Cleaning tricks:ಹೆಚ್ಚು ಶ್ರಮವಿಲ್ಲದೆ ಮನೆಯನ್ನು ಕನ್ನಡಿಯಂತೆ ಹೊಳೆಯುವಂತೆ ಮಾಡುವ ಸೂಪರ್ ಹ್ಯಾಕ್ಸ್ !

Cleaning tricks: ಮನೆಯನ್ನು ಶುಚಿಗೊಳಿಸುವಾಗ, ಕೆಲವು ವಿಷಯಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಇದರಿಂದ ನಮ್ಮ ಸಮಯ ವ್ಯರ್ಥವಾಗುವುದಿಲ್ಲ.

Cleaning tricks:ನಾವಿರುವ ಮನೆ ಸುಂದರವಾಗಿರಬೇಕು ಎನ್ನುವುದು ಪ್ರತಿಯೊಬ್ಬರ ಮನದಾಸೆ.ಮನೆ ಸುಂದರವಾಗಿರಬೇಕಾದರೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು  ಬಹಳ ಮುಖ್ಯ.ಕೆಲವರು ನಿತ್ಯ ಮನೆಯನ್ನು ಶುಚಿಯಾಗಿ ಇಟ್ಟುಕೊಳ್ಳುವಲ್ಲಿ   ಸೋಮಾರಿತನ ಪ್ರದರ್ಶಿಸಿ ಬಿಡುತ್ತಾರೆ. ಹೀಗಾದಾಗ ಮನೆಯಲ್ಲಿ ಕೊಳಕು ಕಲೆಗಳು ಹಾಗೆಯೇ ಉಳಿಡು ಬಿಡುತ್ತವೆ. ಮನೆಯನ್ನು ಶುಚಿಗೊಳಿಸುವಾಗ, ಕೆಲವು ವಿಷಯಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಹೀಗೆ ಮಾಡಿದಾಗ ನಮ್ಮ ಸಮಯ ವ್ಯರ್ಥವಾಗುವುದಿಲ್ಲ. ಹೆಚ್ಚು ಶ್ರಮ ಇಲ್ಲದೆ, ಮನೆ ಕನ್ನಡಿಯಂತೆ ಹೊಳೆಯಲು ಆರಂಭಿಸುತ್ತದೆ. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಮನೆಯ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಮನೆ ಶುಚಿಯಾಗಿದ್ದರೆ, ರೋಗಗಳ ಅಪಾಯ ಕೂಡಾ ಕಡಿಮೆ.ಆದರೆ ಒಂದೇ ದಿನದಲ್ಲಿ ಇಡೀ ಮನೆಯನ್ನು ಸ್ವಚ್ಛಗೊಳಿಸಬೇಕು ಎಂದರೆ ಅದು ಅಸಾಧ್ಯ. ಮನೆಯನ್ನು ಸರಿಯಾಗಿ ಸ್ವಚ್ಛಗೊಳಿಸಬೇಕಾದರೆ ಮನೆಯ ಕೆಲಸವನ್ನು ಮೊದಲು ವಿಭಜಿಸಿಕೊಳ್ಳಬೇಕು. ಪ್ರತಿದಿನ  ಮನೆಯ ಒಂದೊಂದೇ ಭಾಗಗಳನ್ನು ಸ್ವಚ್ಛಗೊಳಿಸುತ್ತಾ ಬನ್ನಿ.

2 /5

ಸ್ನಾನಗೃಹದ ಶುಚಿತ್ವವು ಅತ್ಯಂತ ಮುಖ್ಯವಾಗಿದೆ. ಜನರು ಮೊದಲು ಗಮನ ಹರಿಸುವ ಸ್ಥಳ ಇದೇ. ಇಲ್ಲಿ ರೋಗಗಳ ಅಪಾಯವೂ ಹೆಚ್ಚು. ನಿಂಬೆ ಮತ್ತು ವಿನೆಗರ್ ಸಹಾಯದಿಂದ,  ಸಂಪೂರ್ಣ ಬಾತ್ರೂಮ್ ಅನ್ನು ಸ್ವಚ್ಛಗೊಳಿಸಬಹುದು.ಬಾತ್ ರೂಂ ಶುಚಿಗೊಳಿಸಲು ಬಿಸಿ ನೀರನ್ನು ಬಳಸಬೇಕು. ಹೀಗೆ ಮಾಡುವುದರಿಂದ ಬಾತ್ ರೂಂನಲ್ಲಿರುವ ಮೊಂಡುತನದ ಕಲೆಗಳನ್ನು ಸುಲಭವಾಗಿ ಹೋಗಲಾಡಿಸಬಹುದು.    

3 /5

ಮನೆಯ ರೂಂ ಅನ್ನು ಸ್ವಚ್ಛಗೊಳಿಸುವಾಗ ವಿಶೇಷ ಕಾಳಜಿಯನ್ನು ವಹಿಸಬೇಕು. ನಿಮ್ಮ ಕೋಣೆಯಲ್ಲಿ ಬಹಳಷ್ಟು ವಸ್ತುಗಳನ್ನು ಇರಿಸಿಕೊಂಡಿದ್ದರೆ, ಮೊದಲು ಆ ವಸ್ತುಗಳನ್ನು  ಬೇರೆ ಸ್ಥಳಕ್ಕೆ ಮೊದಲು ಸ್ಥಳಾಂತರಿಸಬೇಕು. ಹಾಸಿಗೆಯನ್ನು ಸರಿಯಾಗಿ ಜೋಡಿಸಬೇಕು. ಕೋಣೆಯಲ್ಲಿ ಬಹಳಷ್ಟು ವಸ್ತುಗಳನ್ನು ಇಡಬೇಕಾಗಿಲ್ಲ. ಸ್ವಚ್ಛಗೊಳಿಸುವಾಗ ನೀವು ಬಟ್ಟೆಯ ಸಹಾಯವನ್ನು ತೆಗೆದುಕೊಳ್ಳಬೇಕು.ಆದರೆ, ನೆನಪಿಡಿ ಕೊಳಕು ಬಟ್ಟೆಗಳನ್ನು ಬಳಸಬಾರದು.

4 /5

ಇಡೀ ಮನೆಯ ಡಸ್ಟಿಂಗ್  ಮಾಡುವಾಗ ವ್ಯಾಕ್ಯೂಮ್ ಸಹಾಯವನ್ನು ತೆಗೆದುಕೊಂಡು  ಮನೆಯನ್ನು ಸ್ವಚ್ಛಗೊಳಿಸಬೇಕು.ಮನೆಯಲ್ಲಿ ಬಹಳಷ್ಟು ಧೂಳು ಸಂಗ್ರಹವಾಗುತ್ತದೆ.  ಇದು ನಿಮ್ಮ ಕೆಲಸವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಮಾತ್ರವಲ್ಲ ಅನೇಕ ರೋಗಗಳಿಂದ ಬಳಲಬೇಕಾಗಬಹುದು.   

5 /5

ಮನೆಯನ್ನು ಶುಚಿಗೊಳಿಸುವಾಗ ಮನೆಯ ಎಲ್ಲಾ ಕಿಟಕಿ ಬಾಗಿಲುಗಳನ್ನು ತೆರೆದಿಟ್ಟುಕೊಂಡಿರಬೇಕು. ಅಲ್ಲದೆ ಮನೆಯನ್ನು ಕ್ಲೀನ್ ಮಾಡುವಾಗ ನಿಮ್ಮ ಬಾಯಿಗೆ ಮಾಸ್ಕ್ ಕಟ್ಟಿಕೊಳ್ಳಬೇಕು. ಹೀಗೆ ಮಾಡಿದರೆ ಧೂಳಿನ ಕಾರಣ ನಿಮ್ಮ ಆರೋಗ್ಯ ಹಾಳಾಗುವುದಿಲ್ಲ.