IND vs ENG Test Cricket: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಪಂದ್ಯವು ಫೆಬ್ರವರಿ 15 ಗುರುವಾರದಿಂದ ರಾಜ್ಕೋಟ್’ನಲ್ಲಿ ನಡೆಯಲಿದೆ. ಮೊದಲ ಎರಡು ಟೆಸ್ಟ್ ಪಂದ್ಯಗಳ ಫಲಿತಾಂಶದ ಬಳಿಕ, ಈ ಸರಣಿಯು ಪ್ರಸ್ತುತ 1-1 ರಲ್ಲಿ ಸಮನಾಗಿದೆ.
ರಾಜ್ಕೋಟ್’ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಿಂದ ಟೀಂ ಇಂಡಿಯಾದ ಮೂವರು ಆಟಗಾರರನ್ನು ಕೈಬಿಡುವ ಸಾಧ್ಯತೆ ಹೆಚ್ಚಾಗಿದೆ. ಅಂದಹಾಗೆ ಈ ಮೂವರು ಆಟಗಾರರು ಸಹ ಕೊನೆಯ ಮೂರು ಟೆಸ್ಟ್ ಪಂದ್ಯಗಳಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಪ್ಲೇಯಿಂಗ್ 11ನಲ್ಲಿ ಆಡುವುದೇ ಅನುಮಾನ.
ಇದನ್ನೂ ಓದಿ: 18 ಬೌಂಡರಿ, 3 ಸಿಕ್ಸರ್, ಒಂದೇ ಇನ್ನಿಂಗ್ಸ್’ನಲ್ಲಿ 159 ರನ್… 24ರ ಹರೆಯದ ಭಾರತದ ಕ್ರಿಕೆಟಿಗನಿಂದ ಅಮೋಘ ಶತಕದಾಟ!
ಕೆಎಸ್ ಭರತ್:
ವಿಕೆಟ್ ಕೀಪಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಕೆಎಸ್ ಭರತ್ ಅವರ ಕಳಪೆ ಪ್ರದರ್ಶನ ಮುಂದುವರಿದಿದೆ. ಪ್ರಸ್ತುತ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ನಾಲ್ಕು ಇನ್ನಿಂಗ್ಸ್’ಗಳಲ್ಲಿ ಅವರು ಗಳಿಸಿದ್ದು ಕೇವಲ 41, 28, 17 ಮತ್ತು 6 ರನ್ . ಅಷ್ಟೇ ಅಲ್ಲದೆ, ಮೊದಲ ಮತ್ತು ಎರಡನೇ ಟೆಸ್ಟ್ ಪಂದ್ಯಗಳಲ್ಲಿ ಹಲವು ನಿರ್ಣಾಯಕ ಸಂದರ್ಭಗಳಲ್ಲಿ ಕ್ಯಾಚ್ ಮತ್ತು ಸ್ಟಂಪಿಂಗ್ ಅವಕಾಶಗಳನ್ನು ಬಿಟ್ಟುಕೊಟ್ಟಿದ್ದಾರೆ. ಇದೇ ಕಾರಣದಿಂದ ಭರತ್ ಅವರನ್ನು ಪ್ಲೇಯಿಂಗ್ ಇಲೆವೆನ್’ನಿಂದ ತೆಗೆದು ಕೆಎಲ್ ರಾಹುಲ್’ಗೆ ವಿಕೆಟ್ ಕೀಪಿಂಗ್ ಜವಾಬ್ದಾರಿ ನೀಡುವುದು ಅನಿವಾರ್ಯವಾಗಿದೆ.
ಅಕ್ಷರ್ ಪಟೇಲ್:
ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಅಕ್ಷರ್ ಪಟೇಲ್ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಪ್ರಸ್ತುತ ಸರಣಿಯಲ್ಲಿ ತಮ್ಮ 4 ಇನ್ನಿಂಗ್ಸ್ಗಳಲ್ಲಿ ಕೇವಲ 5 ವಿಕೆಟ್’ಗಳನ್ನು ಮಾತ್ರ ಕಬಳಿಸಲು ಶಕ್ತರಾಗಿದ್ದಾರೆ. ಈ ಟೆಸ್ಟ್ ಸರಣಿಯ ನಾಲ್ಕು ಇನ್ನಿಂಗ್ಸ್’ಗಳಲ್ಲಿ ಅಕ್ಷರ್ ಪಟೇಲ್ ಗಳಿಸಿದ್ದು 44, 17, 27 ಮತ್ತು 45 ರನ್. ಅಕ್ಸರ್ ಪಟೇಲ್ ಉತ್ತಮ ಆರಂಭ ಪಡೆದರೂ ತಮ್ಮ ಇನ್ನಿಂಗ್ಸ್ ಅನ್ನು ದೊಡ್ಡ ಸ್ಕೋರ್ ಆಗಿ ಪರಿವರ್ತಿಸಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಮೂರನೇ ಟೆಸ್ಟ್ ಪಂದ್ಯದಲ್ಲಿ ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆಯಬಹುದು. ಜೊತೆಗೆ ಇವರ ಸ್ಥಾನಕ್ಕೆ ಕುತ್ತು ಬರುವುದು ಖಚಿತ.
ಇದನ್ನೂ ಓದಿ: IND vs ENG: ಅವಕಾಶ ಕಸಿದುಕೊಂಡ ಬೆನ್ನು ನೋವು: ಕೊನೆಯ 3 ಟೆಸ್ಟ್ ಪಂದ್ಯಗಳಿಗೆ ಈ ಪ್ರಮುಖ ಪ್ಲೇಯರ್ ಅಲಭ್ಯ!
ಮುಖೇಶ್ ಕುಮಾರ್:
ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ವೇಗದ ಬೌಲರ್ ಮುಖೇಶ್ ಕುಮಾರ್ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ. ವಿಶಾಖಪಟ್ಟಣದಲ್ಲಿ ನಡೆದ ಎರಡನೇ ಟೆಸ್ಟ್’ನ ಮೊದಲ ಇನಿಂಗ್ಸ್’ನಲ್ಲಿ ಮುಖೇಶ್ ಕುಮಾರ್ 7 ಓವರ್’ಗಳಲ್ಲಿ ಯಾವುದೇ ವಿಕೆಟ್ ಪಡೆಯದೆ 44 ರನ್ ನೀಡಿದ್ದಾರೆ. ಈ ಅವಧಿಯಲ್ಲಿ ಮುಖೇಶ್ ಕುಮಾರ್ ಅವರ ಎಕಾನಮಿ ದರ 6.28 ಆಗಿತ್ತು. ಈ ಟೆಸ್ಟ್’ನ ಎರಡನೇ ಇನ್ನಿಂಗ್ಸ್’ನಲ್ಲಿ ಮುಖೇಶ್ ಕುಮಾರ್ ಒಂದು ವಿಕೆಟ್ ಪಡೆದರು. ಆದರೆ ಅದಕ್ಕಾಗಿ 5 ಓವರ್ಗಳಲ್ಲಿ 5.20 ರ ಎಕಾನಮಿ ದರದೊಂದಿಗೆ 26 ರನ್ ನೀಡಿದರು. ಮುಖೇಶ್ ಕುಮಾರ್ ಗೆ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಡುವ ಅವಕಾಶ ಸಿಗುವುದು ಕಷ್ಟ. ಇವರ ಬದಲಿಗೆ ಮೊಹಮ್ಮದ್ ಸಿರಾಜ್’ಗೆ ಅವಕಾಶ ನೀಡುವುದು ಖಚಿತವಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.