Jackie is re-released on March 15 : ಮಾರ್ಚ್ 17 ರಂದು ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ನಟ ದಿವಂಗತ ಪುನೀತ್ ರಾಜಕುಮಾರ್ ಅವರ ಜನ್ಮದಿನದ ಪ್ರಯುಕ್ತ ಮಾರ್ಚ್ 15 ರಂದು ಪುನೀತ್ ನಟನೆಯ ಹಿಟ್ ಸಿನಿಮಾ ಜಾಕಿ ರೀರಿಲೀಸ್ ಆಗಲಿದೆ
ಅಶ್ವಿನಿ ಪುನೀತ್ ರಾಜಕುಮಾರ್ ಈ ಕುರಿತು ಮಾಹಿತಿ ಕೊಡುವ ಮೂಲಕ ಅಭಿಮಾನಿಗಳಿಗೆ ಖುಷಿ ಸುದ್ದಿಯನ್ನು ನೀಡಿದ್ದಾರೆ.
ಇದನ್ನು ಓದಿ :BMTC : 2,500 ಕಂಡಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ, ವಿವರ ಇಲ್ಲಿದೆ
ನಟ ಪುನೀತ್ ರಾಜಕುಮಾರ್ ನಟನೆಯ ಜಾಕಿ ಸಿನಿಮಾ 2010ರ ಅಕ್ಟೋಬರ್ 14ರಂದು ತೆರೆಕಂಡಿತ್ತು. ಇದೀಗ ಮತ್ತೆ ಅಪ್ಪು ಜನ್ಮದಿನದ ಪ್ರಯುಕ್ತವಾಗಿ ಮಾರ್ಚ್ 15ರಂದು ಜಾಕಿ ಸಿನಿಮಾವನ್ನು ಮರು ಬಿಡುಗಡೆಗೊಳ್ಳಲು ಸಿದ್ಧವಾಗಿದೆ ಎಂದು ಅಶ್ವಿನಿ ಪುನೀತ್ ರಾಜಕುಮಾರ್ ತಮ್ಮ ಟ್ವಿಟರ್ ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ಪ್ರೇಕ್ಷಕರ ನೆಚ್ಚಿನ 'ಜಾಕಿ' ಮಾರ್ಚ್ 15 ರಂದು ಮತ್ತೊಮ್ಮೆ ನಿಮ್ಮೆಲ್ಲರನ್ನು ರಂಜಿಸಲು ಸಿದ್ಧವಾಗಿದೆ. ✨
Cult classic ‘Jackie’ is all set to enthrall audiences once again on March 15th.@PuneethRajkumar @suri_ramaswamy #BhavanaMenon #RangayanaRaghu #YogarajBhat #VHariKrishna @PRK_Productions… pic.twitter.com/y5ZL4VcCGC— Ashwini Puneeth Rajkumar (@Ashwini_PRK) February 27, 2024
2022 ರಲ್ಲಿ ಮಾರ್ಚ್ 17ರಂದು ಪುನೀತ್ ನಟನೆಯ ಕೊನೆಯ ಸಿನಿಮಾ ಜೇಮ್ಸ್ ಬಿಡುಗಡೆಯಾಗಿತ್ತು ಅದಾದ ನಂತರ ಅಶ್ವಿನಿ ಪುನೀತ್ ರಾಜಕುಮಾರ್ ಜಾಕಿ ರೀರಿಲೀಸ್ ಕುರಿತು ಮಾಹಿತಿಯನ್ನು ನೀಡುವ ಮೂಲಕ ಅಭಿಮಾನಿಗಳಿಗೆ ಖುಷಿಯನ್ನು ಉಣಬಡಿಸಿದ್ದಾರೆ.
ಇದನ್ನು ಓದಿ : ಶಿವರಾತ್ರಿ ಸಮೀಪಿಸುತ್ತಿರುವ ಹಿನ್ನೆಲೆ : ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ದೇಗುಲ ಆಡಳಿತ ಮಂಡಳಿಯಿಂದ ವಿಶೇಷ ಸೂಚನೆ
ದುನಿಯಾ ಸೂರಿ ನಿರ್ದೇಶನದ ಜಾಕಿ ಸಿನಿಮಾವನ್ನು ಪಿ ಆರ್ ಕೆ ಪ್ರೊಡಕ್ಷನ್ ಪ್ರೆಸೆಂಟ್ ಮಾಡುತ್ತಿದ್ದು, ಕೆ ಆರ್ ಜಿ ಸ್ಟುಡಿಯೋಸ್ ರಿಲೀಸ್ ಮಾಡುತ್ತಿದೆ. ಸಿನಿಮಾ ಮಾರ್ಚ್ 15 ರಂದು ಮರು ಬಿಡುಗಡೆಯಾಗಲಿದೆ ಎನ್ನುವ ಮಾಹಿತಿ ನೀಡಿದ್ದು, ಸಿನಿಮಾ ಯಾವ ಕಡೆ ರಿಲೀಸ್ ಆಗಲಿದೆ ಎನ್ನುವ ಕುರಿತು ಸದ್ಯಕ್ಕೆ ಯಾವುದೇ ರೀತಿಯ ಮಾಹಿತಿಯನ್ನು ಹಂಚಿಕೊಂಡಿಲ್ಲ. ಕೆ ಆರ್ ಜಿ ಸ್ಟುಡಿಯೋಸ್ ತಮ್ಮ ಸಾಮಾಜಿಕ ಮಾಧ್ಯಮಗಳ ಮೂಲಕ ಅಭಿಮಾನಿಗಳ ಮುಂದೆ ಈ ಮಾಹಿತಿಯನ್ನು ಇಟ್ಟಿದ್ದಾರೆ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.