ರತೆ
ಇರ್ಫಾನ್ ಪಠಾಣ್ ಆಯ್ಕೆ ಹೀಗಿದೆ:
ಇದೇ ವಿಷಯದ ಬಗ್ಗೆ ಮಾತನಾಡಿದ ಕ್ರಿಕೆಟ್ ದಿಗ್ಗಜ ಇರ್ಫಾನ್ ಪಠಾಣ್, "ಶುಭ್ಮನ್ ಗಿಲ್, ವಿಶೇಷವಾಗಿ ODI ಕ್ರಿಕೆಟ್’ನಲ್ಲಿ ಅತ್ಯುತಮ ಪ್ರದರ್ಶನ ನೀಡಿದ್ದಾರೆ, ಈತ ಭಾರತ ತಂಡದ ಭವಿಷ್ಯ. ಅವನಿಗೂ ನಾಯಕತ್ವದ ಭವಿಷ್ಯವಿದೆ ಎಂದು ನಾನು ಭಾವಿಸುತ್ತೇನೆ" ಎಂದಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.