’ಬಿಗ್ ಬಾಸ್ ಸೀಸನ್-10 ರಲ್ಲಿ ಬೆಂಕಿ ಬಂತೋ’…ಯಾರು ಆ ಬೆಂಕಿ..? ಇಲ್ಲಿದೆ ನೋಡಿ ಉತ್ತರ..!

ಟೈಟಲ್ ನೋಡಿ ಕನ್ಫೂಸ್ ಆಗ್ಬೇಡಿ..ಬಿಗ್ ಬಾಸ್ ಸೀಸನ್ 10ರಲ್ಲಿ ಅದೆಲ್ಲಿ ಬೆಂಕಿ ಬಂತು ಅಂತಾ ಯೋಚನೆ ಮಾಡಬೇಡಿ..ನಾವು ಹೇಳ್ತಿರೋದು ಬೆಂಕಿಯಂತೆ ಫರ್ಪೆಮೆನ್ಸ್ ಕೊಡ್ತಿರುವ ಬೋಲ್ಡ್ ಬ್ಯೂಟಿ ತನಿಷಾ ಕುಪ್ಪಂಡ ಬಗ್ಗೆ. ಕನ್ನಡ ಬಿಗ್ ಬಾಸ್ ಸೀಸನ್ 10ರ ಪ್ರಬಲ ಸ್ಪರ್ಧಿಯಾಗಿರುವ, ಸಖತ್ ಫೈಟ್ ಕೊಡ್ತಿರುವ ಪೆಂಟಗನ್ ಸುಂದರಿ ಬಗ್ಗೆ ಹಾಡೊಂದನ್ನು ಬಿಡುಗಡೆ ಮಾಡಲಾಗಿದೆ.

Written by - YASHODHA POOJARI | Edited by - Manjunath N | Last Updated : Jan 8, 2024, 10:50 PM IST
  • ಬೆಂಕಿ ಬಂತೋ ಎಂಬ ಹಾಡಿಗೆ ಶಮಂತ್ ನಾಗಾರಾಜ್ ಕ್ಯಾಚಿ ಮ್ಯಾಚಿ ಪದ ಸೇರಿಸಿ ಸಾಹಿತ್ಯ ಬರೆದಿದ್ದಾರೆ
  • ಶಶಾಂಕ್ ಶೇಷಗಿರಿ ಈ ಜಬರ್ದಸ್ತ್ ಗಾನಬಜಾನಕ್ಕೆ ಧ್ವನಿಯಾಗುವುದರ ಜೊತೆಗೆ ಮ್ಯೂಸಿಕ್ ಕಿಕ್ ಕೊಟ್ಟಿದ್ದಾರೆ
  • ತನಿಷಾ ಕುಪ್ಪಂಡ ಎನರ್ಜಿ, ಸ್ಟೈಲ್, ಮಾತಿಗೆ ನಿಂತ್ರೆ ಎದುರಾಳಿಗಳಿ ಟಕ್ಕರ್ ಕೊಡುವ ಆಕೆಯ ಗುಣವನ್ನು ವರ್ಣಿಸುವ ಹಾಡು ಇದಾಗಿದೆ
’ಬಿಗ್ ಬಾಸ್ ಸೀಸನ್-10 ರಲ್ಲಿ ಬೆಂಕಿ ಬಂತೋ’…ಯಾರು ಆ ಬೆಂಕಿ..? ಇಲ್ಲಿದೆ ನೋಡಿ ಉತ್ತರ..! title=

ಬೆಂಗಳೂರು: ಟೈಟಲ್ ನೋಡಿ ಕನ್ಫೂಸ್ ಆಗ್ಬೇಡಿ..ಬಿಗ್ ಬಾಸ್ ಸೀಸನ್ 10ರಲ್ಲಿ ಅದೆಲ್ಲಿ ಬೆಂಕಿ ಬಂತು ಅಂತಾ ಯೋಚನೆ ಮಾಡಬೇಡಿ..ನಾವು ಹೇಳ್ತಿರೋದು ಬೆಂಕಿಯಂತೆ ಫರ್ಪೆಮೆನ್ಸ್ ಕೊಡ್ತಿರುವ ಬೋಲ್ಡ್ ಬ್ಯೂಟಿ ತನಿಷಾ ಕುಪ್ಪಂಡ ಬಗ್ಗೆ. ಕನ್ನಡ ಬಿಗ್ ಬಾಸ್ ಸೀಸನ್ 10ರ ಪ್ರಬಲ ಸ್ಪರ್ಧಿಯಾಗಿರುವ, ಸಖತ್ ಫೈಟ್ ಕೊಡ್ತಿರುವ ಪೆಂಟಗನ್ ಸುಂದರಿ ಬಗ್ಗೆ ಹಾಡೊಂದನ್ನು ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ: ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯೆದಲ್ಲಿಯೇ ಹೆರಿಗೆ..!

ಬೆಂಕಿ ಬಂತೋ ಎಂಬ ಹಾಡಿಗೆ ಶಮಂತ್ ನಾಗಾರಾಜ್ ಕ್ಯಾಚಿ ಮ್ಯಾಚಿ ಪದ ಸೇರಿಸಿ ಸಾಹಿತ್ಯ ಬರೆದಿದ್ದಾರೆ. ಶಶಾಂಕ್ ಶೇಷಗಿರಿ ಈ ಜಬರ್ದಸ್ತ್ ಗಾನಬಜಾನಕ್ಕೆ  ಧ್ವನಿಯಾಗುವುದರ ಜೊತೆಗೆ ಮ್ಯೂಸಿಕ್ ಕಿಕ್ ಕೊಟ್ಟಿದ್ದಾರೆ. ತನಿಷಾ ಕುಪ್ಪಂಡ ಎನರ್ಜಿ, ಸ್ಟೈಲ್, ಮಾತಿಗೆ ನಿಂತ್ರೆ ಎದುರಾಳಿಗಳಿ ಟಕ್ಕರ್ ಕೊಡುವ ಆಕೆಯ ಗುಣವನ್ನು ವರ್ಣಿಸುವ ಹಾಡು ಇದಾಗಿದೆ. ಈಕೆಯೇ ಬಿಗ್ ಬಾಸ್ ಬೆಂಕಿ ಚೆಂಡು ಎಂಬುದೇ ಹಾಡಿನ ಹೈಲೆಟ್ಸ್. ಈ ಮಸ್ತ್ ಸಿಂಗಿಂಗ್ ಸೆನ್ಸೇಷನ್ ನೋಡಿದವರೆಲ್ಲ ತನಿಷಾ ಗೆಲ್ಲಬೇಕು ಅಂತಾ ಕಮೆಂಟ್ ಹಾಕುತ್ತಿದ್ದಾರೆ.

ಇದನ್ನೂ ಓದಿ: ಕೆಪಿಸಿಸಿ ಕಚೇರಿಯಲ್ಲಿ ಲೋಕಸಭೆ ಬಗ್ಗೆ ಮಹತ್ವದ ಮೀಟಿಂಗ್‌

ಮಂಗಳಗೌರಿ ಸೀರಿಯಲ್ ನಲ್ಲಿ ಖಳನಾಯಕಿಯಾಗಿ ಕಾಣಿಸಿಕೊಂಡಿದ್ದ ತನಿಷಾ ಕುಪ್ಪಂಡ, ಆ ನಂತ್ರ ಪೆಂಟಗನ್ ಸಿನಿಮಾ ಮೂಲಕ ಬೆಳ್ಳಿಪರದೆಗೂ ಎಂಟ್ರಿ ಕೊಟ್ಟರು. ನಂತರ ಕೋಮಲ್ ಅವರ ಉಂಡೆನಾಮ ಚಿತ್ರದಲ್ಲೂ ಕಾಣಿಸಿಕೊಂಡರು ತನಿಷಾ ಇನ್ನು ಅನೇಕ ಹೊಸ ಹೊಸ ಪ್ರಾಜೆಕ್ಟ್ ನಲ್ಲಿ ಬ್ಯುಸಿಯಾಗಿರುವ ಈ ಬೋಲ್ಡ್ ಬ್ಯೂಟಿ ಸದ್ಯ ಬಿಗ್ ಬಾಸ್ ಸೀಸನ್ 10ರಲ್ಲಿ ಪ್ರಬಲ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ. ದೊಡ್ಮನೆ ಆಟದಲ್ಲಿ ಗೆದ್ದು ಬಾ ತನಿಷಾ ಅಂತಾ ಆಕೆಯ ಫ್ಯಾನ್ಸ್ ಬೆಂಬಲ ನೀಡುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News