ನವದೆಹಲಿ: ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಪಿ.ವಿ.ಸಿಂಧು ಜಪಾನ್‌ನ ನೊಜೋಮಿ ಒಕುಹರಾ ಸೋಲಿಸುವ ಮೂಲಕ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯಳು ಎಂಬ ಹೆಗ್ಗಳಿಕೆಗೆ ಪಾತ್ರರಾದರು.
#PVSindhu creates history winning the #BadmintonWorldChampionships in an awe-inspiring game defeating Nozomi Okuhara of Japan. Congratulations @Pvsindhu1 , you have made India 🇮🇳 proud! pic.twitter.com/lBsMM0wPH7
— Naveen Jindal (@MPNaveenJindal) August 25, 2019
ಪಂದ್ಯದ ಪ್ರಾರಂಭದಿಂದಲೂ ಆಟದ ಮೇಲೆ ಹಿಡಿತ ಸಾಧಿಸಿದ ಪಿ.ವಿ.ಸಿಂಧು 21-7, 21-7 ಅಂತರದಲ್ಲಿ ಜಪಾನಿನ ನೊಜೋಮಿ ಒಕುಹರಾ ರನ್ನು ಸೋಲಿಸುವ ಮೂಲಕ ವಿಶ್ವ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದರು. ಸಿಂಧು ಫೈನಲ್ ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸುವ ಮೊದಲು ಕ್ವಾರ್ಟರ್ಸ್ನಲ್ಲಿ ಮಾಜಿ ವಿಶ್ವ ನಂ .1 ತೈ ತ್ಸು ಯಿಂಗ್ ಅವರನ್ನು ಸೋಲಿಸಿದರು ಮತ್ತು ನಂತರ ಸೆಮಿಫೈನಲ್ ನಲ್ಲಿ ಆಲ್ ಇಂಗ್ಲೆಂಡ್ ಚಾಂಪಿಯನ್ ಚೆನ್ ಯು ಫೀ ವಿರುದ್ಧ ಜಯ ಗಳಿಸಿದರು. ಫೈನಲ್ ಪಂದ್ಯದ ಎದುರಾಳಿ ಓಖುಹರಾ, ಪ್ರಸ್ತುತ ವಿಶ್ವದ 4 ನೇ ಸ್ಥಾನದಲ್ಲಿದ್ದಾರೆ.
ಈಗ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಐದು ಪದಕಗಳನ್ನು ಗೆಲ್ಲುವ ಮೂಲಕ ಜಾಂಗ್ ನಿಂಗ್ ಅವರ ದಾಖಲೆಯನ್ನು ಸಮಗೊಳಿಸಿದ್ದಾರೆ.ಇದು ಅವರ ಸತತ ಮೂರನೇ ಫೈನಲ್ ಆಗಿದೆ, ಇದು ಕೂಡ ಒಂದು ಸಾಧನೆ. ಈ ಹಿಂದೆ 2017 ಹಾಗೂ 2018 ರ ವಿಶ್ವಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದರು.
ವಿಶ್ವ ಚಾಂಪಿಯನ್ ಪಟ್ಟ ಧರಿಸಿದ ನಂತರ ಮಾತನಾಡಿದ ಸಿಂಧು, ಈ ಪ್ರಶಸ್ತಿಯನ್ನು ಇಂದು ಅವರ ತಾಯಿಯವರ ಹುಟ್ಟುಹಬ್ಬ ಇದ್ದಿದ್ದರಿಂದ ಅವರಿಗೆ ಅರ್ಪಿಸುವುದಾಗಿ ಹೇಳಿದರು.