ಗೋಲ್ಡನ್ ಗರ್ಲ್ ನಟಿ ಅಮೂಲ್ಯ ಹುಟ್ಟುಹಬ್ಬ

ಇಪ್ಪತ್ತೈದನೆ ವರ್ಷ ಕ್ಕೆ ಕಾಲಿಟ್ಟ ಸ್ಯಾಂಡಲ್ ವುಡ್ ನಟಿ ಅಮೂಲ್ಯ. ಹುಟ್ಟು ಹಬ್ಬದ ದಿನ ಅಭಿಮಾನಿಗಳಿಗೆ ಗಿಡ ವಿತರಣೆ ಮಾಡುವ ಮೂಲಕ ವಿಶೇಷವಾಗಿ ತಮ್ಮ ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿರುವ ಅಮೂಲ್ಯ.

Last Updated : Sep 14, 2017, 11:01 AM IST
ಗೋಲ್ಡನ್ ಗರ್ಲ್ ನಟಿ ಅಮೂಲ್ಯ ಹುಟ್ಟುಹಬ್ಬ title=

ಬೆಂಗಳೂರು: ಸ್ಯಾಂಡಲ್ ವುಡ್ ನಟಿ, ಗೋಲ್ಡನ್ ಗರ್ಲ್ ಅಮೂಲ್ಯ ಜಗದೀಶ್ ಇಂದು ಇಪ್ಪತ್ತೈದನೇ ವಸಂತಕ್ಕೆ ಕಾಲಿರಿಸಿದ್ದಾರೆ. ಪತಿ ಜಗದೀಶ್ ಮನೆಯಲ್ಲಿ ಈ ಬಾರಿ ತಮ್ಮ ಮೊದಲ ಹುಟ್ಟುಹಬ್ಬದ ಆಚರಣೆಯಲ್ಲಿ ನಟಿ ಅಮೂಲ್ಯ ಕಂಗೊಳಿಸುತ್ತಿದ್ದಾರೆ.

ಆರ್.ಆರ್.ನಗರದಲ್ಲಿರುವ ಜಗದೀಶ್ ನಿವಾಸದಲ್ಲಿ‌ ಹುಟ್ಟುಹಬ್ಬ ಆಚರಣೆಗೆ ಭರ್ಜರಿ ತಯಾರಿ ನಡೆದಿದೆ. 
ಅಮೂಲ್ಯ ಹುಟ್ಟು ಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ  ಗಿಡ ವಿತರಣೆ ಮಾಡಲಿದ್ದಾರೆ ಹಾಗೂ ರಾಮನಗರದಲ್ಲಿ ಅಂದ ಮಕ್ಕಳ ಆಶ್ರಮಕ್ಕೆ ಬೇಟಿ ನೀಡಿ ಹಣ್ಣು ಹಂಪಲು ಸಹ ವಿತರಣೆ ಮಾಡಲಿದ್ದಾರೆ.

ಅಮೂಲ್ಯ-ಜಗದೀಶ್ ದಂಪತಿಗಳು ತಮ್ಮ ಮದುವೆಯ ದಿನವೂ ಗಿಡ ನೆಡುವ ಮೂಲಕ ಪರಿಸರ ಪ್ರೇಮ ಮೆರೆದಿದ್ದರು. ಹುಟ್ಟು ಹಬ್ಬದ ದಿನ ಅಭಿಮಾನಿಗಳಿಗೆ ಗಿಡ ವಿತರಣೆ ಮಾಡುವ ಮೂಲಕ ವಿಶೇಷವಾಗಿ ತಮ್ಮ ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಇವರ ಈ ಪರಿಸರ ಕಾಳಜಿಗೆ ಅಭಿನಂದನೆ ಸಲ್ಲಿಸುತ್ತಾ, ಅಮೂಲ್ಯ ಸುಖ-ಸಂತೋಷದಿಂದ ಜೀವಿಸಲಿ ಎಂದು ಶುಭ ಹಾರೈಸೋಣ.

Trending News