ಮಕ್ಕಳೇ ನಿರ್ಮಿಸಿದ ಶ್ರೀರಾಮ ಮಂದಿರಕ್ಕೆ ಇಂದಿಗೆ 33 ವರ್ಷ..!

ನೂರಾರು ರಾಮಭಕ್ತರ ಕನಸಿನ ಫಲ ಸ್ವರೂಪ ಎನ್ನುವಂತೆ ನಿರ್ಮಾಣವಾಗುತ್ತಿರುವ ಶ್ರೀ ರಾಮನ ಮಂದಿರ ದ ಸ್ಪೂರ್ತಿ ಪಡೆದು ಐದು ಜನ ಮಕ್ಕಳು ಸೇರಿ ನಿರ್ಮಿಸಿದ ರಾಮ ಮಂದಿರ ಇದು. ಟಿವಿಯಲ್ಲಿ ಬರುತ್ತಿದ್ದ ರಾಮಾಯಣದ ಸೀರಿಯಲ್, ಕರ ಸೇವಕರ ಮಾತುಗಳು ಇದರಿಂದ ಸ್ಪೂರ್ತಿ ಪಡೆದ ಮಕ್ಕಳು ಮಂದಿರ ನಿರ್ಮಿಸಿ ಮೂರ್ತಿ ಪ್ರತಿಷ್ಠಾಪಿಸಿರುವುದು ಸದ್ಯ ಇತಿಹಾಸ. ಉಡುಪಿ ಜಿಲ್ಲೆಯ ಈ  ಮಂದಿರ ಇಂದಿಗೂ ಶ್ರೀ ರಾಮ ಮಂದಿರ ಹೋರಾಟದ ಸಾಕ್ಷಿ ....

Written by - Zee Kannada News Desk | Last Updated : Jan 5, 2024, 11:55 PM IST
  • 1990ರಲ್ಲಿ ತೆಂಗಿನ ಗರಿಗಳನ್ನ ನಿರ್ಮಿಸಿ ಪ್ರಾರಂಭವಾದ ಈ ರಾಮಮಂದಿರ ಇಂದು ಪರಿಪೂರ್ಣ ಮಂದಿರವಾಗಿ ನಿರ್ಮಾಣವಾಗಿದೆ.
  • ತೆಂಗಿನ ಗರಿಯಲ್ಲಿದ್ದ ಶ್ರೀರಾಮ ಸದ್ಯ ಸುಖಜಿತ ಸೂರ್ಯನ ಅಡಿ ನಿಂತು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿದ್ದಾನೆ.
  • ಒಟ್ಟಾರೆಯಾಗಿ ಮಕ್ಕಳು ನಿರ್ಮಿಸಿದ ಶ್ರೀರಾಮ ಮಂದಿರ, ಹೋರಾಟದ ಪ್ರತಿರೂಪ ಎನ್ನುವಂತೆ ನಿಂತಿದೆ.
ಮಕ್ಕಳೇ ನಿರ್ಮಿಸಿದ ಶ್ರೀರಾಮ ಮಂದಿರಕ್ಕೆ ಇಂದಿಗೆ 33 ವರ್ಷ..! title=

ಉಡುಪಿ: ನೂರಾರು ರಾಮಭಕ್ತರ ಕನಸಿನ ಫಲ ಸ್ವರೂಪ ಎನ್ನುವಂತೆ ನಿರ್ಮಾಣವಾಗುತ್ತಿರುವ ಶ್ರೀ ರಾಮನ ಮಂದಿರ ದ ಸ್ಪೂರ್ತಿ ಪಡೆದು ಐದು ಜನ ಮಕ್ಕಳು ಸೇರಿ ನಿರ್ಮಿಸಿದ ರಾಮ ಮಂದಿರ ಇದು. ಟಿವಿಯಲ್ಲಿ ಬರುತ್ತಿದ್ದ ರಾಮಾಯಣದ ಸೀರಿಯಲ್, ಕರ ಸೇವಕರ ಮಾತುಗಳು ಇದರಿಂದ ಸ್ಪೂರ್ತಿ ಪಡೆದ ಮಕ್ಕಳು ಮಂದಿರ ನಿರ್ಮಿಸಿ ಮೂರ್ತಿ ಪ್ರತಿಷ್ಠಾಪಿಸಿರುವುದು ಸದ್ಯ ಇತಿಹಾಸ. ಉಡುಪಿ ಜಿಲ್ಲೆಯ ಈ  ಮಂದಿರ ಇಂದಿಗೂ ಶ್ರೀ ರಾಮ ಮಂದಿರ ಹೋರಾಟದ ಸಾಕ್ಷಿ ....

ಇದನ್ನೂ ಓದಿ: ಲಕ್ಷದ್ವೀಪದಲ್ಲಿ ಪ್ರಧಾನಿ ಮೋದಿ ಇನ್‌ ಕೂಲ್‌ ಮೂಡ್‌..! ಫೋಟೋಸ್‌ ನೋಡಿ

ಹೌದು ಎಂಬತ್ತರ ದಶಕದಲ್ಲಿ ಅಯೋಧ್ಯ ರಾಮ ಜನ್ಮ ಭೂಮಿಯಲ್ಲಿ ಶ್ರೀ ರಾಮನನ್ನ ಪ್ರತಿಷ್ಠಾಪನೆ ಮಾಡಬೇಕು ಎನ್ನುವ ಹೋರಾಟದ ಕಿಚ್ಚು ಹತ್ತಿತ್ತು. 90ರ ದಶಕದ ಪ್ರಾರಂಭದಲ್ಲಿ ಕರಾವಳಿಯಲ್ಲಿ ಶ್ರೀರಾಮ ಮಂದಿರದ ಹೋರಾಟ ಸ್ವರೂಪವನ್ನು ಪಡೆದುಕೊಳ್ಳುತ್ತಿದ್ದ ಕಾಲ. ಇಂತಹ ಸಂದರ್ಭದಲ್ಲಿ ಟಿವಿಯಲ್ಲಿ ಬರುತ್ತಿದ್ದ ರಾಮಾಯಣದ ಧಾರವಾಹಿಯನ್ನು ನೋಡಿ ಪ್ರೇರೆಪಿತರಾದ ಐದು ಜನ ಮಕ್ಕಳು ನಾವು ರಾಮಮಂದಿರವನ್ನು ನಿರ್ಮಿಸಬೇಕು ಎನ್ನುವ ಸಂಕಲ್ಪ ಮಾಡಿದ್ದರು. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು ಸಾಲಿಗ್ರಾಮದ ವ್ಯಾಪ್ತಿಯಲ್ಲಿ ಮಕ್ಕಳು ಮನೆಯಿಂದ ರಾಮನ ಫೋಟೋ ತಂದು ಇಟ್ಟು ತೆಂಗಿನಗರಿಗಳನ್ನ ಬಳಸಿ ಮಂದಿರವನ್ನು ನಿರ್ಮಿಸುತ್ತಾರೆ. ಮನೆಯಿಂದ ತಂದ ಸಕ್ಕರೆಯನ್ನು ಪ್ರಸಾದ ರೂಪದಲ್ಲಿ ವಿತರಿಸುವ ಕೆಲಸವನ್ನು ಈ ಮಕ್ಕಳು ಮಾಡುತ್ತಾರೆ.

ಇದನ್ನೂ ಓದಿ: ನಾಳೆಯೇ L-1 ಪಾಯಿಂಟ್‌ ತಲುಪಲಿದೆ ಆದಿತ್ಯ : ಸೂರ್ಯನ ಮೇಲೂ ರಾರಾಜಿಸುವುದು ಭಾರತ ಧ್ವಜ

1990ರಲ್ಲಿ ತೆಂಗಿನ ಗರಿಗಳನ್ನ ನಿರ್ಮಿಸಿ ಪ್ರಾರಂಭವಾದ ಈ ರಾಮಮಂದಿರ ಇಂದು ಪರಿಪೂರ್ಣ ಮಂದಿರವಾಗಿ ನಿರ್ಮಾಣವಾಗಿದೆ. ಮಕ್ಕಳ ಈ ರಾಮಮಂದಿರದ ಕನಸಿಗೆ ಊರಿನ ಹಿರಿಯರು ಸಹಕಾರ ನೀಡಿದ ಪರಿಣಾಮ ಎನ್ನುವಂತೆ ತೆಂಗಿನ ಗರಿಯಲ್ಲಿದ್ದ ಶ್ರೀರಾಮ ಸದ್ಯ ಸುಖಜಿತ ಸೂರ್ಯನ ಅಡಿ ನಿಂತು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿದ್ದಾನೆ. ಬಹುತೇಕ ಕಡೆಗಳಲ್ಲಿ ಶ್ರೀರಾಮ ಸೀತೆ ಲಕ್ಷ್ಮಣ ಹಾಗೂ ಆಂಜನೇಯನ ಸಮೇತವಾಗಿ ಶ್ರೀರಾಮ ಮಂದಿರ ನಿರ್ಮಾಣವಾಗಿರುವುದನ್ನು ನಾವು ನೋಡಬಹುದು. ಆದರೆ ಸಾಲಿಗ್ರಾಮದಲ್ಲಿ ಮಕ್ಕಳು ನಿರ್ಮಿಸಿದ ರಾಮ ಮಂದಿರದಲ್ಲಿ ಕೇವಲ ಕೋದಂಡರಾಮನನ್ನ ಮಾತ್ರ ನೋಡಬಹುದಾಗಿದೆ. ಇಲ್ಲಿ ಯಾವುದೇ ತಂತ್ರ ನ ಕರೆಸಿ ವಿಗ್ರಹ ಪ್ರತಿಷ್ಠಾಪನೆ ಮಾಡದೆ ಮಕ್ಕಳೇ ಪ್ರತಿಷ್ಟಾಪನೆ ಮಾಡಿದ್ದಾರೆ. ಈ ಮಂದಿರದಲ್ಲಿ ಎಲ್ಲಾ ಜಾತಿಯವರು ಕೂಡ ಇಲ್ಲಿ ಪೂಜಿಸುವ ಅವಕಾಶವನ್ನು ನೀಡಲಾಗಿದ್ದು, ಇಂದಿಗೂ ರಾಮ ನವಮಿಯ ಸಂದರ್ಭ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಒಟ್ಟಾರೆಯಾಗಿ ಮಕ್ಕಳು ನಿರ್ಮಿಸಿದ ಶ್ರೀರಾಮ ಮಂದಿರ, ಹೋರಾಟದ ಪ್ರತಿರೂಪ ಎನ್ನುವಂತೆ ನಿಂತಿದೆ. ಅಯೋಧ್ಯೆಯಲ್ಲಿ ರಾಮಮಂದಿರದ ಲೋಕಾರ್ಪಣೆ ಸಂದರ್ಭದಲ್ಲಿ ಇಲ್ಲಿ ವಿಶೇಷ ಸಂಭ್ರಮಾಚರಣೆಗಳನ್ನು ಆಯೋಜಿಸಿರುವುದು ಇಲ್ಲಿನ ರಾಮಭಕ್ತರ ಸಂತಸಕ್ಕೆ ಕಾರಣವಾಗಿದೆ.

ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News