Viral Bizarre Recipe: ಬಹುತೇಕ ನಾವೆಲ್ಲರೂ ಇಷ್ಟಪಡುವ ಸಿಹಿ ಪದಾರ್ಥಗಳಲ್ಲಿ ಕಾಜು ಕತ್ಲಿ ಕೂಡ ಒಂದಾಗಿದೆ, ಆದರೆ ಬಾಯಿಯಲ್ಲಿ ನೀರು ಬಾರಿಸುವ ಈ ಸಿಹಿಗೆ ಜನ ಕಾರದ ಟಜ್ ನೀಡಿದರೆ ಹೇಗಿರುತ್ತೆ? ಇತ್ತೀಚಿನ ದಿನಗಳಲ್ಲಿ ಇಂತಹ ಹಲವು ಪ್ರಯೋಗಗಳು ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿವೆ. ಅವುಗಳಲ್ಲಿ ಕೆಲ ಆಹಾರದ ಪ್ರಯೋಗಗಳು ಬಾಯಿಯ ರುಚಿಯನ್ನು ಹೆಚ್ಚಿಸಿದರೆ, ಕೆಲ ಪ್ರಯೋಗಗಳು ಜನರ ಅಸಡ್ಡೆಗೆ ಕಾರಣವಾಗುತ್ತವೆ. ಇತ್ತೀಚೆಗಷ್ಟೇ ಕಾಜು ಕತ್ಲಿಯೊಂದಿಗೆ ನಡೆದ ಒಂದು ಪ್ರಯೋಗವೊಂದು ಜನರ ಮನಸ್ಸನ್ನು ಭಾರಿ ಕಲಕುತ್ತಿದೆ ಮತ್ತು ಅದನ್ನು ಕಂಡು ಬಳಕೆದಾರರು ಬೆಚ್ಚಿಬಿದ್ದಿದ್ದಾರೆ. ಅಷ್ಟೇ ಅಲ್ಲ, ಈ ವಿಲಕ್ಷಣ ವೈರಲ್ ವೀಡಿಯೋ (Trending Video) ನೋಡಿದ ಜನರು ಕಾಜು ಕತ್ಲಿ ಬಜ್ಜಿ ತಯಾರಿಸಿದ ಆಂಟಿಗೆ.... ಬೇಡ... ಇಂಥಾ ಪ್ರಯೋಗ ಇನ್ಮುಂದೆ ಮಾಡ್ಬೇಡಾ ತಾಯಿ ನಿಲ್ಲಿಸು ಎಂದು ವಿನಂತಿಸುತ್ತಿದ್ದಾರೆ. (Viral News In Kannada)
ಇದನ್ನೂ ಓದಿ-Viral Video: 'ನನಗೆ ಮದುವೆ ಮಾಡಿಸು'...' ತಂದೆ ಬೇಡ ಅಂದರೂ ಹಟಕ್ಕೆ ಬಿದ್ದ ಕ್ಯೂಟ್ ಪುಟಾಣಿ
ನೀವು ನಿಮ್ಮ ಲೈಫ್ ನಲ್ಲಿ ಎಂದಾದರೂ ಕಾಜು ಕತ್ಲಿ ಭಜ್ಜಿ ಎಂದಾದರೂ ತಿಂದಿದ್ದೀರಾ? ನಿಮ್ಮ ಉತ್ತರ ಇಲ್ಲ ಎಂದಾದರೆ, ಇತ್ತೀಚೆಗೆ ವೈರಲ್ (Bizarre Video) ಆಗುತ್ತಿರುವ ಈ ವೀಡಿಯೊವನ್ನು ನೀವು ನೋಡಲೇಬೇಕು, ಇದರಲ್ಲಿ ಆಂಟಿಯೊಬ್ಬಳು ಕಾಜು ಕತ್ಲಿ ಭಜ್ಜಿ ಮಾಡುವ ಮೂಲಕ ಸಾಮಾಜಿಕ ಮಾಧ್ಯಮ (Social Media) ಬಳಕೆದಾರರಿಗೆ ಭಾರಿ ಶಾಕ್ ನೀಡಿದ್ದಾಳೆ. ವೈರಲ್ ಆಗುತ್ತಿರುವ ಈ ವೀಡಿಯೋ ನೋಡಿದ ಮೇಲೆ ಎಲ್ಲರ ಮನಸ್ಸಿನಲ್ಲಿ ಒಂದೇ ಪ್ರಶ್ನೆ ಇದೆ. .... ಯಾಕೆ? ಅಂತ. ಈ ವೀಡಿಯೊವನ್ನು ಮೈಕ್ರೋಬ್ಲಾಗಿಂಗ್ ಸೈಟ್ X ನಲ್ಲಿ @MFuturewala ಹೆಸರಿನ ಖಾತೆಯ ಮೂಲಕ ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ-Viral Video: ಮೊದಲು ಮುತ್ತು, ನಂತರ ಕಣ್ಸನ್ನೆ, ಭಾವೀ ವರನ ಜೊತೆಗೆ ವಧುವಿನ ರೊಮ್ಯಾಂಟಿಕ್ ವಿಡಿಯೋ ವೈರಲ್!
ವಿಡಿಯೋವನ್ನು (Bizarre Kaju Katli Recipe Video) ಹಂಚಿಕೊಂಡ ಬಳಕೆದಾರರು, ಕಾಜು ಕತ್ಲಿ ಭಜ್ಜಿ ಯಾರಾದರೂ ಟೆಸ್ಟ್ ಮಾಡ್ತೀರಾ? ಅಂತ ಶೀರ್ಷಿಕೆ ನೀಡಲಾಗಿದೆ. ಒಂದು ದಿನದ ಹಿಂದೆ ಹಂಚಿಕೊಳ್ಳಲಾಗಿರುವ ಈ ವಿಡಿಯೋವನ್ನು 1 ಲಕ್ಷ 33 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಕೆಲವು ಬಳಕೆದಾರರು ವಿಡಿಯೋಗೆ ತರಹೇವಾರಿ ಪ್ರತಿಕ್ರಿಯೆ ನೀಡುವ ಮೂಲಕ ತಮಾಷೆ ಮಾಡುತ್ತಿದ್ದರೆ, ಇನ್ನೊಂದೆಡೆ ಇತರ ಬಳಕೆದಾರರು ಭಾರಿ ಆಕ್ರೋಶ ಹೊರಹಾಕುತ್ತಿದ್ದಾರೆ. ವೀಡಿಯೋದ ಆರಂಭದಲ್ಲಿ ನೀವು ಎಂದು ಮಾಡುತ್ತಿರುವಿರಿ ಎಂದು ವ್ಯಕ್ತಿ ಕೇಳುತ್ತಾನೆ, ಅದಕ್ಕೆ ಉತ್ತರಿಸಿದ ಆಂಟಿ ನಾನು ಕಾಜು ಕತ್ಲಿ ಭಜ್ಜಿ ತಯಾರಿಸುತ್ತಿದ್ದೇನೆ ಎಂದು ಆಕೆ ಉತ್ತರಿಸುತ್ತಾಳೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
Anyone for Kaju Katli Bhajiyas??? pic.twitter.com/hl1dr5PDfX
— Mohammed Futurewala (@MFuturewala) March 6, 2024
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ