Lalbagh Flower Show: 75ನೇ ವರ್ಷದ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಸಸ್ಯಕಾಶಿ ಲಾಲ್ಬಾಗ್ನಲ್ಲಿ 215ನೇ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಫಲಪುಷ್ಪ ಪ್ರದರ್ಶನಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು. ನಿನ್ನೆ (ಜನವರಿ 24, ಬುಧವಾರ) ಸಿದ್ದಗಂಗಾ ಮಠದ ಶ್ರೀಗಳು ಕೂಡ ಭೇಟಿ ನೀಡಿ ಫಲಪುಷ್ಪ ಪ್ರದರ್ಶನ ವೀಕ್ಷಿಸಿದರು.
75ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಈ ಬಾರಿ ಲಾಲ್ಬಾಗ್ನ ಗಾಜಿನ ಮನೆಯಲ್ಲಿ 12ನೇ ಶತಮಾನದ ಕೂಡಲ ಸಂಗಮ ಶ್ರಿಬಸವಣ್ಣನವರ ಅನುಭವ ಮಂಟಪ ಈ ಬಾರಿ ಹೈಲೈಟ್ ಆಗಿತ್ತು. ಇನ್ನೂ ಫಲಪುಷ್ಪ ಪ್ರದರ್ಶನಕ್ಕೆ ಸಿದ್ದಗಂಗಾ ಶ್ರೀಗಳು ಲಾಲ್ಬಾಗ್ಗೆ ಭೇಟಿ ನೀಡಿ ಪುಷ್ಪ ಪ್ರದರ್ಶನವನ್ನು ವೀಕ್ಷಿಸಿದರು.
ಇದನ್ನೂ ಓದಿ- Republic Day 2024: ಗಣರಾಜ್ಯೋತ್ಸವ ಆಚರಣೆಗಾಗಿ ಹೀಗಿರಲಿ ನಿಮ್ಮ ಸ್ಟೈಲ್
ಈ ಸಂದರ್ಭದಲ್ಲಿ ವಿಶ್ವಗುರು ಬಸವಣ್ಣನಿಗೆ ಪುಷ್ಪಾರ್ಚನೆ ಮಾಡಿದ ಶ್ರೀಗಳಿಗೆ ತೋಟಗಾರಿಕೆ ಇಲಾಖೆಯಿಂದ ಸನ್ಮಾನ ಮಾಡಿದರು. ಈ ವೇಳೆ ಮಾತನಾಡಿದ ಶ್ರೀಗಳು, ಬೆಂಗಳೂರಿನ ಲಾಲ್ಬಾಗ್ಗೆ ದೊಡ್ಡ ಇತಿಹಾಸವಿದೆ. ವರ್ಷಕ್ಕೆ ಲಾಲ್ಬಾಗ್ನಲ್ಲಿ 2 ಬಾರಿ ಜಾತ್ರೆ ನಡೆಯುತ್ತೆ. ಒಂದು ಸ್ವಾತಂತ್ರ್ಯೋತ್ಸವ ದಿನ ಇನ್ನೊಂದು ಗಣರಾಜ್ಯೋತ್ಸವ ದಿನ. ನಮ್ಮ ಜನಗಳು ಈ ದಿನಕ್ಕಾಗಿ ಕಾಯುತ್ತಿರುತ್ತಾರೆ. ಈ ಬಾರಿ ಲಾಲ್ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ವಿಶ್ವಗುರು ಬಸವಣ್ಣನವರನ್ನ ಮುಖ್ಯವಾಗಿ ತೆಗೆದುಕೊಂಡಿರುವುದು ಖುಷಿ ವಿಚಾರ ಅಂತ ಹೇಳಿದರು.
ಇನ್ನೂ ಈ ಬಾರಿ ಫಲಪುಷ್ಪ ಪ್ರದರ್ಶನಕ್ಕೆ ಶಾಲಾ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು ಅನುಭವ ಮಂಟಪ, ಐಕ್ಯ ಮಂಟಪ ಈ ವರ್ಷದ ಪ್ರಮುಖ ಆಕರ್ಷಣೆಯಾಗಿದೆ. ಕಳೆದ ಐದು ದಿನಗಳ ಪ್ರದರ್ಶನದಲ್ಲಿ ಹೂಗಳು ಬಾಡಿರೋದರಿಂದ ನಿನ್ನೆ 15 ಲಕ್ಷ ಹೂಗಳ ಬದಲಾವಣೆ ಮಾಡಿದ್ದೇವೆ. ಕಳೆದ 6 ದಿನದಲ್ಲಿ ಬರೋಬ್ಬರಿ 1 ಲಕ್ಷದ, 20 ಸಾವಿರ ಜನರಿಂದ ಫ್ಲವರ್ ಶೋ ವೀಕ್ಷಣೆ ಮಾಡಿದ್ದಾರೆ. ಇದುವರೆಗೆ ಫಲಪುಷ್ಪ ಪ್ರದರ್ಶನದಿಂದ 88 ಲಕ್ಷ ಹಣ ಅದಾಯ ಬಂದಿದೆ.
ಇದನ್ನೂ ಓದಿ- ಗಣರಾಜ್ಯೋತ್ಸವಕ್ಕೆ ಮಾಕ್ರೋನ್ ಅತಿಥಿ: ಭಾರತದ ರಫೇಲ್, ನ್ಯೂಕ್ಲಿಯರ್ ಗುರಿ ಸಾಧನೆಗೆ ಫ್ರಾನ್ಸ್ ಸ್ನೇಹದ ಶಕ್ತಿ
ಒಟ್ಟಿನಲ್ಲಿ, ಸಸ್ಯಕಾಶಿ ಲಾಲ್ಬಾಗ್ನಲ್ಲಿ ಈ ಬಾರಿ ಬಸವಣ್ಣನವರ ಕಲಾಕೃತಿಗಳು ಹೂವಿನಲ್ಲಿ ಅಲಂಕಾರಗೊಂಡಿರುವುದನ್ನು ಕಣ್ತುಂಬಿಕೊಳ್ಳಲು ಎರಡು ಕಣ್ಣು ಸಾಲದು ಅಂತಾರೆ ಸಸ್ಯಕಾಶಿಯ ಅಭಿಮಾನಿಗಳು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=xFI-KJNrEP8
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.