ರಾಕಿಂಗ್‌ ಸ್ಟಾರ್‌ ಯಶ್ ಬರ್ತ್‌ಡೇ ಕಾಮನ್ ಡಿಪಿ ಶಿವಣ್ಣನಿಂದ ರಿಲೀಸ್!

Yash Common DP: ಸ್ಯಾಂಡಲ್‌ವುಡ್‌ ನಟ ರಾಕಿಂಗ್‌ ಸ್ಟಾರ್‌ ಯಶ್‌ ಬರ್ತ್‌ಡೇ ವಿಶೇಷವಾಗಿ, ಯಶ್ ಹುಟ್ಟುಹಬ್ಬದ ಕಾಮನ್ ಡಿಪಿಯನ್ನು ಸೆಂಚುರಿಸ್ಟಾರ್ ಶಿವರಾಜ್ ಕುಮಾರ್ ರಿಲೀಸ್ ಮಾಡಿದ್ದಾರೆ.  

Written by - Zee Kannada News Desk | Last Updated : Jan 6, 2024, 02:42 PM IST
  • ನಟ ಯಶ್‌ ನಿನ್ನೆಯಷ್ಟೇ ಸೋಷಿಯಲ್‌ ಮಿಡಿಯಾದಲ್ಲಿ ಈ ವರ್ಷವೂ ತಾವು ಹುಟ್ಟುಹಬ್ಬದಂದು ಲಭ್ಯವಿರುವುದಿಲ್ಲ ಎಂದಿದ್ದರಿಂದ, ಅಭಿಮಾನಿಗಳ ಜೋಶ್‌ ಕಡಿಮೆ ಏನೂ ಆಗಿಲ್ಲ.
  • ನಟ ಶಿವರಾಜ್ ಕುಮಾರ್ ರಾಕಿಭಾಯ್‌ ಯಶ್‌ನ ಸಹೋದರನಂತೆ ಕಾಣುತ್ತಿದ್ದು, ಯಶ್ ಹುಟ್ಟುಹಬ್ಬಕ್ಕೆ ವಿಶೇಷ ಸಿಡಿಪಿ (ಕಾಮನ್ ಡಿಪಿ) ಬಿಡುಗಡೆ ಮಾಡಿದ್ದಾರೆ.
  • ಇತ್ತೀಚೆಗೆ ಯಾವುದೇ ಸ್ಟಾರ್‌ ನಟನ ಹುಟ್ಟುಹಬ್ಬಕ್ಕೆ ಈ ರೀತಿ ಸಿಡಿಪಿ ರಿಲೀಸ್‌ ಮಾಡಿದನ್ನು ಅಭಿಮಾನಿಗಳೆಲ್ಲರೂ ಸೋಷಿಯಲ್‌ ಮಿಡಿಯಾದಲ್ಲಿ ಹಂಚಿಕೊಳ್ಳುವುದು ಹೆಚ್ಚಾಗಿದೆ.
ರಾಕಿಂಗ್‌ ಸ್ಟಾರ್‌ ಯಶ್ ಬರ್ತ್‌ಡೇ ಕಾಮನ್ ಡಿಪಿ  ಶಿವಣ್ಣನಿಂದ ರಿಲೀಸ್! title=

Yash Birthday Common DP Released By Shivarajkumar: ಚಂದನವನದ ನಟ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬವನ್ನು ಜನವರಿ 8ಕ್ಕೆ ಅದ್ಧೂರಿಯಾಗಿ ಸೆಲೆಬ್ರೇಟ್‌ ಮಾಡಲು ಫ್ಯಾನ್ಸ್ ನಿರೀಕ್ಷೆಯಿಂದಿದ್ದರು. ಆದರೆ ನಟ ಯಶ್‌ ನಿನ್ನೆಯಷ್ಟೇ  ಸೋಷಿಯಲ್‌ ಮಿಡಿಯಾದಲ್ಲಿ ಈ ವರ್ಷವೂ ತಾವು ಹುಟ್ಟುಹಬ್ಬದಂದು ಲಭ್ಯವಿರುವುದಿಲ್ಲ ಎಂದಿದ್ದರಿಂದ, ಅಭಿಮಾನಿಗಳ ಜೋಶ್‌ ಕಡಿಮೆ ಏನೂ ಆಗಿಲ್ಲ. ಕಳೆದ ನಾಲ್ಕು ವರ್ಷಗಳಂತೆ ನೆಚ್ಚಿನ ನಟ ಅನುಪಸ್ಥಿತಿಯಲ್ಲಿಯೂ ಅವರ ಜನ್ಮದಿನವನ್ನು ಆಚರಿಸಲು ಸಿದ್ಧವಾಗಿದ್ದು, ಕಾಮನ್ ಡಿಪಿ ಇಂದು ಅನಾವರಣ ಮಾಡಲಾಗಿದೆ.

ಹೌದು.. ನಟ ಶಿವರಾಜ್ ಕುಮಾರ್ ರಾಕಿಭಾಯ್‌ ಯಶ್‌ನ ಸಹೋದರನಂತೆ ಕಾಣುತ್ತಿದ್ದು,  ಯಶ್ ಹುಟ್ಟುಹಬ್ಬಕ್ಕೆ ವಿಶೇಷ ಸಿಡಿಪಿ (ಕಾಮನ್ ಡಿಪಿ) ಬಿಡುಗಡೆ ಮಾಡಿದ್ದಾರೆ. ಶಿವಣ್ಣ ‘ಕೆಜಿಎಫ್’ ಸಿನಿಮಾದ ರಾಕಿಭಾಯ್ ಪಾತ್ರವನ್ನು ಸಿಡಿಪಿಯಲ್ಲಿ ಬಳಸಿಕೊಳ್ಳಲಾಗಿದ್ದು, ಅದರಲ್ಲಿ ಸ್ಟೈಲ್ ಆಗಿ ಕಾರಿನ ಮೇಲೆ ಕೂತು, ಸಿಗರೇಟು ಸೇದುತ್ತಿರುವ ಯಶ್ ಚಿತ್ರವನ್ನು ಒಳಗೊಂಡಿದೆ. ಹಾಗೆ ಯಶ್‌ ಹಿಂಬದಿಯಲ್ಲಿ ಫ್ಯಾನ್ಸ್‌ ಸಂಭ್ರಮಿಸುತ್ತಿರುವ ಚಿತ್ರವೂ ಇದ್ದು, ಜೊತೆಗೆ ‘ಟಾಕ್ಸಿಕ್’ ಪೋಸ್ಟರ್‌ನಲ್ಲಿ ಯಶ್​ರ ಕೈಯಲ್ಲಿರುವ ಬಂದೂಕಿನ ಮಾದರಿಯ ಹಲವು ಬಂದೂಕುಗಳು ಸಿಡಿಪಿಯಲ್ಲಿ ಇವೆ. 

 
 
 
 

 
 
 
 
 
 
 
 
 
 
 

A post shared by DrShivaRajkumar (@nimmashivarajkumar)

ಇದನ್ನೂ ಓದಿ: ಮಾಲೆ ಧರಿಸಿ ಅಯ್ಯಪ್ಪನ ದರ್ಶನ ಪಡೆದ ತೆಲುಗು ಖ್ಯಾತ ನಟ ಸುನಿಲ್..! 

ನಟ ರಾಕಿಂಗ್‌ ಸ್ಟಾರ್‌ ಯಶ್‌ರ ಸಿಡಿಪಿ ರಿಲೀಸ್‌ ಮಾಡಿರುವ ನಟ ಶಿವರಾಜ್ ಕುಮಾರ್, ‘ಯಶ್ ಹಾಗೂ ಅವರ ಎಲ್ಲಾ ಅಭಿಮಾನಿಗಳಿಗೂ ಶುಭಾಶಯಗಳು. ಸಿಡಿಪಿ ತುಂಬಾ ಚೆನ್ನಾಗಿದೆ’ ಬರೆದುಕೊಂಡಿದ್ದಾರೆ. ರಾಕಿಂಗ್‌ ಸ್ಟಾರ್‌ನ ಈ ಸಿಡಿಪಿಯನ್ನು ಯಶ್‌ ಫ್ಯಾನ್ಸ್‌ಗಳೆಲ್ಲರೂ ಇಂದು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಳ್ಳುತ್ತಿದ್ದಾರೆ. ಈ ರೀತಿ ನಟ ಯಶ್‌ಗೆ  ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿ, ಇದೇ ಸಿಡಿಪಿಯನ್ನೇ ಫ್ಲೆಕ್ಸ್‌ಗಳಲ್ಲಿಯೂ ಫ್ಯಾನ್ಸ್‌ ಬಳಸುತ್ತಿದ್ದಾರೆ. 

ಇತ್ತೀಚೆಗೆ  ಯಾವುದೇ ಸ್ಟಾರ್‌ ನಟನ ಹುಟ್ಟುಹಬ್ಬಕ್ಕೆ ಈ ರೀತಿ ಸಿಡಿಪಿ ರಿಲೀಸ್‌ ಮಾಡಿದನ್ನು ಅಭಿಮಾನಿಗಳೆಲ್ಲರೂ ಸೋಷಿಯಲ್‌ ಮಿಡಿಯಾದಲ್ಲಿ ಹಂಚಿಕೊಳ್ಳುವುದು ಹೆಚ್ಚಾಗಿದೆ.  ಜನವರಿ 8ಕ್ಕೆ ತುಫಾನ್‌ ಯಶ್‌ ಹುಟ್ಟುಹಬ್ಬವಾಗಿದ್ದು, ಆದರೇ ಈ ನಟ ಪ್ರಸ್ತುತ ‘ಟಾಕ್ಸಿಕ್’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಕಾರಣ, ಫ್ಯಾನ್ಸ್‌ ಭೇಟಿ ಮಾಡುವುದಕ್ಕಾಗಲ್ಲವೆಂದು ಎಂದು ತಿಳಿಸಿದ್ದರೂ ಕೂಡ, ಯಶ್‌ ಅಭಿಮಾನಿಗಳು, ತಮ್ಮ ಅಚ್ಚುಮೆಚ್ಚಿನ ನಟನ ಹುಟ್ಟುಹಬ್ಬದ ವೇಳೆ ಕೆಲವು ಸಮಾಜ ಮುಖಿ ಕಾರ್ಯಗಳನ್ನು ಮಾಡಲು ಯೋಜನೆ ಹಾಕಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News