Orange Peel Tea: ಟ್ರೆಂಡ್‌ ಆಗುತ್ತಿದೆ ʼಆರೆಂಜ್ ಟೀʼ..! ಮಾಡುವ ಸುಲಭ ವಿಧಾನ ಇಲ್ಲಿದೆ

Make Refreshing Orange Peel Tea at Home : ಹೆಚ್ಚಿನ ಭಾರತೀಯರು ಚಹಾ ಮತ್ತು ಕಾಫಿ ಪ್ರಿಯರು. ಇವುಗಳನ್ನು ಸೇವಿಸುವುದರಿಂದ ಮನಸ್ಸಿಗೆ ಉಲ್ಲಾಸ, ಒತ್ತಡ ನಿವಾರಣೆಯಾಗುತ್ತದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಗ್ರೀನ್ ಟೀ, ಬ್ಲಾಕ್ ಟೀ, ಆಪಲ್ ಟೀ, ರೋಸ್ ಟೀ, ಪುದೀನ ಟೀ, ಕೊತ್ತಂಬರಿ ಟೀ ಹೀಗೆ ಲೆಕ್ಕವಿಲ್ಲದಷ್ಟು ವೆರೈಟಿಗಳಿವೆ. ಈಗ ಆರೆಂಜ್ ಟೀ ಟ್ರೆಂಡಿಂಗ್ ಆಗಿದೆ. 

Written by - Krishna N K | Last Updated : Feb 7, 2024, 03:39 PM IST
  • ಚಳಿಗಾಲದಲ್ಲಿ ಕಿತ್ತಳೆ ಚಹಾವನ್ನು ಹೆಚ್ಚು ಸೇವಿಸುವುದರಿಂದ ಅನೇಕ ಪ್ರಯೋಜನಗಳಿವೆ.
  • ಕಿತ್ತಳೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
  • ಚಳಿಗಾಲದಲ್ಲಿ ನಮ್ಮ ದೇಹದ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ.
Orange Peel Tea: ಟ್ರೆಂಡ್‌ ಆಗುತ್ತಿದೆ ʼಆರೆಂಜ್ ಟೀʼ..! ಮಾಡುವ ಸುಲಭ ವಿಧಾನ ಇಲ್ಲಿದೆ title=

Kannada Recipe: How to Make Orange Peel Tea : ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಗ್ರೀನ್ ಟೀ, ಬ್ಲ್ಯಾಕ್ ಟೀ, ಆಪಲ್ ಟೀ, ರೋಸ್ ಟೀ, ಪುದೀನ ಟೀ, ಕೊತ್ತಂಬರಿ ಟೀ ಮುಂತಾದ ಹಲವು ವೆರೈಟಿಗಳಿವೆ. ಇವುಗಳನ್ನು ಸೇವಿಸುವುದರಿಂದ ನಾವು ಆರೋಗ್ಯಕರ ಮತ್ತು ಫಿಟ್ ಆಗಿರುತ್ತೇವೆ ಅಂತ ಎಲ್ಲರಿಗೂ ತಿಳಿದಿದೆ. ಆದರೆ ಈಗ ಹೊಸ ಬಗೆಯ ಟೀ ಟ್ರೆಂಡಿಂಗ್ ಆಗುತ್ತಿದೆ. ಅದೇ ಕಿತ್ತಳೆ ಚಹಾ. ಈ ಆರೆಂಜ್ ಟೀ ರೆಸಿಪಿಯ ವಿಶೇಷತೆ ಏನು ಮತ್ತು ಇದರಲ್ಲಿರುವ ಆರೋಗ್ಯಕಾರಿ ಪ್ರಯೋಜನಗಳೇನು ಎಂಬುದನ್ನು ತಿಳಿದುಕೊಳ್ಳೋಣ.

ಚಳಿಗಾಲದಲ್ಲಿ ಕಿತ್ತಳೆ ಚಹಾವನ್ನು ಹೆಚ್ಚು ಸೇವಿಸುವುದರಿಂದ ಅನೇಕ ಪ್ರಯೋಜನಗಳಿವೆ. ಕಿತ್ತಳೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಚಳಿಗಾಲದಲ್ಲಿ ನಮ್ಮ ದೇಹದ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಇಂತಹ ಸಮಯದಲ್ಲಿ ಇದನ್ನು ಸೇವಿಸುವುದರಿಂದ ಯಾವುದೇ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ ಎನ್ನುತ್ತಾರೆ ತಜ್ಞರು. ಬನ್ನಿ ಈ ಚಹಾವನ್ನು ಮನೆಯಲ್ಲಿ ಹೇಗೆ ತಯಾರಿಸಬಹುದು ಅಂತ ತಿಳಿಯೋಣ..

ಇದನ್ನೂ ಓದಿ: ಈ ಲಕ್ಷಣಗಳು ನಿಮ್ಮ ದೇಹದಲ್ಲಿ ಕಾಣಿಸಿಕೊಂಡರೆ, ತಕ್ಷಣವೇ ಮದ್ಯ ಸೇವನೆ ನಿಲ್ಲಿಸಿ..! 

ಕಿತ್ತಳೆ ಚಹಾಕ್ಕೆ ಬೇಕಾಗುವ ಪದಾರ್ಥಗಳು

ಕಿತ್ತಳೆ ಹಣ್ಣು
ಒಂದು ಕಪ್‌ ನೀರು 
ಒಂದು ಟೀ ಚಮಚ ಚಹಾ ಪುಡಿ 
ಎರಡು ಚಮಚ ಸಕ್ಕರೆ 

ಕಿತ್ತಳೆ ಚಹಾವನ್ನು ಹೇಗೆ ತಯಾರಿಸುವುದು : ಮೊದಲು ಕಿತ್ತಳೆ ಹಣ್ಣನ್ನು ಕತ್ತರಿಸಿ ಸಿಪ್ಪೆ ತೆಗೆಯಿರಿ. ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಅದಕ್ಕೆ ಕಿತ್ತಳೆ ಮತ್ತು ಸಕ್ಕರೆ ಸೇರಿಸಿ ಕುದಿಸಿ. ನಂತರ ಕಿತ್ತಳೆ ಸಿಪ್ಪೆಯನ್ನು ತೆಗೆದುಕೊಂಡು ಚಹಾವನ್ನು ಸೋಸಿಕೊಳ್ಳಿ. ಈ ರೀತಿಯಾಗಿ ಕಿತ್ತಳೆ ಚಹಾ ಸಿದ್ಧವಾಗಿದೆ. 

ಆರೋಗ್ಯ ಲಾಭಗಳು : ಈ ಚಹಾದಲ್ಲಿ ವಿಟಮಿನ್ ಸಿ, ಆಂಟಿಆಕ್ಸಿಡೆಂಟ್ ಮತ್ತು ಇತರ ಪೋಷಕಾಂಶಗಳು ಹೇರಳವಾಗಿವೆ. ಈ ಚಹಾ ಜ್ವರ, ಶೀತ ಮತ್ತು ಕೆಮ್ಮಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ತೂಕ ಇಳಿಕೆಗೂ ಈ ಟೀ ಒಳ್ಳೆಯದು ಎನ್ನುತ್ತಾರೆ ಆರೋಗ್ಯ ತಜ್ಞರು. ಈ ಚಹಾವನ್ನು ತಯಾರಿಸುವುದು ತುಂಬಾ ಸುಲಭ ಮತ್ತು ಇದನ್ನು ಪ್ರತಿದಿನ ಸೇವಿಸುವುದರಿಂದ ನೀವು ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯುತ್ತೀರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News