Fake Death News: ಪೂನಂ ಪಾಂಡೆ ಅಂತೆಯೇ ಈ ಸ್ಟಾರ್‌ ನಟಿಯ ಸಾವಿನ ಸುದ್ದಿ ಹಬ್ಬಿತ್ತು.!

 Rumors about Manisha Koirala's demise: ಪೂನಂ ಪಾಂಡೆ ಗರ್ಭಕಂಠದ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾರೆ ಎಂದು ಸುಳ್ಳು ಸುದಿದ ಹಬ್ಬಿಸಿದ್ದರು. ಮರುದಿನವೇ ಸಾಮಾಜಿಕ ಮಾಧ್ಯಮಗಳಲ್ಲಿ‌ ಈ ಸುದ್ದಿ ಸುಳ್ಳು ಎಂದು ಹೇಳಿದ್ದರು.

Written by - Chetana Devarmani | Last Updated : Feb 6, 2024, 12:29 PM IST
  • ಬಾಲಿವುಡ್‌ ನಟಿಯ ಸಾವಿನ ಸುದ್ದಿ
  • ಪೂನಂ ಪಾಂಡೆ ಅಂತೆ ಸುಳ್ಳು ಸಾವಿನ ಸುದ್ದಿ!
  • ಸಿನಿಮಾ ಪ್ರಚಾರಕ್ಕಾಗಿ ಮಾಡಲಾಗಿತ್ತು ಈ ಗಿಮಿಕ್?
Fake Death News: ಪೂನಂ ಪಾಂಡೆ ಅಂತೆಯೇ ಈ ಸ್ಟಾರ್‌ ನಟಿಯ ಸಾವಿನ ಸುದ್ದಿ ಹಬ್ಬಿತ್ತು.! title=

Rumors about Manisha Koirala's demise: ಪೂನಂ ಪಾಂಡೆ ಗರ್ಭಕಂಠದ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾರೆ ಎಂದು ಸುಳ್ಳು ಸುದಿದ ಹಬ್ಬಿಸಿದ್ದರು. ಮರುದಿನವೇ ಸಾಮಾಜಿಕ ಮಾಧ್ಯಮಗಳಲ್ಲಿ‌ ಈ ಸುದ್ದಿ ಸುಳ್ಳು ಎಂದು ಹೇಳಿದ್ದರು. ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಈ ರೀತಿ ಮಾಡಿರುವುದಾಗಿ ಪೂನಂ ಹೇಳಿದ್ದಾರೆ. ಇದಾದ ನಂತರ ಅವರು ಜನರಿಂದ ಸಾಕಷ್ಟು ಟೀಕೆಗಳನ್ನು ಕೇಳಬೇಕಾಯಿತು. 

ಈ ರೀತಿ ಸಾವಿನ ಸುಳ್ಳು ಹಬ್ಬಸಿದ್ದು, ಪೂನಂ ಮಾತ್ರವಲ್ಲ. ಈ ಹಿಂದೆಯೂ ಕೆಲವು ಸೆಲಿಬ್ರಿಟಿಗಳು ಈ ರೀತಿ ಮಾಡಿದ್ದಾರೆ. ಅವರಲ್ಲಿ ಒಬ್ಬರು ಬಾಲಿವುಡ್‌ನ ಸ್ಟಾರ್‌ ನಟಿ ಮನೀಶಾ ಕೊಯಿರಾಲ. ಇವರು ಕೂಡ ತನ್ನ ಸಾವಿನ ಸುಳ್ಳು ಸುದ್ದಿ ಹಬ್ಬಿಸಿದ್ದರು.

ಇದನ್ನೂ ಓದಿ: Lal Salaam: ಮಾಸ್‌ ಅವತಾರದಲ್ಲಿ​ ರಜನಿಕಾಂತ್: ಲಾಲ್​ ಸಲಾಂ ಟ್ರೇಲರ್‌ ಔಟ್! 

IMDB ವರದಿಯ ಪ್ರಕಾರ, 1994 ರ 'ಕ್ರಿಮಿನಲ್' ಚಿತ್ರಕ್ಕಾಗಿ ಚಲನಚಿತ್ರ ನಿರ್ಮಾಪಕ ಮುಖೇಶ್ ಭಟ್ ತಮ್ಮ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಮನೀಶಾ ಕೊಯಿರಾಲಾ ಅವರ ಸಾವಿನ‌ ಬಗ್ಗೆ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದರು ಎನ್ನಲಾಗಿದೆ. ಚಿತ್ರದ ಪ್ರಚಾರಕ್ಕೆ ಇದೊಂದು ಅದ್ಭುತ ಮಾರ್ಗ ಎಂದುಕೊಂಡ ಮುಖೇಶ್ ಅವರು ಹಿಂದೆ ಮುಂದೆ ಯೋಚಿಸದೆ ಈ ನಿರ್ಧಾರ ಕೈಗೊಂಡಿದ್ದರಂತೆ ಎನ್ನಲಾಗುವುದು. 

ಈ ಸುದ್ದಿಯನ್ನು ಮುಖೇಶ್ ಭಟ್ ಮಾಧ್ಯಮದ ಮುಂದೆ ಪ್ರಸ್ತುತಪಡಿಸಿದಾಗ ಎಲ್ಲರೂ ಬೆಚ್ಚಿಬಿದ್ದರು ಎನ್ನಲಾಗಿದೆ. ಇಡೀ ಚಿತ್ರರಂಗವೇ ಶಾಕ್ ಆಗಿತ್ತು. ಮನೀಶಾ ಕೊಯಿರಾಲಾ ಸಾವನ್ನಪ್ಪಿದ್ದಾರೆ ಎಂಬ ಸುದ್ದಿಯನ್ನು ಹಲವು ತಾರೆಯರಿಗೆ ಆಘಾತ ತಂದಿತ್ತು. ಈ ಸುದ್ದಿಯ ಬಗ್ಗೆ ಸ್ವತಃ ನಟಿಗೆ ಕೂಡ ತಿಳಿದಿರಲಿಲ್ಲ ಎನ್ನಲಾಗಿದೆ.

ಕ್ರಿಮಿನಲ್ ಚಿತ್ರವನ್ನು ಮಹೇಶ್ ಭಟ್ ನಿರ್ದೇಶಿಸಿದ್ದು, ನಿರ್ಮಾಪಕ ಮುಖೇಶ್ ಭಟ್ ಅವರು ಪ್ರೇಕ್ಷಕರನ್ನು ಥಿಯೇಟರ್‌ಗಳಿಗೆ ಕರೆತರಲು ಇಷ್ಟೆಲ್ಲ ಮಾಡಿದರು. ಆದಾಗ್ಯೂ, ಅಭಿಮಾನಿಗಳು ಕ್ರಿಮಿನಲ್ ಚಿತ್ರವನ್ನು ಹೆಚ್ಚು ಇಷ್ಟಪಡಲಿಲ್ಲ. ಚಲನಚಿತ್ರ ನಿರ್ಮಾಪಕರ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿತ್ತು ಎಂದು ಅನೇಕ ವರದಿಗಳಲ್ಲಿ ಹೇಳಲಾಗಿದೆ. ಆದಾಗ್ಯೂ, ನಾವು ಇದನ್ನು ದೃಢೀಕರಿಸುವುದಿಲ್ಲ.

ಇದನ್ನೂ ಓದಿ: ಶಾರುಖ್ ಖಾನ್ ಕನ್ನಡಕ್ಕೆ ಎಂಟ್ರಿ! ‘ಟಾಕ್ಸಿಕ್​’ ಸಿನಿಮಾದಲ್ಲಿ ಯಶ್​ ಜೊತೆ ಕಿಂಗ್‌ ಖಾನ್‌?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News