ICC Ban on Nasir Hossain: ಐಫೋನ್ ಬಳಸಿದ್ದಕ್ಕೆ ಯಾರಾದರೂ ಶಿಕ್ಷೆ ಅಥವಾ ನಿಷೇಧ ಹೇರಿದರೆಂದು ಹೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ಆದರೆ ಇದು ಸತ್ಯ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಾಂಗ್ಲಾದೇಶದ 32 ವರ್ಷದ ಆಲ್ರೌಂಡರ್ ನಾಸಿರ್ ಹೊಸೈನ್ ಅವರನ್ನು 2 ವರ್ಷಗಳ ಕಾಲ ನಿಷೇಧಿಸಿದೆ. ಇದಕ್ಕೆ ಕಾರಣ ಐಫೋನ್.
ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಭ್ರಷ್ಟಾಚಾರ ವಿರೋಧಿ ಸಂಹಿತೆಯ ಅಡಿಯಲ್ಲಿ ಮೂರು ಆರೋಪಗಳನ್ನು ಒಪ್ಪಿಕೊಂಡ ನಂತರ ಬಾಂಗ್ಲಾದೇಶದ ಆಲ್ರೌಂಡರ್ ನಾಸಿರ್ ಹೊಸೈನ್ ಅವರನ್ನು ಮಂಗಳವಾರ ಎರಡು ವರ್ಷಗಳ ಕಾಲ ಎಲ್ಲಾ ಮಾದರಿಯ ಕ್ರಿಕೆಟ್ನಿಂದ ನಿಷೇಧಿಸಲಾಗಿದೆ.
ಐಸಿಸಿ ಪ್ರಕಾರ, “ನಾಸಿರ್ ಹುಸೇನ್ ಅವರು ಪಡೆದ ಉಡುಗೊರೆಯನ್ನು ಬಹಿರಂಗಪಡಿಸಲಿಲ್ಲ. ಅವರು ಐಫೋನ್-12 ಅನ್ನು ಉಡುಗೊರೆಯಾಗಿ ಸ್ವೀಕರಿಸಿದ್ದರು. ಆದರೆ ಅದರ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಲಿಲ್ಲ. ಇದಲ್ಲದೆ, ಈ ಕ್ರಿಕೆಟಿಗ ಭ್ರಷ್ಟ ಚಟುವಟಿಕೆಗಳಲ್ಲಿ ಭಾಗವಹಿಸಲು ನೀಡಿದ ಪ್ರಸ್ತಾಪದ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗೆ ತಿಳಿಸಿರಲಿಲ್ಲ. ಅಷ್ಟೇ ಅಲ್ಲ, ಹುಸೇನ್ ತನಿಖೆಗೂ ಸಹಕರಿಸಲಿಲ್ಲ” ಎಂದು ಹೇಳಿದೆ.
ಇದನ್ನೂ ಓದಿ: Rashi Bhavishya: ಇಂದು ಸಿದ್ಧಯೋಗ: ಈ ರಾಶಿಗಳಿಗೆ ವೃತ್ತಿಯಲ್ಲಿ ಹಿಂದೆಂದೂ ಕಂಡಿರದ ಯಶಸ್ಸು
ಐಸಿಸಿ ಹೊರಡಿಸಿದ ಹೇಳಿಕೆಯ ಪ್ರಕಾರ, ಹುಸೇನ್ ಅವರು ಆರೋಪಗಳನ್ನು ಒಪ್ಪಿಕೊಂಡಿದ್ದಾರೆ ಮತ್ತು ನಿಷೇಧಕ್ಕೆ ಒಪ್ಪಿದ್ದಾರೆ. 7 ಏಪ್ರಿಲ್ 2025 ರ ನಂತರ ಕ್ರಿಕೆಟ್ ಚಟುವಟಿಕೆಗಳಿಗೆ ಭಾಗವಹಿಸಬಹುದು. 2020-21ರಲ್ಲಿ ಅಬುಧಾಬಿ T10 ನಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತಿರುವ ಪುಣೆ ಡೆವಿಲ್ಸ್ ಫ್ರಾಂಚೈಸಿಗೆ ಸಂಬಂಧಿಸಿದ ಎಂಟು ಜನರಲ್ಲಿ ನಾಸಿರ್ ಹುಸೇನ್ ಕೂಡ ಸೇರಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.