/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

Duniya vijay Keerthi Pattadi : ನಟ ದುನಿಯಾ ವಿಜಯ್‌ ಆಗಾಗ ಕುಟುಂಬ ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಈ ಹಿಂದೆ ಮೊದಲ ಪತ್ನಿ ನಾಗರತ್ನ ವಿಚಾರವಾಗಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದರು, ಇದೀಗ ಮತ್ತೆ ತಮ್ಮ ಎರಡನೇ ಪತ್ನಿ ಕೀರ್ತಿ ಪಟ್ಟಾಡಿಯಿಂದ ದೂರವಾಗಿದ್ದಾರೆ ಎಂದು ಹೇಳಲಾಗುತ್ತಿದೆ. 

ಮೊದಲ ಪತ್ನಿ ನಾಗರತ್ನ ಜೊತೆಗೆ ಮೂರು ಮಕ್ಕಳು ಇದ್ದಾಗಲೇ ನಟ ವಿಜಯ್, ಕೀರ್ತಿ ಪಟ್ಟಾಡಿ ಅವರನ್ನು ಮದುವೆಯಾಗಿದ್ದರು. ಇದೀಗ ವಿಜಯ್ ಮತ್ತು ಕೀರ್ತಿ ಪಟ್ಟಾಡಿ ದೂರವಾಗಿದ್ದಾರೆ ಎಂಬ ವದಂತಿ ಕೂಡ ಕೇಳಿ ಬರುತ್ತಿದೆ. ಇದಕ್ಕೆ ಹಲವಾರು ಕಾರಣಗಳೂ ಸಹ ಇವೆ.

ಇದನ್ನೂ ಓದಿ:ರಾಕಿಂಗ್‌ ಸ್ಟಾರ್‌ ಯಶ್ ಬರ್ತ್‌ಡೇ ಕಾಮನ್ ಡಿಪಿ ಶಿವಣ್ಣನಿಂದ ರಿಲೀಸ್!

ಕೀರ್ತಿ ಕೈ ಹಿಡಿದ ನಂತರ ವಿಜಯ್‌ ತಮ್ಮ ಯಾವುದೇ ಸಿನಿಮಾ ಕಾರ್ಯಕ್ರಮ, ಶೂಟಿಂಗ್‌ ಸ್ಪಾಟ್‌ ಮತ್ತು ಇತರೆ ಸಮಾರಂಭಕ್ಕೆ ತಮ್ಮ ಪತ್ನಿಯನ್ನು ಕರೆದುಕೊಂಡು ಹೋಗುತ್ತಿದ್ದರು. ಅಲ್ಲದೆ, ಸ್ವತಃ ವಿಜಿ ಕೀರ್ತಿಯವರು ತಮ್ಮ ಬ್ಯಾಕ್ ಬೋನ್ ಅಂತ ಹೇಳಿಕೊಂಡಿದ್ದರು. ಆದ್ರೆ ಇತ್ತೀಚಿಗೆ ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗಿದೆ.  

ಈ ವಂದತಿ ಹರಡಲು ಇನ್ನೊಂದು ಬಹುಮುಖ್ಯ ಕಾರಣ ಅಂದ್ರೆ, ಕೀರ್ತಿಯವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಹೆಸರು ಬದಲಾಯಿಸಿಕೊಂಡಿದ್ದು, ಕೀರ್ತಿ ವಿಜಯ್ ಅಫೀಶಿಯಲ್ ಎಂದು ಹೆಸರನ್ನು ಸಧ್ಯ ಅವರು, ಕೀರ್ತಿ ಪಟ್ಟಾಡಿ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ದುನಿಯಾ ವಿಜಯ್ ಅವರೊಂದಿಗಿನ ಯಾವುದೇ ಒಂದೇ ಒಂದು ಫೋಟೋ ಇಲ್ಲದಂತೆ ನೋಡಿಕೊಂಡಿದ್ದಾರೆ. ಇದರಿಂದಾಗಿ ಇಬ್ಬರ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬ ಅನುಮಾನಕ್ಕೆ ಕಾರಣವಾಗಿದೆ.

ಇದನ್ನೂ ಓದಿ:ಬಿಗ್‌ ಬಾಸ್‌ನಲ್ಲಿ ಬಿಗ್‌ ಫೈಟ್.. ಕೆನ್ನೆಗೆ ಹೊಡೆದು ಮನೆಯಿಂದ ಎಲಿಮಿನೇಟ್‌ ಆದ ಸ್ಪರ್ಧಿ!

ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಆಕ್ಟಿವ್ ಆಗಿರುವ ಕೀರ್ತಿ ಪಟ್ಟಾಡಿ ಆಗ್ಗಾಗೆ ಫೋಟೋ, ರೀಲ್ಸ್‌ಗಳನ್ನು ಶೇರ್ ಮಾಡುತ್ತಿರುತ್ತಾರೆ. ಅಲ್ಲದೆ, ಬಾಸ್ ಜೊತೆಗಿನ ಪೋಟೋ ಹಂಚಿಕೊಳ್ಳಿ ಎಂಬ ನೆಟ್ಟಿಗರ ಕಾಮೆಂಟ್‌ಗಳಿಗೂ ಫೋಟೋ ಅಪ್ಲೋಡ್ ಮಾಡುತ್ತೇನೆ.. ಅಂತ ಹೇಳಿ ಸುಮ್ಮನಾಗುತ್ತಿದ್ದಾರೆ. ಸಧ್ಯ ಈ ಕುರಿತು ಕೀರ್ತಿ ಪಟ್ಟಾಡಿ ಪ್ರತಿಕ್ರಿಯೆ ನೀಡಿದ್ದು, "Always and Forever" ಎಂದು ಪ್ರತಿಕ್ರಿಯೆ ನೀಡುವ ಮೂಲಕ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ. 

ಕೀರ್ತಿ ಪಟ್ಟಾಡಿ ಮಾಡೆಲ್ ಆಗಿ ಗುರುತಿಸಿಕೊಂಡವರು. ಐಟಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಅವರು ಹಲವು ಜಾಹೀರಾತಿಗಳಲ್ಲಿ ನಟಿಸಿದ್ದರು. ತದನಂತರ ಸಿನಿಮಾ ಕ್ಷೇತ್ರಕ್ಕೂ ಕಾಲಿಟ್ಟು ಕೆಲವು ಚಿತ್ರಗಳಲ್ಲಿ ನಟಿಸಿದ್ದರು. 2014ರಲ್ಲಿ ದುನಿಯಾ ವಿಜಯ್‌ ಅವರನ್ನು ಮದುವೆಯಾದ ನಂತರ ಸಿನಿಮಾಗಳಿಂದ ದೂರ ಉಳಿದಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Section: 
English Title: 
duniya vijay living far from his second wife Keerthi Pattadi
News Source: 
Home Title: 

ಎರಡನೇ ಪತ್ನಿಯಿಂದಲೂ ದೂರವಾದ್ರಾ ನಟ ದುನಿಯಾ ವಿಜಯ್..! ಸತ್ಯ ಬಿಚ್ಚಿಟ್ಟ ಕೀರ್ತಿ

ಎರಡನೇ ಪತ್ನಿಯಿಂದಲೂ ದೂರವಾದ್ರಾ ನಟ ದುನಿಯಾ ವಿಜಯ್..! ಸತ್ಯ ಬಿಚ್ಚಿಟ್ಟ ಕೀರ್ತಿ
Yes
Is Blog?: 
No
Tags: 
Facebook Instant Article: 
Yes
Highlights: 

ನಟ ದುನಿಯಾ ವಿಜಯ್‌ ಕುರಿತ ಸುದ್ದಿಯೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಈ ಹಿಂದೆ ಮೊದಲ ಪತ್ನಿ ನಾಗರತ್ನ ವಿಚಾರವಾಗಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದ ವಿಜಯ್‌.

ಇದೀಗ ತಮ್ಮ ಎರಡನೇ ಪತ್ನಿ ಕೀರ್ತಿ ಪಟ್ಟಾಡಿಯಿಂದ ದೂರವಾಗಿದ್ದಾರೆ ಎನ್ನಲಾಗಿದೆ.

Mobile Title: 
ಎರಡನೇ ಪತ್ನಿಯಿಂದಲೂ ದೂರವಾದ್ರಾ ನಟ ದುನಿಯಾ ವಿಜಯ್..! ಸತ್ಯ ಬಿಚ್ಚಿಟ್ಟ ಕೀರ್ತಿ
Krishna N K
Publish Later: 
No
Publish At: 
Saturday, January 6, 2024 - 15:09
Created By: 
Krishna Kumar
Updated By: 
Krishna Kumar
Published By: 
Krishna Kumar
Request Count: 
1
Is Breaking News: 
No
Word Count: 
278