ಕಾಟ್ನಿ: ಮಧ್ಯಪ್ರದೇಶದ ಕಾಟ್ನಿ ಪ್ರದೇಶದಲ್ಲಿ ಮಂಗಳವಾರ ಹುಲಿಯೊಂದು ನೀರಿಲ್ಲದ ಬಾವಿಗೆ ಬಿದ್ದ ಘಟನೆ ನಡೆದಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ತಂಡ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತವಾಗಿದೆ.
Katni, Madhya Pradesh: A tiger has fallen in a well in Pipariyakala village of Barhi. Forest Department's team present at the spot. Rescue operation underway pic.twitter.com/KqANX8djUV
— ANI (@ANI) August 13, 2019
"ಮಂಗಳವಾರ ಮುಂಜಾನೆ ಹುಲಿಯೊಂದು ಬಾವಿಯೊಳಗೆ ಬಿದ್ದಿರುವ ಬಗ್ಗೆ ನಮಗೆ ವಿಷಯ ತಿಳಿಯಿತು. ಕೂಡಲೇ ರಕ್ಷಣಾ ತಂಡವನ್ನು ರಚಿಸಿ ಕೆಲವು ಸೂಚನೆಗಳೊಂದಿಗೆ ಸ್ಥಳಕ್ಕೆ ಕಳುಹಿಸಲಾಗಿದೆ. ಬಾವಿಯ ಸುತ್ತ ಜನರು ಸುತ್ತುವರಿದಿದ್ದರೆ, ಮೊದಲು ಅವರನ್ನು ಚದುರಿಸಿ ಬಳಿಕ ಕಾರ್ಯಾಚರಣೆ ನಡೆಸಲು ಸೂಚನೆ ನೀಡಲಾಗಿದೆ" ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ.
"ಅಲ್ಲದೆ, ಹುಲಿಯನ್ನು ಬಾವಿಯಿಂದ ಹೊರಗೆ ತೆಗೆದು ಆಸ್ಪತ್ರೆಗೆ ಕರೆದೊಯ್ಯುವವರೆಗೂ ಹುಲಿ ಯಾವ ಸಮಯದಲ್ಲಿ, ಯಾವ ದಿನದಂದು ಬಾವಿಗೆ ಬಿದ್ದಿದೆ ಎಂದು ಹೇಳಲು ಸಾಧ್ಯವಿಲ್ಲ. ರಕ್ಷಣಾ ಕಾರ್ಯಾಚರಣೆ ನಡೆಸಿದ ನಂತರ, ಹುಲಿ ಆರೋಗ್ಯವಾಗಿದ್ದರೆ ಅದನ್ನು ತಾಯಿಯಾ ಬಳಿ ಬಿಡಲಾಗುವುದು, ಇಲ್ಲವಾದಲ್ಲಿ ಚಿಕಿತ್ಸೆ ಮುಂದುವರೆಸಲಾಗುವುದು. ಸದ್ಯ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ" ಎಂದು ಅವರು ತಿಳಿಸಿದ್ದಾರೆ.