'ಸಲಾರ್ 2' ಅಪ್ಡೇಟ್‌: ಸೀಕ್ವೆಲ್ ರಿಲೀಸ್‌ ಬಗ್ಗೆ ಮಾತನಾಡಿದ ವಿಜಯ್‌ ಕಿರಗಂದೂರು!

Salaar 2 Update: ಇತ್ತೀಚೆಗೆ ರಿಲೀಸ್‌ ಆಗಿ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ 'ಸಲಾರ್', ಸಿನಿಮಾದ ಮುಂದಿನ ಸೀಕ್ವೆಲ್‌ಗಾಗಿ ಫ್ಯಾನ್ಸ್‌ ಕಾತುರದಿಂದ ಕಾಯ್ತಾಯಿರುವಾಗ, ಸದ್ಯ 'ಸಲಾರ್ 2' ಚಿತ್ರದ ರಿಲೀಸ್‌ ಬಗ್ಗೆ ಅಪ್ಡೇಟ್‌ ಹೊರಬಂದಿದೆ.   

Written by - Zee Kannada News Desk | Last Updated : Jan 4, 2024, 12:27 PM IST
  • 'ಸಲಾರ್' ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದ್ದು, ಈಗಾಗಲೇ ವಿಶ್ವದಾದ್ಯಂತ 627.19 ಕೋಟಿ ರೂಪಾಯಿಗಳನ್ನು ಗಳಿಸಿದೆ.
  • ಸಂದರ್ಶವೊಂದರಲ್ಲಿ ಹೊಂಬಾಳೆ ಫಿಲ್ಮ್ಸ್‌ನ ನಿರ್ಮಾಪಕ ವಿಜಯ್ ಕಿರಗಂದೂರು 2025 ರ ಅಂತ್ಯದ ವೇಳೆಗೆ ಸಲಾರ್ ಸೀಕ್ವೆಲ್ ಬಿಡುಗಡೆಯಾಗಲಿದೆ ಎಂದು ಖಚಿತಪಡಿಸಿದ್ದಾರೆ.
  • ಸಲಾರ್ ಪ್ರಪಂಚದಾದ್ಯಂತದ ಪ್ರಭಾಸ್ ಅಭಿಮಾನಿಗಳಿಗೆ ಒಂದು ಹಬ್ಬವಾಗಿದೆ. ನಾವು ಸಿನಿಮಾದ ಕಲೆಕ್ಷನ್ ಮತ್ತು ಅದಕ್ಕೆ ಬರುತ್ತಿರುವ ಪ್ರತಿಕ್ರಿಯೆಗಳಿಂದ ಹೆಚ್ಚು ಖುಷಿಯಾಗಿದ್ದೇವೆ ಎಂದು ನಿರ್ಮಾಪಕ ವಿಜಯ್ ಕಿರಗಂದೂರು ಹೇಳಿದ್ದಾರೆ.
'ಸಲಾರ್ 2' ಅಪ್ಡೇಟ್‌: ಸೀಕ್ವೆಲ್ ರಿಲೀಸ್‌ ಬಗ್ಗೆ ಮಾತನಾಡಿದ ವಿಜಯ್‌ ಕಿರಗಂದೂರು! title=

Vijay Kiragandur Spoke About Salaar 2: ಇತ್ತೀಚೆಗೆ ತೆರೆಗೆ ಅಪ್ಪಳಿಸಿದ 'ಸಲಾರ್' ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದ್ದು, ಈಗಾಗಲೇ ವಿಶ್ವದಾದ್ಯಂತ 627.19 ಕೋಟಿ ರೂಪಾಯಿಗಳನ್ನು ಗಳಿಸಿದೆ.ಪ್ರಶಾಂತ್ ನೀಲ್ ನಿರ್ದೇಶನದ ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಭಾಗವಾಗಿರುವ 'ಸಲಾರ್' ಸಿನಿಮಾದ ಮುಂದಿನ ಸೀಕ್ವೆಲ್‌ಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಈ ಹಿಂದೆ ಸಲಾರ್ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ್ದ ನಿರ್ದೇಶಕ ಪ್ರಶಾಂತ್ ನೀಲ್, 'ಸಲಾರ್' ಕಥೆಯ ಕ್ಲೈಮ್ಯಾಕ್ಸ್ ಅನ್ನು ಪ್ರೇಕ್ಷಕರಿಗೆ ಹೇಳಲು ಎಷ್ಟು ಉತ್ಸಾಹರಾಗಿದ್ದಾರೆ ಎಂಬುದನ್ನು ವ್ಯಕ್ತಪಡಿಸಿದ್ದರು. ಜೊತೆಗೆ ಸಲಾರ್ 2 ಬಿಡುಗಡೆ ದಿನಾಂಕಕ್ಕಾಗಿ ತಾವು ಹೇಗೆ ಕಾಯುತ್ತಿರುವುದಾಗಿಯು ತಿಳಿಸಿದ್ದರು.

ಇದೀಗ ಮತ್ತೊಂದು ಸಂದರ್ಶವೊಂದರಲ್ಲಿ ಹೊಂಬಾಳೆ ಫಿಲ್ಮ್ಸ್‌ನ ನಿರ್ಮಾಪಕ ವಿಜಯ್ ಕಿರಗಂದೂರು  2025 ರ ಅಂತ್ಯದ ವೇಳೆಗೆ ಸಲಾರ್ ಸೀಕ್ವೆಲ್ ಬಿಡುಗಡೆಯಾಗಲಿದೆ ಎಂದು ಖಚಿತಪಡಿಸಿದ್ದಾರೆ. ವಿಜಯ್ ಕಿರಗಂದೂರು, "ಸಲಾರ್ 2 ಚಿತ್ರದ ಸ್ಕ್ರಿಪ್ಟ್ ಸಿದ್ಧವಾಗಿದೆ. ನಾವು ಯಾವಾಗ ಬೇಕಾದರೂ ಚಿತ್ರವನ್ನು ಪ್ರಾರಂಭಿಸುತ್ತೇವೆ. ಪ್ರಭಾಸ್ 'ಸಲಾರ್ 2' ಸಿನಿಮಾವನ್ನು ಬೇಗ ಆರಂಭಿಸಲು ಬಯಸುತ್ತಾರೆ ಮತ್ತು ಪ್ರಶಾಂತ್ ನೀಲ್ ಕೂಡ ಅದನ್ನೇ ಮಾಡಲು ಬಯಸುತ್ತಾರೆ. ಕಳೆದ 2 ರಿಂದ 3 ದಿನಗಳಲ್ಲಿ ನಮ್ಮ ಚರ್ಚೆಯಾಗಿದೆ. ಮುಂದಿನ 15 ತಿಂಗಳಲ್ಲಿ ಸಿನಿಮಾವನ್ನು ನಿರ್ಮಿಸುವುದಾಗಿದೆ. ನಾವು ಖಂಡಿತವಾಗಿಯೂ ಸಲಾರ್ 2 ಅನ್ನು 2025 ರಲ್ಲಿ ಬಿಡುಗಡೆ ಮಾಡುತ್ತೇವೆ" ಎಂದು ಭರವಸೆ ನೀಡಿದ್ದಾರೆ. 

ಇದನ್ನೂ ಓದಿ: Salaar: ಭಾಕ್ಸಾಫಿಸ್‌ನಲ್ಲಿ ಸಲಾರ್‌ ಅಬ್ಬರ.. ಜೈಲರ್..‌ ಬಾಹುಬಲಿ.. ದಾಖಲೆಗಳನ್ನು ಉಢೀಸ್‌ ಮಾಡಿದ ಪ್ರಭಾಸ್‌!

ನಿರ್ಮಾಪಕ ವಿಜಯ್ ಕಿರಗಂದೂರು, "ಸಲಾರ್ ಪ್ರಪಂಚದಾದ್ಯಂತದ ಪ್ರಭಾಸ್ ಅಭಿಮಾನಿಗಳಿಗೆ ಒಂದು ಹಬ್ಬವಾಗಿದೆ. ನಾವು ಸಿನಿಮಾದ ಕಲೆಕ್ಷನ್ ಮತ್ತು ಅದಕ್ಕೆ ಬರುತ್ತಿರುವ ಪ್ರತಿಕ್ರಿಯೆಗಳಿಂದ ಹೆಚ್ಚು ಖುಷಿಯಾಗಿದ್ದೇವೆ. ಕೆಲವು ನೆಗೆಟಿವ್ ಟೀಕೆಗಳಿವೆ. ಆದರೆ ಮೇಕಿಂಗ್ ಮತ್ತು ಸಿನಿಮಾದ ಬಗ್ಗೆ ಯಾರೂ ದೂರು ನೀಡಿಲ್ಲ. ಜನರು 20 ವರ್ಷಗಳಲ್ಲಿ ಮೊದಲ ಬಾರಿಗೆ ಪ್ರಭಾಸ್‌ರನ್ನು ಆಂಗ್ರಿ ಯಂಗ್ ಮ್ಯಾನ್ ಆಗಿ ನೋಡಿದ್ದಾರೆ. ಭಾಸ್ ಕೂಡ ಸಿನಿಮಾ ಸಕ್ಸಸ್ ಮೋಡ್‌ನಲ್ಲಿದ್ದಾರೆ. ಯಾವಾಗ ಭಾಗ ಎರಡು ಎಂದು ಶೆಡ್ಯೂಲ್ ಬಗ್ಗೆ ಕೇಳುತ್ತಿದ್ದಾರೆ." ಎಂದು  ಹೇಳಿದ್ದಾರೆ. 

ಇನ್ನು ಸಲಾರ್‌ ಕಥೆಯ ಬಗ್ಗೆ ಮಾತನಾಡುತ್ತಾ ವಿಜಯ್ ಕಿರಗಂದೂರು, "ಸಲಾರ್ ಭಾಗ ಒಂದು ಕೇವಲ ಭಾಗ ಎರಡರ ಒಂದು ಲುಕ್ ಅಷ್ಟೇ. ನೀವು ಇದನ್ನು ಟ್ರೇಲರ್ ಎಂದು ಪರಿಗಣಿಸಬಹುದು. ಭಾಗ ಎರಡು ಆಕ್ಷನ್ ಮತ್ತು ಸ್ಕೇಲ್‌ಗೆ ಸಂಬಂಧಿಸಿದಂತೆ ಇನ್ನು ದೊಡ್ಡದಾಗಿರುತ್ತದೆ. ಪ್ರಶಾಂತ್ ನೀಲ್ ಮೊದಲ ಭಾಗದಲ್ಲಿ ಎಲ್ಲಾ ಪಾತ್ರಗಳನ್ನು ಪರಿಚಯಿಸಿದ್ದಾರೆ. ಈಗ, ಸಲಾರ್ 2 ಸಾಕಷ್ಟು ಡ್ರಾಮಾ, ರಾಜಕೀಯ ಮತ್ತು ಆಕ್ಷನ್‌ನೊಂದಿಗೆ ಗೇಮ್ ಆಫ್ ಥ್ರೋನ್ಸ್‌ನಂತೆ ಇರಲಿದೆ. ಇಬ್ಬರು ಆತ್ಮೀಯ ಗೆಳೆಯರಾದ ಪ್ರಭಾಸ್ ಮತ್ತು ಪೃಥ್ವಿರಾಜ್ ಅವರು ದೊಡ್ಡ ಶತ್ರುಗಳಾಗಿ ಬದಲಾಗುವುದರಿಂದ ಖಾನ್ಸಾರ್‌ನಲ್ಲಿನ ರಾಜಕೀಯ ಸನ್ನಿವೇಶದ ಮೇಲೆ ಬೀಳುವ ಪ್ರಭಾವವನ್ನು ಸಲಾರ್ 2 ತಿಳಿಸಲಿದೆ" ಎಂದಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News