ಅತ್ಯಾಚಾರ ಆರೋಪ ಸಾಬೀತು; ಕ್ರಿಕೆಟಿಗ ಸಂದೀಪ್ ಲಮಿಚಾನೆಗೆ 8 ವರ್ಷ ಜೈಲು ಶಿಕ್ಷೆ!

Cricketer Sandeep Lamichane: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನೇಪಾಳದ ಕ್ರಿಕೆಟಿಗ ಮತ್ತು ದೆಹಲಿ ಕ್ಯಾಪಿಟಲ್ಸ್‌ನ ಮಾಜಿ ಆಟಗಾರ ಸಂದೀಪ್ ಲಾಮಿಚಾನೆಗೆ ನೇಪಾಳಿ ನ್ಯಾಯಾಲಯವು 8 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

Written by - Savita M B | Last Updated : Jan 11, 2024, 11:44 AM IST
  • ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವೆ ನಡೆದ ಏಷ್ಯಾಕಪ್ ಸರಣಿಯಲ್ಲಿ ಸಂದೀಪ್ ಲಮಿಚಾನೆ ನೇಪಾಳ ತಂಡದಲ್ಲಿ ಆಡಿದ್ದರು
  • 17 ವರ್ಷದ ಹುಡುಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
  • ಈ ಹಿನ್ನೆಲೆಯಲ್ಲಿ ಇದೀಗ ನೇಪಾಳ ನ್ಯಾಯಾಲಯ ಸಂದೀಪ್ ಲಾಮಿಚಾನೆಗೆ ಶಿಕ್ಷೆ ಪ್ರಕಟಿಸಿದೆ.
ಅತ್ಯಾಚಾರ ಆರೋಪ ಸಾಬೀತು; ಕ್ರಿಕೆಟಿಗ ಸಂದೀಪ್ ಲಮಿಚಾನೆಗೆ 8 ವರ್ಷ ಜೈಲು ಶಿಕ್ಷೆ! title=

Cricketer Sandeep Lamichane Jailed: ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವೆ ನಡೆದ ಏಷ್ಯಾಕಪ್ ಸರಣಿಯಲ್ಲಿ ಸಂದೀಪ್ ಲಾಮಿಚಾನೆ ನೇಪಾಳ ತಂಡದಲ್ಲಿ ಆಡಿದ್ದರು. ಹೆಚ್ಚು ಪ್ರಭಾವ ಬೀರಲು ವಿಫಲವಾದ ಅವರು ಎರಡೂ ಪಂದ್ಯಗಳಲ್ಲಿ ಸೋತರು ಮತ್ತು ಏಷ್ಯಾ ಕಪ್‌ನಿಂದ ಹೊರಬಿದ್ದರು. ಅದೇ ರೀತಿ 2018, 2019 ಮತ್ತು 2020ರ ಕೊನೆಯ ವರ್ಷಗಳಲ್ಲಿ 20 ಲಕ್ಷ ರೂ.ಗಳ ಮೂಲ ಬೆಲೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದರು.

ಆದರೆ 2018ರಲ್ಲಿ 3 ಪಂದ್ಯಗಳನ್ನು ಆಡಿದ್ದು 5 ವಿಕೆಟ್ ಹಾಗೂ 2019ರಲ್ಲಿ 6 ಪಂದ್ಯಗಳನ್ನು ಆಡಿ 8 ವಿಕೆಟ್ ಪಡೆದಿದ್ದಾರೆ. ಆ ನಂತರ ಅವರು ಐಪಿಎಲ್ ಸರಣಿಗೆ ಬರಲಿಲ್ಲ. ನೇಪಾಳ ತಂಡದಲ್ಲಿ ಆಡುತ್ತಿರುವ ಸಂದೀಪ್ ಇದುವರೆಗೆ 51 ಏಕದಿನ ಪಂದ್ಯಗಳನ್ನು ಆಡಿದ್ದು, 52 ಟಿ20 ಪಂದ್ಯಗಳಲ್ಲಿ 112 ವಿಕೆಟ್ ಹಾಗೂ 98 ವಿಕೆಟ್ ಪಡೆದಿದ್ದಾರೆ.

ಇದನ್ನೂ ಓದಿ-IND vs AFG: ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಟಿ20 ತಂಡ ಸೇರದಿರಲು ಕಾರಣ ಇದೇ.!

 2022 ರಲ್ಲಿ, ಸಂದೀಪ್ ಲಮಿಚಾನೆ ಕಠ್ಮಂಡುವಿನ ಹೋಟೆಲ್‌ನಲ್ಲಿ 17 ವರ್ಷದ ಹುಡುಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು.. ಇವರು ವೆಸ್ಟ್ ಇಂಡೀಸ್ ನಲ್ಲಿ ಕ್ರಿಕೆಟ್ ಆಡುತ್ತಿದ್ದ ವೇಳೆ ದೂರು ಈ ದಾಖಲಾಗಿದ್ದು.. ನಂತರ ಇವರನ್ನು ತಂಡದಿಂದ ತೆಗೆದುಹಾಕಲಾಗಿತ್ತು.. ಆದರೆ ಸಂದೀಪ್ ತಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದರು..

ಇದನ್ನೂ ಓದಿ-IPL 2024: ಮೊಣಕಾಲು ಗಾಯಕ್ಕೆ ತುತ್ತಾದ ಇಂಗ್ಲೆಂಡ್ ಆಲ್‌ರೌಂಡರ್..! ಆರ್‌ಸಿಬಿ ತಂಡಕ್ಕೆ ಸಂಕಷ್ಟ.!

ಲೈಂಗಿಕ ಆರೋಪದ ಮೇಲೆ ಅವರನ್ನು ಬಂಧಿಸಿ.. ಕೆಲವು ತಿಂಗಳ ನಂತರ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಕಳೆದ ವರ್ಷ ಡಿಸೆಂಬರ್ 29 ರಂದು ಅವರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರಣೆ ನಡೆದಿತ್ತು. ಈ ಸಂದರ್ಭದಲ್ಲಿ, ಅವರನ್ನು ಅಪರಾಧಿ ಎಂದು ಘೋಷಿಸಿ..ಆತನ ಶಿಕ್ಷೆಯ ವಿವರವನ್ನು ಜನವರಿಯಲ್ಲಿ ಪ್ರಕಟಿಸಲಾಗುವುದು ಎಂದು ಹೇಳಲಾಗಿತ್ತು.. 

ಈ ಹಿನ್ನೆಲೆಯಲ್ಲಿ ಇದೀಗ ನೇಪಾಳ ನ್ಯಾಯಾಲಯ ಸಂದೀಪ್ ಲಾಮಿಚಾನೆಗೆ ಶಿಕ್ಷೆ ಪ್ರಕಟಿಸಿದೆ. ಅದರಂತೆ, ಶಿಶಿರ್ ರಾಜ್ ಠಗಲ್ ಅವರ ಪೀಠವು ಇಂದು ವಿಚಾರಣೆಯ ನಂತರ ಪರಿಹಾರ ಮತ್ತು ದಂಡದೊಂದಿಗೆ 8 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ ಎಂದು ಮ್ಯಾಜಿಸ್ಟ್ರೇಟ್ ರಾಮು ಶರ್ಮಾ ದೃಢಪಡಿಸಿದ್ದಾರೆ.. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News