Virat Kohli son Akaay Citizenship: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಅವರು 15 ಫೆಬ್ರವರಿ 2024 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.. ಆದರೆ, ಕೊಹ್ಲಿ ಅವರ ಮಗ ಲಂಡನ್‌ನಲ್ಲಿ ಜನಿಸಿದನೆಂದು ತಿಳಿದ ಅಭಿಮಾನಿಗಳು ಆಶ್ಚರ್ಯಚಕಿತರಾಗಿದ್ದಾರೆ.. ಹಾಗಾಗಿ ವಿರಾಟ್ ಪುತ್ರನ ಪೌರತ್ವ ಯಾವ ದೇಶದ್ದಾಗುತ್ತದೆ ಎನ್ನುವ ಪ್ರಶ್ನೆಗಳು ಮೂಡಿವೆ..
ಪ್ರಸ್ತುತ, ವಿರಾಟ್ ಕೊಹ್ಲಿ ಮಗ ಅಕಾಯ್ ಬಗ್ಗೆ ವಿವಿಧ ರೀತಿಯ ಪ್ರಶ್ನೆಗಳು ಉದ್ಭವಿಸುತ್ತಿವೆ.. ಆದರೆ ಈ ಸಂಬಂಧ ನಿಯಮಗಳನ್ನು ಗಮನಿಸಿದರೆ.. ಯುಕೆಯಲ್ಲಿ ಯಾವುದೇ ಮಗು ಜನಿಸಿದರೆ, ಅದು ಬ್ರಿಟಿಷ್ ಪ್ರಜೆಯಾಗುವುದಿಲ್ಲ... ಹೆತ್ತವರಲ್ಲಿ ಒಬ್ಬರು ಆ ದೇಶದ ನಾಗರಿಕರಾಗಿದ್ದರೆ ಅಥವಾ ಮಗುವಿಗೆ 18 ವರ್ಷ ತುಂಬುವ ಮೊದಲು ಅಲ್ಲಿ ಶಾಶ್ವತ ಪೌರತ್ವವನ್ನು ಪಡೆಯದಿದ್ದರೆ, ಅವನನ್ನು ಅಲ್ಲಿನ ನಾಗರಿಕ ಎಂದು ಪರಿಗಣಿಸಲಾಗುವುದಿಲ್ಲ. ಆದರೆ ಇಲ್ಲಿ ವಿರಾಟ್ ಮತ್ತು ಅನುಷ್ಕಾ ಇಬ್ಬರೂ ಭಾರತದ ಪ್ರಜೆಗಳಾಗಿದ್ದು, ಅವರ ಮಗನಿಗೆ ಬೇರೆ ದೇಶದ ಪೌರತ್ವ ಸಿಗುವುದಿಲ್ಲ..
ಇದನ್ನೂ ಓದಿ-IPL 2024: ಹೊರಬಿತ್ತು ಐಪಿಎಲ್ ಸಂಬಂಧ ಬಿಗ್ ಅಪ್ಡೇಟ್: ಮೊದಲ ಹಂತದ ವೇಳಾಪಟ್ಟಿ ಇಂದು ಪ್ರಕಟ!
ವರದಿಗಳ ಪ್ರಕಾರ ವಿರಾಟ್ ಅನುಷ್ಕಾ ಲಂಡನ್‌ನಲ್ಲಿ ಮನೆ ಖರೀಸಿದ್ದು.. ಆದರೆ ಇಲ್ಲಿಯವರೆಗೆ ಅವರು ಅಲ್ಲಿ ದೀರ್ಘಕಾಲ ವಾಸಿಸಿಲ್ಲ... ಶಾಶ್ವತ ನಿವಾಸದ ಸ್ಥಾನಮಾನವನ್ನು ಹೊಂದಿಲ್ಲ... ಹೀಗಾಗಿ ಅಕಾಯ್ ಬೇರೆ ದೇಶ್ ಪೌರತ್ವ ಹೊಂದುವುದಿಲ್ಲ..
ಇನ್ನು ವಿರಾಟ್ ಹಾಗೂ ಅನುಷ್ಕಾ ತಾವು ಪೋಷಕರಾಗುವ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮೂಲಕ ಹಂಚಿಕೊಂಡಿದ್ದರು.. ಮಗು ಹುಟ್ಟಿದ 5 ದಿನಗಳ ನಂತರ ಜನರಿಗೆ ಈ ಮಾಹಿತಿ ನೀಡಿದ್ದಾರೆ... ಈ ಬಗ್ಗೆ ವಿರಾಟ್ ಕೊಹ್ಲಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದು.. "ನಮ್ಮ ಹೃದಯದಲ್ಲಿ ಬಹಳ ಸಂತೋಷ ಮತ್ತು ಪ್ರೀತಿಯೊಂದಿಗೆ, ಫೆಬ್ರವರಿ 15 ರಂದು ಅವರು ತಮ್ಮ ಎರಡನೇ ಮಗು ಮತ್ತು ವಾಮಿಕಾ ಅವರ ಕಿರಿಯ ಸಹೋದರ ಅಕಾಯ್ ಅವರನ್ನು ಸ್ವಾಗತಿಸಿದೆವು ಎಂದು ಹಂಚಿಕೊಳ್ಳಲು ನಮಗೆ ಸಂತೋಷವಾಗುತ್ತಿದೆ.. ನಮ್ಮ ಜೀವನದ ಈ ಸುಂದರ ಸಮಯದಲ್ಲಿ ನಿಮ್ಮ ಪ್ರೀತಿ ಮತ್ತು ಶುಭಾಶಯಗಳನ್ನು ನಾವು ಬಯಸುತ್ತೇವೆ. ದಯವಿಟ್ಟು ನಮ್ಮ ಗೌಪ್ಯತೆಯನ್ನು ಗೌರವಿಸಲು ವಿನಂತಿಸಲಾಗಿದೆ. ನಿಮ್ಮೆಲ್ಲರಿಗೂ ಕೃತಜ್ಞತೆಗಳು. ವಿರಾಟ್ ಮತ್ತು ಅನುಷ್ಕಾ." ಎಂದು ಬರೆದುಕೊಂಡಿದ್ದರು.. ಆ ಪೋಸ್ಟ್‌ಗೆ ಅಭಿಮಾನಿಗಳಿಂದ ಶುಭಾಷಯಗಳ ಮಹಾಪೂರವೇ ಹರಿದು ಬರುತ್ತಿದೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.