Cholesterol Control: ಚಳಿಗಾಲದಲ್ಲಿಯೂ ಬೆಣ್ಣೆಯಂತೆ ಕರಗುತ್ತೆ ಕೆಟ್ಟ ಕೊಲೆಸ್ಟ್ರಾಲ್, ಈ 5 ಸಂಗತಿಗಳು ನಿಮ್ಮ ಆಹಾರದಲ್ಲಿರಲಿ!

Cholesterol Control In Winter: ಚಳಿಗಾಲದ ದಿನಗಳಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುವ ಅಪಾಯ ಜಾಸ್ತಿಯಾಗಿರುತ್ತದೆ ಮತ್ತು ಅದನ್ನು ಕಡಿಮೆ ಮಾಡಲು, ನೀವು ಚಳಿಗಾಲದಲ್ಲಿ ನಿಮ್ಮ ಆಹಾರದಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿಕೊಳಬಹುದು, ಈ ಬದಲಾವಣೆಗಳ ಸಹಾಯದಿಂದ ರಕ್ತನಾಳಗಳಲ್ಲಿ ಎಲ್ಡಿಎಲ್ ಹೆಚ್ಚಾಗುವಿಕೆಯನ್ನು ನೀವು ತಡೆಗಟ್ಟಬಹುದು. (Health News In Kannada)  

Written by - Nitin Tabib | Last Updated : Jan 30, 2024, 09:06 PM IST
  • ದೇಹದ ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಸಂಗ್ರಹವಾಗುವುದನ್ನು ತಡೆಯುವಲ್ಲಿ ಡಾರ್ಕ್ ಚಾಕೊಲೇಟ್ ಸೇವನೆಯು ತುಂಬಾ ಪ್ರಯೋಜನಕಾರಿಯಾಗಿದೆ.
  • ಡಾರ್ಕ್ ಚಾಕೊಲೇಟ್‌ನಲ್ಲಿ ಅನೇಕ ವಿಶೇಷ ಅಂಶಗಳಿವೆ ಎಂಬುದು ಅನೇಕ ಅಧ್ಯಯನಗಳಲ್ಲಿ ಕಂಡುಬಂದಿದೆ,
  • ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
Cholesterol Control: ಚಳಿಗಾಲದಲ್ಲಿಯೂ ಬೆಣ್ಣೆಯಂತೆ ಕರಗುತ್ತೆ ಕೆಟ್ಟ ಕೊಲೆಸ್ಟ್ರಾಲ್, ಈ 5 ಸಂಗತಿಗಳು ನಿಮ್ಮ ಆಹಾರದಲ್ಲಿರಲಿ! title=

Cholesterol Control Foods In Winter: ಚಳಿಗಾಲವು ಅನಾರೋಗ್ಯದಿಂದ ಬಳಲುತ್ತಿರುವ ಜನರಿಗೆ ಹೊಸ ಸಮಸ್ಯೆಗಳನ್ನು ತರುತ್ತದೆ, ವಿಶೇಷವಾಗಿ ಈಗಾಗಲೇ ದೀರ್ಘಕಾಲದ ಕಾಯಿಲೆ ಇರುವವರಿಗೆ, ಚಳಿಗಾಲವು ಹಲವಾರು ತೊಡಕುಗಳಿಂದ ತುಂಬಿರುತ್ತದೆ. ಚಳಿಗಾಲದಲ್ಲಿ, ನಮ್ಮ ಆಹಾರವು ಹೆಚ್ಚಾಗಿ ಕೊಬ್ಬಿನ ಆಹಾರಗಳನ್ನು ಒಳಗೊಂಡಿರುತ್ತವೆ ಮತ್ತು ಇದರಿಂದಾಗಿ, ಅನೇಕ ಬಾರಿ ನಾವು ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಂತಹ ಕಾಯಿಲೆಗಳಲ್ಲಿ ಕೊಲೆಸ್ಟ್ರಾಲ್ ಕೂಡ ಒಂದು, ಇದರ ಲಕ್ಷಣಗಳು ಸಾಮಾನ್ಯವಾಗಿ ಚಳಿಗಾಲದಲ್ಲಿ ಹೆಚ್ಚಾಗುತ್ತವೆ. ಶೀತ ವಾತಾವರಣದಲ್ಲಿ ಹೆಚ್ಚಿನ ಕೊಬ್ಬಿನ ಆಹಾರದಿಂದ, ಕೊಬ್ಬು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಅಪಧಮನಿಗಳಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ ಮತ್ತು ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯು ಗಂಭೀರವಾಗುತ್ತದೆ. ಆದಾಗ್ಯೂ, ನಿಮ್ಮ ಆಹಾರದಲ್ಲಿ ಕೆಲವು ವಿಶೇಷ ಬದಲಾವಣೆಗಳನ್ನು ಮಾಡುವ ಮೂಲಕ ಚಳಿಗಾಲದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು, (Health News In Kannada)

1. ಹಸಿರು ತರಕಾರಿಗಳು
ಪಾಲಕ್ ಸೊಪ್ಪು ಚಳಿಗಾಲದಲ್ಲಿ ಸುಲಭವಾಗಿ ದೊರೆಯುತ್ತದೆ ಮತ್ತು ಇದನ್ನು ಸೇವಿಸುವುದು ಕೊಲೆಸ್ಟ್ರಾಲ್ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಪಾಲಕ್ ಸೊಪ್ಪು ಬಹಳಷ್ಟು ಫೈಬರ್ ಮತ್ತು ಇತರ ಅನೇಕ ಪೋಷಕಾಂಶಗಳನ್ನು ಹೊಂದಿದೆ, ಇದು ದೇಹದ ಅಪಧಮನಿಗಳಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಸಂಗ್ರಹವಾಗುವುದನ್ನು ತಡೆಯುತ್ತದೆ. ಚಳಿಗಾಲದಲ್ಲಿ, ಅಧಿಕ ಕೊಲೆಸ್ಟ್ರಾಲ್ ರೋಗಿಗಳು ಪಾಲಕ ಮತ್ತು ಇತರ ಹಸಿರು ತರಕಾರಿಗಳನ್ನು ದೊಡ್ಡ ಪ್ರಮಾಣದಲ್ಲಿ ಸೇವಿಸುತ್ತಾರೆ.

2. ಡಾರ್ಕ್ ಚಾಕೊಲೇಟ್
ದೇಹದ ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಸಂಗ್ರಹವಾಗುವುದನ್ನು ತಡೆಯುವಲ್ಲಿ ಡಾರ್ಕ್ ಚಾಕೊಲೇಟ್ ಸೇವನೆಯು ತುಂಬಾ ಪ್ರಯೋಜನಕಾರಿಯಾಗಿದೆ. ಡಾರ್ಕ್ ಚಾಕೊಲೇಟ್‌ನಲ್ಲಿ ಅನೇಕ ವಿಶೇಷ ಅಂಶಗಳಿವೆ ಎಂಬುದು ಅನೇಕ ಅಧ್ಯಯನಗಳಲ್ಲಿ ಕಂಡುಬಂದಿದೆ, ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

3. ಬೆಳ್ಳುಳ್ಳಿ
ಬೆಳ್ಳುಳ್ಳಿಯು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುವ ಹಲವಾರು ವಿಶೇಷ ಅಂಶಗಳನ್ನು ಹೊಂದಿದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಅಧಿಕ ಕೊಲೆಸ್ಟ್ರಾಲ್ ಇರುವ ರೋಗಿಗಳು ಚಳಿಗಾಲದಲ್ಲಿ ತಮ್ಮ ಆಹಾರದಲ್ಲಿ ಬೆಳ್ಳುಳ್ಳಿಯನ್ನು ಸೇರಿಸಿಕೊಳ್ಳಬೇಕು.

4. ಧಾನ್ಯಗಳು
ಹೆಚ್ಚಿನ ಕೊಲೆಸ್ಟ್ರಾಲ್ ಹೊಂದಿರುವ ಜನರು ತಮ್ಮ ಆಹಾರದಲ್ಲಿ ಹೆಚ್ಚಿನ ಫೈಬರ್ ಅಂಶ ಇರುವ ಪದಾರ್ಥಗಳನ್ನು ಸೇರಿಸಬೇಕು ಎಂಬ ಸಲಹೆ ನೀಡಲಾಗುತ್ತದೆ. ಧಾನ್ಯಗಳು ಫೈಬರ್‌ನ ಉತ್ತಮ ಮೂಲವಾಗಿವೇ ಮತ್ತು ಆದ್ದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಇದನ್ನೂ ಓದಿ-Bad Cholesterol ನಿರ್ಮೂಲನೆಗೆ ಬೆಳ್ಳಂಬೆಳಗ್ಗೆ ಈ 3 ಪದಾರ್ಥಗಳಿಂದ ತಯಾರಿಸಿದ ಟೀ ಸೇವಿಸಿ ನೋಡಿ!

5. ಕಾಲೋಚಿತ ಹಣ್ಣುಗಳು
ಋತುಮಾನಕ್ಕೆ ಅನುಗುಣವಾಗಿ ಹಣ್ಣುಗಳನ್ನು ಸೇವಿಸುವುದು ಸಹ ತುಂಬಾ ಪ್ರಯೋಜನಕಾರಿಯಾಗಿದೆ ಮತ್ತು ಅವುಗಳ ಸಹಾಯದಿಂದ ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವಲ್ಲಿ ಅವು ಸಹಾಯ ಮಾಡುತ್ತವೆ. ಋತುವಿನ ಪ್ರಕಾರ ಲಭ್ಯವಿರುವ ಹಣ್ಣುಗಳು ಸಾಕಷ್ಟು ಫೈಬರ್, ವಿಟಮಿನ್ಗಳು ಮತ್ತು ಇತರ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತವೆ, ಅವು ಅಪಧಮನಿಗಳಲ್ಲಿನ ಎಲ್ಡಿಎಲ್ ಹೆಚ್ಚಳವನ್ನು ತಡೆಯುತ್ತವೆ.

ಇದನ್ನೂ ಓದಿ-Green Garlic Benefits: ಹಲವು ಕಾಯಿಲೆಗಳ ನಿವಾರಣೆಗೆ ರಾಮಬಾಣ ಹಸಿರು ಬೆಳ್ಳುಳ್ಳಿ ಮತ್ತು ಸೊಪ್ಪು, ಸಿಗುತ್ತವೆ ಹಲವು ಲಾಭಗಳು!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News