ಪ್ರಧಾನಿ ಮೋದಿಗೆ ಸಿಕ್ಕಿರುವ ಉಡುಗೊರೆ ನಿಮ್ಮದಾಗಬಹುದು! ಅದುವೇ ₹ 200ಗೆ ಹೇಗೆ ಗೊತ್ತಾ?

ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಈ ವರೆಗೂ ಸುಮಾರು 2772 ಉಡುಗೊರೆ ಸ್ವೀಕರಿಸಿದ್ದು, ಇವುಗಳ ಇ-ಹರಾಜು ಸೆಪ್ಟೆಂಬರ್ 14 ರಿಂದ ಪ್ರಾರಂಭವಾಗಲಿದ್ದು, ಇದು ಅಕ್ಟೋಬರ್ 3 ರವರೆಗೆ ನಡೆಯುತ್ತದೆ.

Last Updated : Sep 12, 2019, 08:05 AM IST
ಪ್ರಧಾನಿ ಮೋದಿಗೆ ಸಿಕ್ಕಿರುವ ಉಡುಗೊರೆ ನಿಮ್ಮದಾಗಬಹುದು! ಅದುವೇ ₹ 200ಗೆ ಹೇಗೆ ಗೊತ್ತಾ? title=
File image

ನವದೆಹಲಿ: ಕಳೆದ 6 ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಡೆದ ಉಡುಗೊರೆಗಳು ನಿಮ್ಮದಾಗಬಹುದು, ಏಕೆಂದರೆ ನೀವು ಶೀಘ್ರದಲ್ಲೇ ಈ ಉಡುಗೊರೆಗಳನ್ನು ಖರೀದಿಸಲು ಸಾಧ್ಯವಾಗುತ್ತದೆ. ವಾಸ್ತವವಾಗಿ, ಕಳೆದ 6 ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಡೆದ ಉಡುಗೊರೆ ವಸ್ತುಗಳ ಇ-ಹರಾಜು ಇದೇ ಸೆಪ್ಟೆಂಬರ್ 14ರಿಂದ ಪ್ರಾರಂಭವಾಗಲಿದೆ. 

ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಈ ವರೆಗೂ ಸುಮಾರು 2772 ಉಡುಗೊರೆ ಸ್ವೀಕರಿಸಿದ್ದು, ಪಿಎಂ ಮೋದಿ ಸ್ವೀಕರಿಸಿದ ಈ ಉಡುಗೊರೆಗಳ ಕನಿಷ್ಠ ಬೆಲೆಯನ್ನು 200 ರೂ. ಮತ್ತು ಗರಿಷ್ಠ ಬೆಲೆ 2,50,000 ರೂ. ಇದರ ಇ-ಹರಾಜು ಸೆಪ್ಟೆಂಬರ್ 14 ರಿಂದ ಪ್ರಾರಂಭವಾಗಲಿದ್ದು, ಇದು ಅಕ್ಟೋಬರ್ 3 ರವರೆಗೆ ನಡೆಯುತ್ತದೆ. ಕೇಂದ್ರ ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಪಟೇಲ್ ಬುಧವಾರ ಇದನ್ನು ಔಪಚಾರಿಕವಾಗಿ ಉದ್ಘಾಟಿಸಿದರು.

ಇ-ಹರಾಜಿನಲ್ಲಿ ಉಡುಗೊರೆ ವಸ್ತುವನ್ನು ಹೆಚ್ಚಿನ ಬೆಲೆಗೆ ಕೊಂಡು ಅದನ್ನು ನಿಮ್ಮ ಮನೆಗೆ ಕೊಂಡೊಯ್ಯಬಹುದು.

ಪ್ರಧಾನಿ ನರೇಂದ್ರ ಮೋದಿಯವರು ಪಡೆದ ಉಡುಗೊರೆಗಳನ್ನು ಪ್ರದರ್ಶಿಸುವುದು ಮತ್ತು ಹರಾಜು ನಡೆಯುತ್ತಿರುವುದು ಇದು ಎರಡನೇ ಬಾರಿ. ಇ-ಹರಾಜಿನಿಂದ ದೊರೆಯುವ ಹಣವನ್ನು ನಮಾಮಿ ಗಂಗೆ ಯೋಜನೆಯಲ್ಲಿ ಬಳಸಲಾಗುತ್ತದೆ.

Trending News