Samyuktha Menon: ಹಸೆಮಣೆಯೇರಲು ಸಜ್ಜಾದ ಮಾಸ್ತಾರು ಮಾಸ್ತಾರು ಅಪ್ಸರೆ.. ವರ ಯಾರು ಗೊತ್ತಾ?

Samyuktha Menon Marriage: ಸಾಲು ಸಾಲು ಸಿನಿಮಾಗಳಿಂದ ಒಳ್ಳೆ ಫಾರ್ಮ್ ನಲ್ಲಿರುವ ನಟಿ ಸಂಯುಕ್ತಾ ತನ್ನ ಬಾಯ್ ಫ್ರೆಂಡ್ ಜೊತೆ ಮದುವೆಯಾಗುತ್ತಿದ್ದಾರೆ ಎಂದು ವರದಿಯಾಗಿದೆ..

Written by - Savita M B | Last Updated : Jan 4, 2024, 01:21 PM IST
  • ವಿರೂಪಾಕ್ಷ ಚಿತ್ರದ ಮೂಲಕ ಹಿಟ್ ಆದ ನಟಿ ಸಂಯುಕ್ತಾ ಮೆನನ್
  • ಸಂಯುಕ್ತಾ ಈ ವರ್ಷ ತನ್ನ ಬಾಯ್ ಫ್ರೆಂಡ್ ಜೊತೆ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ..
  • ನಟಿಗೆ ಬಿಗ್‌ ಬ್ರೇಕ್‌ ಕೊಟ್ಟಿದ್ದು.. ಭೀಮ್ಲಾ ನಾಯಕ್ ಚಿತ್ರ..
Samyuktha Menon: ಹಸೆಮಣೆಯೇರಲು ಸಜ್ಜಾದ ಮಾಸ್ತಾರು ಮಾಸ್ತಾರು ಅಪ್ಸರೆ.. ವರ ಯಾರು ಗೊತ್ತಾ?  title=

Samyuktha Menon: ಭೀಮ್ಲಾ ನಾಯಕ್ ಚಿತ್ರದ ಮೂಲಕ ತೆಲುಗಿಗೆ ಪಾದಾರ್ಪಣೆ ಮಾಡಿ ವಿರೂಪಾಕ್ಷ ಚಿತ್ರದ ಮೂಲಕ ಹಿಟ್ ಆದ ನಟಿ ಸಂಯುಕ್ತಾ ಮೆನನ್ ಅವರು ಸರಣಿ ಯಶಸ್ಸನ್ನು ಗಳಿಸಿದ್ದಾರೆ. ಆದರೆ ಇತ್ತೀಚೆಗೆ ನಟಿ ಸ್ವಲ್ಪ ಬ್ರೇಕ್‌ ತೆಗೆದುಕೊಂಡಂತಿದ್ದು.. ಈ ವರ್ಷ ತನ್ನ ಬಾಯ್ ಫ್ರೆಂಡ್ ಜೊತೆ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ.. 

2016 ರಲ್ಲಿ ‘ಪಾಪ್‌ಕಾರ್ನ್’ ಚಿತ್ರದ ಮೂಲಕ ಮಲಯಾಳಂಗೆ ಪಾದಾರ್ಪಣೆ ಮಾಡಿದ ಸಂಯುಕ್ತಾ ಮೆನನ್, ತಮಿಳು, ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ನಟಿಗೆ ಬಿಗ್‌ ಬ್ರೇಕ್‌ ಕೊಟ್ಟಿದ್ದು.. ಭೀಮ್ಲಾ ನಾಯಕ್ ಚಿತ್ರ.. 

ಇದನ್ನೂ ಓದಿ-’ಕನಸೊಂದು ಶುರುವಾಗಿದೆ’ ಸಿನಿಮಾಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಾಥ್.!

ಹೌದು ಈ ಸಿನಿಮಾದಿಂದ ಸಂಯುಕ್ತಾಗೆ ಒಳ್ಳೆಯ ಹೆಸರು ಬಂತು. ಅದೇ ವರ್ಷ ತೆಲುಗು, ತಮಿಳಿನಲ್ಲಿ ತೆರೆಕಂಡ ಸರ್ ಸಿನಿಮಾ ಕೂಡ ಸೂಪರ್ ಹಿಟ್ ಆಯಿತು. ಇದಲ್ಲದೇ 2023 ರಲ್ಲಿ, ಸಂಯುಕ್ತಾ ವಿರೂಪಾಕ್ಷ ಚಿತ್ರದಲ್ಲಿ ನೆಗೆಟಿವ್ ಟಚ್ ಹೊಂದಿರುವ ನಂದಿನಿ ಪಾತ್ರವನ್ನು ನಿರ್ವಹಿಸಿದರು. 

ಈ ನಡುವೆ ನಟಿ ಸಂಯುಕ್ತಾ ವಿಚ್ಛೇದಿತ ತಮಿಳು ಹೀರೋ ಜೊತೆ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ಸುದ್ದಿಯೂ ಬಂದಿತ್ತು. ಆದರೆ ಅದೆಲ್ಲವೂ ವದಂತಿಗಳು ಎನ್ನಲಾಗಿತ್ತು.. ಆದರೆ ಇದೀಗ ಮದುವೆ ಸುದ್ದಿ ವೈರಲ್ ಆಗಿದ್ದು.. ಈಗಾಗಲೇ ತನ್ನ ಸ್ನೇಹಿತನೊಂದಿಗೆ ಡೇಟಿಂಗ್ ಮಾಡುತ್ತಿರುವ ಸಂಯುಕ್ತಾ ಆತನನ್ನು ಮದುವೆಯಾಗಲಿದ್ದಾರೆ ಎಂಬ ವರದಿಗಳಿವೆ. ಈ ವರ್ಷದ ಕೊನೆಯಲ್ಲಿ ಅವರ ಮದುವೆ ನಡೆಯಲಿದೆ ಎಂದು ಆಪ್ತರು ಹೇಳಿದ್ದಾರೆ. ಈ ಸುದ್ದಿಯ ಸತ್ಯಾಸತ್ಯತೆಯನ್ನು ಸಂಯುಕ್ತಾ ಬಹಿರಂಗಪಡಿಸಬೇಕು.. 

ಇದನ್ನೂ ಓದಿ-'ಸಲಾರ್ 2' ಅಪ್ಡೇಟ್‌: ಸೀಕ್ವೆಲ್ ರಿಲೀಸ್‌ ಬಗ್ಗೆ ಮಾತನಾಡಿದ ವಿಜಯ್‌ ಕಿರಗಂದೂರು!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News