Jaggery Tea For Type 2 Diabetes : ಮಧುಮೇಹದಿಂದ ಬಳಲುತ್ತಿರುವ ವ್ಯಕ್ತಿಗೆ ಸಕ್ಕರೆ ಸೇವಿಸದಂತೆ ಸಲಹೆ ನೀಡಲಾಗುತ್ತದೆ. ಮಧುಮೇಹ ರೋಗಿಗಳು ಯಾವುದೇ ಕಾರಣಕ್ಕೂ ಸಿಹಿ ಪದಾರ್ಥಗಳನ್ನು ಸೇವಿಸುವಂತಿಲ್ಲ. ಸಿಹಿ ಪದಾರ್ಥ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ತಕ್ಷಣವೇ ಹೆಚ್ಚಾಗುತ್ತದೆ. ಬ್ಲಡ್ ಶುಗರ್ ಹೆಚ್ಚಾಗುತ್ತದೆ ಎಂದರೆ ಮಧುಮೇಹ ಮಾತ್ರವಲ್ಲ ಇದರ ಜೊತೆಗೆ ಇತರ ಕಾಯಿಲೆಗಳ ಅಪಾಯವೂ ಉಂಟಾಗುತ್ತದೆ. ನಮ್ಮಲ್ಲಿ ಬಹುತೇಕರ ದಿನ ಆರಂಭವಾಗುವುದೇ ಒಂದು ಲೋಟ ಬಿಸಿ ಚಹಾ ಹೀರುವುದರೊಂದಿಗೆ. ಆದರೆ ಮಧುಮೇಹಿಗಳು ಚಹಾಕ್ಕೆ ಸಕ್ಕರೆ ಸೇವಿಸುವಂತಿಲ್ಲ. ಹೀಗಾದಾಗ ಸಪ್ಪೆ ಚಹಾವನ್ನು ಕುಡಿಯಬೇಕಾಗುತ್ತದೆ. ಆದರೆ ಸಪ್ಪೆ ಚಹಾ ಕುಡಿಯಬೇಕು ಎಂದು ಚಿಂತಿಸುವ ಅಥವಾ ಮರಗುವ ಅಗತ್ಯವಿಲ್ಲ. ಸಕ್ಕರೆಯ ಬದಲು ಈ ಒಂದು ವಸ್ತುವನ್ನು ಸೇವಿಸಿದರೆ ಚಹಾದ ರುಚಿಯೂ ಉಳಿಯುವುದಲ್ಲದೆ, ರಕ್ತದ ಸಕ್ಕರೆ ಕೂಡಾ ಹೆಚ್ಚಾಗುವುದಿಲ್ಲ.
ಚಹಾದಲ್ಲಿ ಸಕ್ಕರೆಯ ಬದಲು ಬೆಲ್ಲ ಸೇರಿಸಿ :
ಪ್ರಸಿದ್ಧ ಆಹಾರ ತಜ್ಞ ಆಯುಷಿ ಯಾದವ್ ಪ್ರಕಾರ ಮಧುಮೇಹ ರೋಗಿಗಳು ಸಿಹಿ ಬೆರೆಸಿಯೇ ಚಹಾ ಸೇವಿಸಬೇಕೆಂದುಕೊಂಡರೂ ಅದಕ್ಕೆ ಸಕ್ಕರೆ ಸೇವಿಸಬಾರದು.ಬದಲಿಗೆ ಬೆಲ್ಲವನ್ನು ಬಳಸಬೇಕು. ಹೀಗೆ ಮಾಡುವುದರಿಂದ ಸಪ್ಪೆ ಚಹಾ ಕುಡಿಯಬೇಕೆಂದಿಲ್ಲ. ನಿಮ್ಮ ಆರೋಗ್ಯದ ಮೇಲೆ ಕೂಡಾ ಯಾವುದೇ ಪರಿಣಾಮ ಬೀರುವುದಿಲ್ಲ.
ಇದನ್ನೂ ಓದಿ : Constipation Remedies: ಹಾಲಿಗೆ ಇದನ್ನು ಸೇರಿಸಿ ಕುಡಿದರೆ ಸಾಕು ಮಲಬದ್ಧತೆ ಗುಣವಾಗುವುದು
ಮಧುಮೇಹದಲ್ಲಿ ಬೆಲ್ಲದ ಚಹಾವನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳು :
-ಮಧುಮೇಹದ ಸಂದರ್ಭದಲ್ಲಿ ಸಕ್ಕರೆಯ ಬದಲಿಗೆ ಬೆಲ್ಲದ ಚಹಾವನ್ನು ಸೇವಿಸಿದರೆ, ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.
-ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಏರುಪೇರಾಗುವುದಿಲ್ಲ. ಇದು ಅನೇಕ ಇತರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
-ಬೆಲ್ಲದೊಂದಿಗೆ ಚಹಾವನ್ನು ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚುವುದರಿಂದ ಸಾಂಕ್ರಾಮಿಕ ರೋಗಗಳ ಅಪಾಯ ಕಡಿಮೆಯಾಗುತ್ತದೆ.
-ಸಕ್ಕರೆಯ ಬದಲು ಬೆಲ್ಲವನ್ನು ಚಹಾದೊಂದಿಗೆ ಬೆರೆಸಿ ಕುಡಿದರೆ ಬೊಜ್ಜು ಕ್ರಮೇಣ ಕಡಿಮೆಯಾಗುತ್ತದೆ.
-ದೇಹದಲ್ಲಿ ರಕ್ತದ ಕೊರತೆಯಿದ್ದರೆ ಬೆಲ್ಲದ ಚಹಾವನ್ನು ಕುಡಿಯಬೇಕು, ಅದು ರಕ್ತಹೀನತೆಯಿಂದ ಪರಿಹಾರವನ್ನು ನೀಡುತ್ತದೆ.
-ಬೆಲ್ಲದ ಟೀ ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ಹೊಟ್ಟೆನೋವಿನ ಭಯವೂ ದೂರವಾಗುತ್ತದೆ.
ಇದನ್ನೂ ಓದಿ :Banana Tea: ಬಾಳೆಹಣ್ಣಿನ ಟೀ ಕುಡಿದರೆ ಈ ಸಮಸ್ಯೆಗಳು ನಿವಾರಣೆಯಾಗುತ್ತವೆ!
-ನಿಮಗೆ ತುಂಬಾ ದಣಿವು ಅನಿಸಿದರೆ ಬೆಲ್ಲದ ಜೊತೆ ಟೀ ಕುಡಿಯಿರಿ. ಅದು ನಿಮಗೆ ಚೈತನ್ಯವನ್ನು ನೀಡುತ್ತದೆ.
- ಬೆಲ್ಲದ ಜೊತೆ ಟೀ ಕುಡಿಯುವುದರಿಂದ ನೆಗಡಿ ಮತ್ತು ಕೆಮ್ಮಿನಿಂದಲೂ ಪರಿಹಾರ ಸಿಗುತ್ತದೆ. ಇದರಿಂದ ಗಂಟಲು ನೋವು ನಿವಾರಣೆಯಾಗುತ್ತದೆ.
-ಬೆಲ್ಲದ ಟೀ ಕುಡಿಯುವುದರಿಂದ ದೇಹದಲ್ಲಿರುವ ಟಾಕ್ಸಿನ್ಗಳು ನಿವಾರಣೆಯಾಗಿ ಚರ್ಮಕ್ಕೆ ಹೊಳಪು ಬರುತ್ತದೆ.
-ಮೈಗ್ರೇನ್ ಸಮಸ್ಯೆ ಇರುವವರು ಬೆಲ್ಲದ ಟೀ ಕುಡಿಯಲೇಬೇಕು.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee Kannada news ಅದನ್ನು ಅನುಮೋದಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.