Imrana Time Bomb Mastermind: ನಂಬಲು ಸ್ವಲ್ಪ ಕಷ್ಟವಾದರೂ ದೇಶದ ವಿರುದ್ಧ ದೊಡ್ಡ ಷಡ್ಯಂತ್ರ ನಡೆಯುತ್ತಿರುವುದು ನಿಜ. ಮುಜಾಫರ್‌ಪುರ ಪೊಲೀಸರು ಈ ಷಡ್ಯಂತ್ರವನ್ನು ವಿಫಲಗೊಳಿಸಿರುವುದು ಸಮಾಧಾನದ ಸಂಗತಿಯಾಗಿದೆ. 2024ರ ಲೋಕಸಭಾ ಚುನಾವಣೆಯ ಮೊದಲು CAA ಅನ್ನು ಜಾರಿಗೆ ತರಲಾಗುತ್ತದೆ ಎಂದು ಘೋಷಿಸಿದಾಗ ಗಲಭೆ ಎಬ್ಬಿಸಲು ಯುಪಿಯ ಮುಜಾಫರ್‌ನಗರದ ನಿವಾಸಿ ಇಮ್ರಾನಾ ಎಂಬಾಕೆ ಎಲ್ಲಾ ತಯಾರಿ ನಡೆಸಿದ್ದಾಳೆ.
ಇದನ್ನೂ ಓದಿ: WhatsApp ಹೊಸ ಸಿದ್ಧತೆ, ಸ್ಟೇಟಸ್ ಅಪ್ಡೇಟ್ ಗಾಗಿ ಬರಲಿದೆ ಹೊಸ ಇಂಟರ್ಫೇಸ್!
ಅಷ್ಟೇ ಅಲ್ಲ ಟೈಮರ್ ಬಾಂಬ್ ತಯಾರಿಸಲು ಇಮ್ರಾನಾ ಆರ್ಡರ್ ಮಾಡಿದ್ದಳು. ಆದರೆ, ಪೊಲೀಸರು, ಎಸ್’ಟಿಎಫ್ ಮತ್ತು ಏಜೆನ್ಸಿಗಳು ಎಚ್ಚೆತ್ತಿದ್ದರು. ಅಷ್ಟಕ್ಕೂ ಈ ಮಾಸ್ಟರ್ ಮೈಂಡ್ ಇಮ್ರಾನಾ ಯಾರು ಗೊತ್ತಾ? ಮುಜಾಫರ್‌ನಗರ ಮತ್ತು ಸಿಎಎ ಗಲಭೆಗೂ ಇದಕ್ಕೂ ಏನು ಸಂಬಂಧ? ಎಲ್ಲಾ ವಿಚಾರಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಟೈಮ್ ಬಾಂಬ್ ತಯಾರಿಕೆಯ ಮಾಸ್ಟರ್ ಮೈಂಡ್ ಇಮ್ರಾನಾಳನ್ನು ಮುಜಾಫರ್‌ನಗರದಲ್ಲಿ ಬಂಧಿಸಲಾಗಿದೆ. ಮುಜಾಫರ್‌ನಗರ ಪೊಲೀಸರು, ಎಸ್‌ಟಿಎಫ್ ಮತ್ತು ಗುಪ್ತಚರ ಸಂಸ್ಥೆಗಳು ಇಮ್ರಾನಾಳನ್ನು ವಿಚಾರಣೆ ನಡೆಸುತ್ತಿವೆ. ಮುಜಾಫರ್‌ನಗರ ಗಲಭೆ ಮತ್ತು ಸಿಎಎ ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಇಮ್ರಾನಾ ದುಷ್ಕರ್ಮಿಗಳಿಗೆ 100 ಕ್ಕೂ ಹೆಚ್ಚು ಬಾಂಬ್‌ಗಳನ್ನು ಹಂಚಿದ್ದಳು ಎಂಬುದು ಬಹಿರಂಗವಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಲೋಕಸಭೆ ಚುನಾವಣೆಗೂ ಮುನ್ನ ಸಿಎಎ ಜಾರಿಗೊಳಿಸುವ ಸಾಧ್ಯತೆಯಿಂದಾಗಿ ಇಮ್ರಾನಾ ಟೈಮರ್ ಬಾಂಬ್’ಗಳನ್ನು ತಯಾರಿಸಿದ್ದಳು. ಎಸ್‌ಟಿಎಫ್ ಎರಡು ದಿನಗಳ ಹಿಂದೆ ಜಾವೇದ್ ಎಂಬಾತನನ್ನು ಬಂಧಿಸಿ ನಾಲ್ಕು ಟೈಮರ್ ಬಾಂಬ್’ಗಳನ್ನು ವಶಪಡಿಸಿಕೊಂಡಿತ್ತು. ನಂತರ ಜಾವೇದ್ ನನ್ನು ವಿಚಾರಣೆ ನಡೆಸಿದಾಗ ಇಮ್ರಾನಾ ಹೆಸರು ಕೇಳಿ ಬಂದಿತ್ತು.
ಇಮ್ರಾನಾ ಯಾರು?
ಮಾಧ್ಯಮ ವರದಿಗಳ ಪ್ರಕಾರ ಇಮ್ರಾನಾ ಮಧ್ಯವಯಸ್ಕ ಮಹಿಳೆ. ಮಾಸ್ಟರ್ ಮೈಂಡ್ ಇಮ್ರಾನಾ ಶಾಮ್ಲಿ ಜಿಲ್ಲೆಯ ಬಾಬರಿ ಪೊಲೀಸ್ ಠಾಣೆಯ ನಿವಾಸಿ. ಇಮ್ರಾನಾ ಸುಮಾರು 20 ವರ್ಷಗಳ ಹಿಂದೆ ತನ್ನ ಗ್ರಾಮ ಬಂತಿ ಖೇಡಾವನ್ನು ತೊರೆದಿದ್ದಳು ಎಂದು ಹೇಳಲಾಗುತ್ತದೆ. ಆದರೆ, ಭಾನುವಾರ ಮತ್ತು ಗುರುವಾರ ತಾಂತ್ರಿಕ ಕ್ರಿಯೆಗೆಂದು ಅಲ್ಲಿಗೆ ಬರುತ್ತಿದ್ದಳಂತೆ.
ಇದನ್ನೂ ಓದಿ: ರೈತ ವಿದ್ಯಾನಿಧಿ ವಿದ್ಯಾರ್ಥಿವೇತನಕ್ಕಾಗಿ ಆದಾಯ ಪ್ರಮಾಣಪತ್ರ ಸಲ್ಲಿಸಲು ಫೆ.29 ರವರೆಗೆ ಅವಕಾಶ
ಇಮ್ರಾನಾ ಕಳೆದ 40 ವರ್ಷಗಳಿಂದ ಗ್ರಾಮದಲ್ಲಿ ಭೂತೋಚ್ಚಾಟನೆ ಕೆಲಸ ಮಾಡುತ್ತಿದ್ದಾಳೆ. ಅಂದಹಾಗೆ ಇಮ್ರಾನಾ ಪತಿಗೆ ಆಕೆ ಮಾಡುವ ಕೆಲಸಗಳ ಬಗ್ಗೆ ಸಂಪೂರ್ಣವಾಗಿ ತಿಳಿದಿಲ್ಲ. ಪತಿ ಆಜಾದ್, ಮುಜಾಫರ್ ನಗರದಲ್ಲಿ ವಾಸಿಸುತ್ತಿದ್ದು, ಹಾಲು ಮಾರಾಟಗಾರರಾಗಿ ಕೆಲಸ ಮಾಡುತ್ತಿದ್ದಾರೆ.