ಪೊಲೀಸರು ನನ್ನ ಬಂಧಿಸಿಲ್ಲ..! ʼಇಡ್ಲಿಗುರುʼ ಹೊಟೇಲ್ ಮಾಲೀಕನ ಸ್ಪಷ್ಟನೆ 

ಹೊಟೇಲ್‌ಗೆ‌ ಫ್ರಾಂಚೈಸಿ ನೀಡುವುದಾಗಿ ನಂಬಿಸಿ ಐದು ಲಕ್ಷ ಹಣ‌‌ ನೀಡದೆ ಎಂದು ವಂಚಿಸಿದ್ದಾರೆ ಎಂದು‌ ಆರೋಪಿಸಿ ಚೇತನ್ ಎಂಬುವರು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಸತ್ಯಾಸತ್ಯತೆ ಅರಿಯಲು ಸಿಆರ್‌ಪಿಸಿ 41 (ಎ) ನಡಿ‌ ವಿಚಾರಣೆ ಹಾಜರಾಗುವಂತೆ ಪೊಲೀಸರು ಇಡ್ಲಿ ಗುರು ಹೊಟೇಲ್‌ ಮಾಲೀಕರಿಗೆ ನೋಟೀಸ್ ಕೊಟ್ಟಿದ್ದರು.

Written by - VISHWANATH HARIHARA | Edited by - Krishna N K | Last Updated : Feb 17, 2024, 05:57 PM IST
  • ಹೊಟೇಲ್‌ಗೆ‌ ಫ್ರಾಂಚೈಸಿ ನೀಡುವುದಾಗಿ ನಂಬಿಸಿ ಐದು ಲಕ್ಷ ರೂ. ವಂಚನೆ ಆರೋಪ
  • ಚೇತನ್ ಎಂಬುವರು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರಿಗೆ ದೂರು ನೀಡಿದ್ದರು
  • ಈ ಕುರಿತು ಸ್ಪಷ್ಟನೆ ನೀಡಿದ ಇಡ್ಲಿಗುರು ಹೊಟೇಲ್ ಸಂಸ್ಥಾಪಕ ಕಾರ್ತಿಕ್ ಶೆಟ್ಟಿ
ಪೊಲೀಸರು ನನ್ನ ಬಂಧಿಸಿಲ್ಲ..! ʼಇಡ್ಲಿಗುರುʼ ಹೊಟೇಲ್ ಮಾಲೀಕನ ಸ್ಪಷ್ಟನೆ  title=

ಬೆಂಗಳೂರು : ಹೊಟೇಲ್ ಫ್ರಾಂಚೈಸಿ ನೀಡುವುದಾಗಿ ನಂಬಿಸಿ ವಂಚನೆ ಆರೋಪ ಸಂಬಂಧ ಇಡ್ಲಿಗುರು ಹೊಟೇಲ್ ಸಂಸ್ಥಾಪಕ ಕಾರ್ತಿಕ್ ಶೆಟ್ಟಿ ಪ್ರತಿಕ್ರಿಯಿಸಿದ್ದು ಪೊಲೀಸರು ತಮ್ಮನ್ನ ಬಂಧಿಸಿಲ್ಲ, ವಿಚಾರಣೆಗೆ ಹಾಜರಾಗಲು ನೊಟೀಸ್ ನೀಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಹೊಟೇಲ್‌ಗೆ‌ ಫ್ರಾಂಚೈಸಿ ನೀಡುವುದಾಗಿ ನಂಬಿಸಿ ಐದು ಲಕ್ಷ ಹಣ‌‌ ನೀಡದೆ ಎಂದು ವಂಚಿಸಿದ್ದಾರೆ ಎಂದು‌ ಆರೋಪಿಸಿ ಚೇತನ್ ಎಂಬುವರು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಸತ್ಯಾಸತ್ಯತೆ ಅರಿಯಲು ಸಿಆರ್‌ಪಿಸಿ 41 (ಎ) ನಡಿ‌ ವಿಚಾರಣೆ ಹಾಜರಾಗುವಂತೆ ನೋಟೀಸ್ ಕೊಟ್ಟಿದ್ದರು. ಅದರಂತೆ ಫೆಬ್ರುವರಿ 15 ರಂದು ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡಿದ್ದೇನೆ. ಮಾಧ್ಯಮಗಳಲ್ಲಿ ಬಂಧಿತರಾಗಿರುವ ಬಗ್ಗೆ ಸುದ್ದಿ ಬಂದಿದೆ. ಹೀಗಾಗಿ ನಡೆದ ವಿಷಯ ಬಗ್ಗೆ ತಿಳಿಸಿದ್ದೇನೆ ಎಂದು ಕಾರ್ತೀಕ್‌ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ:ಗೋಕಾಕ ಜಲಪಾತವನ್ನು ಪ್ರೇಕ್ಷಣೀಯ ಸ್ಥಳವನ್ನಾಗಿ ಮಾಡಲು ಸರ್ಕಾರದಿಂದ ಗ್ರೀನ್‌ ಸಿಗ್ನಲ್

ಅಲ್ಲದೆ, ಮುಂಬೈನಲ್ಲಿ ಇಡ್ಲಿಗುರು ಹೊಟೇಲ್‌ನ ವಿವಿಧ ಶಾಖೆಗಳಿವೆ. ವ್ಯವಹಾರಿಕ ದೃಷ್ಟಿಯಿಂದ ಆಗಾಗ ಮುಂಬೈಗೆ ಹೋಗಿ ಬರುತ್ತೇನೆ.‌ ಅದೇ ರೀತಿ ಫೆ.14ರಂದು ಮುಂಬೈನಲ್ಲಿದ್ದೆ. ಚೇತನ್ ಎಂಬುವರು ದೂರು ನೀಡಿರುವ ಬಗ್ಗೆ ಗೊತ್ತಿರಲಿಲ್ಲ. ಬಳಿಕ‌ ಮಾಧ್ಯಮಗಳಲ್ಲಿ ಸುದ್ದಿ ಬಂದಾಗ ಮಾತ್ರವೇ ವಿಷಯ ಗೊತ್ತಾಯಿತು.‌ ಬಳಿಕ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದ್ದರು. ಇದರಂತೆ ತನಿಖಾಧಿಕಾರಿ ಮುಂದೆ ಹಾಜರಾಗಿ ಹೇಳಿಕೆ‌ ನೀಡಿದ್ದೇನೆ ಎಂದು ಮಾಹಿತಿ ನೀಡಿದರು.

ನನ್ನ ಮೇಲೆ ಬಂದಿರುವ ಆರೋಪ ಸುಳ್ಳು. ಚೇತನ್ ಎಂಬಾತ ಹೊಟೇಲ್ ಫ್ರಾಂಚೈಸಿ ಪಡೆದುಕೊಂಡಿದ್ದ. ಷರತ್ತಿನಂತೆ 3 ಲಕ್ಷ ಹಣ ಪಡೆದಿದ್ದು ನಿಜ. ವಾಪಸ್ ಕೇಳುವಾಗ 5 ಲಕ್ಷ ಹಣ ಕೊಡುವಂತೆ ಡಿಮ್ಯಾಂಡ್ ಮಾಡಿದ್ದರು. ಆತ ದೂರು ಕೊಡುವಾಗಲು ಸ್ಪಷ್ಟವಾಗಿ ಹೇಳಿದ್ದರೂ ಲೀಗಲ್ ನೊಟೀಸ್ ಕಳುಹಿಸಿದ್ದ.‌ ಇದಕ್ಕೆ ಸಮಜಾಯಿಷಿ ನೀಡಿದ್ದೇವು‌. ಆದರೂ ಆತ ಪೊಲೀಸರಿಗೆ ದೂರು ನೀಡಿದ್ದಾರೆ. ಒಪ್ಪಂದಂತೆ 3 ಲಕ್ಷ ಹಣ ನೀಡಲು ಸಿದ್ದನಿದ್ದೇನೆ ಎಂದ ಕಾರ್ತಿಕ್, ಬೆಂಗಳೂರಿನಲ್ಲಿ 55 ಶಾಖೆಗಳಿದ್ದು 3 ಲಕ್ಷಕ್ಕಾಗಿ ಎಸ್ಕೇಪ್ ಆಗಲು ಸಾಧ್ಯವೇ ಎಂದರು.

ಇದನ್ನೂ ಓದಿ:ಏನಿಲ್ಲ.. ಏನಿಲ್ಲ... ಅಂತಾ ಬಿಜೆಪಿ ಟೀಕಿಸಲು ಕವನ ರಚಿಸಿದ ಕಾಂಗ್ರೆಸ್..!

ದೂರಿನಲ್ಲಿ‌ ಏನಿದೆ..? : ಆರಂಭದಲ್ಲಿ ಫ್ರಾಂಚೈಸಿ ನೀಡುವುದಾಗಿ ತಮ್ಮನ್ನು ನಂಬಿಸಿದ್ದ ಕಾರ್ತಿಕ್ ಶೆಟ್ಟಿ, ಪ್ರತಿಯಾಗಿ ಠೇವಣಿ ರೂಪದಲ್ಲಿ ಮೂರು ಲಕ್ಷ ರೂ. ಪಡೆದಿದ್ದರು. ಹೋಟೆಲ್ ಆರಂಭಿಸುವುದಕ್ಕಾಗಿ ತಮ್ಮ ಮನೆಯ ನೆಲಮಹಡಿಯಲ್ಲಿದ್ದ ಬಾಡಿಗೆ ಆದಾಯ ಬರುತ್ತಿದ್ದ ಜಾಗವನ್ನ ತೆರವುಗೊಳಿಸಿದ್ದರು. ಬಳಿಕ ಅಲ್ಲಿ ಫುಡ್​ಕಾರ್ಟ್ ತಂದು ನಿಲ್ಲಿಸಿದ್ದರು, ಸ್ವಲ್ಪ ದಿನಗಳ ಬಳಿಕ ಅಂದುಕೊಂಡಂತೆ ವ್ಯಾಪಾರ ಆಗುತ್ತಿಲ್ಲ, ಬೇರೆಡೆ ವ್ಯಾಪಾರ ಮಾಡೋಣ. ಕಮಿಷನ್ ನೀಡುತ್ತೇವೆ ಎಂದಿದ್ದರು. ಆದರೆ ಯಾವುದೇ ಕಮಿಷನ್ ನೀಡದೆ, ಅಂಗಡಿಗಾಗಿ ಖರ್ಚಾದ ಹಣವನ್ನೂ ನೀಡದೆ ವಂಚಿಸಿದ್ದಾರೆ ಎಂದು ಚೇತನ್​ ದೂರು ನೀಡಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News