Side effects of sugar cane juice : ನಿಮಗೆ ಈ ಆರೋಗ್ಯ ಸಮಸ್ಯೆಗಳಿದ್ದರೆ ತಪ್ಪಿಯೂ ಸೇವಿಸಬಾರದು ಕಬ್ಬಿನ ಹಾಲು

Sugarcane Juice Side Effects: ಕಬ್ಬಿಣ ಹಾಲು ಅನೇಕ ಪ್ರಯೋಜನಗಳನ್ನು ಹೊಂದಿದ್ದರೂ,  ಪ್ರತಿಯೊಬ್ಬರೂ ಕಬ್ಬಿಣ ಹಾಲನ್ನು ಸೇವಿಸುವಂತಿಲ್ಲ. ಕಬ್ಬಿನ ರಸ ಅಥವಾ ಕಬ್ಬಿನ ಹಾಲು ಕೆಲವರಿಗೆ ಹಾನಿಕಾರಕವಾಗಿದೆ.

Written by - Ranjitha R K | Last Updated : Mar 8, 2024, 04:22 PM IST
  • ಬೇಸಿಗೆಯಲ್ಲಿ ಕಬ್ಬಿನ ರಸ ಅಥವಾ ಕಬ್ಬಿನ ಹಾಲು ಮಾರುಕಟ್ಟೆಗೆ ಲಗ್ಗೆ ಇಡುತ್ತದೆ
  • ಇದು ರುಚಿಕರವಾಗಿರುವುದು ಮಾತ್ರವಲ್ಲ, ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ
  • ಅಧಿಕ ರಕ್ತದ ಸಕ್ಕರೆಯ ಸಂದರ್ಭದಲ್ಲಿ ಕಬ್ಬಿನ ರಸವನ್ನು ಕುಡಿಯಬಾರದು.
 Side effects of sugar cane juice : ನಿಮಗೆ ಈ ಆರೋಗ್ಯ ಸಮಸ್ಯೆಗಳಿದ್ದರೆ ತಪ್ಪಿಯೂ ಸೇವಿಸಬಾರದು ಕಬ್ಬಿನ ಹಾಲು  title=

Sugarcane Juice Side Effects : ಬೇಸಿಗೆ ಪ್ರಾರಂಭವಾದ ತಕ್ಷಣ, ಕಬ್ಬಿನ ರಸ ಅಥವಾ  ಕಬ್ಬಿನ ಹಾಲು ಮಾರುಕಟ್ಟೆಗೆ ಲಗ್ಗೆ ಇಡುತ್ತದೆ. ಇದು ಕುಡಿಯಲು ರುಚಿಕರವಾಗಿರುವುದು ಮಾತ್ರವಲ್ಲ, ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ಕಾರ್ಬೋಹೈಡ್ರೇಟ್‌ಗಳು, ಕ್ಯಾಲ್ಸಿಯಂ, ಕಬ್ಬಿಣ, ಸತು, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್‌ನಂತಹ ಅನೇಕ ಪೋಷಕಾಂಶಗಳನ್ನು ಇದು ಒಳಗೊಂಡಿದೆ. ಇದು ದೇಹವನ್ನು ತಂಪಾಗಿಸಿ ದೇಹದಲ್ಲಿ ನೀರಿನ ಅಂಶವನ್ನು ಕಾಪಾಡುತ್ತದೆ. ಈ ಮೂಲಕ ಅನೇಕ ರೋಗಗಳನ್ನು ಗುಣಪಡಿಸುತ್ತದೆ. ಇದು ಜೀರ್ಣಕ್ರಿಯೆ, ಮೂಳೆಗಳ ಆರೋಗ್ಯ ಮತ್ತು ಮೂತ್ರಪಿಂಡಗಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಇಷ್ಟೆಲ್ಲಾ ಪ್ರಯೋಜನಗಳಿದ್ದರೂ ಪ್ರತಿಯೊಬ್ಬರೂ ಕಬ್ಬಿನ ಹಾಲನ್ನು ಸೇವಿಸುವಂತಿಲ್ಲ. ಕಬ್ಬಿನ ರಸ ಅಥವಾ ಕಬ್ಬಿನ ಹಾಲು ಕೆಲವರಿಗೆ ಹಾನಿಕಾರಕವಾಗಿದೆ.

ಅಧಿಕ ರಕ್ತದ ಸಕ್ಕರೆಯ ಸಂದರ್ಭದಲ್ಲಿ ಕಬ್ಬಿನ ರಸವನ್ನು ಕುಡಿಯಬಾರದು. :
ಮಧುಮೇಹ ಇದ್ದಾಗ ಕಬ್ಬಿನ ರಸವನ್ನು ಸೇವಿಸಬಾರದು. ಇದು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಮತ್ತು ಹೆಚ್ಚಿನ ಗ್ಲೈಸೆಮಿಕ್ ಲೋಡ್ ಅನ್ನು ಹೊಂದಿದೆ. ಈ ಕಾರಣದಿಂದಾಗಿ ಇದು ರಕ್ತದಲ್ಲಿನ ಸಕ್ಕರೆಯ ಮೇಲೆ ಪರಿಣಾಮ ಬೀರುತ್ತದೆ. ಕಬ್ಬಿನ ರಸವು ಹೆಚ್ಚಿನ ಪ್ರಮಾಣದ ಸಕ್ಕರೆಯನ್ನು ಹೊಂದಿರುತ್ತದೆ. 240 ಮಿಲಿ ಕಬ್ಬಿನ ರಸವು ಸುಮಾರು 50 ಗ್ರಾಂ ಸಕ್ಕರೆಯನ್ನು ಹೊಂದಿರುತ್ತದೆ. ಇದು 12 ಟೀ ಚಮಚಗಳಿಗೆ ಸಮಾನವಾಗಿರುತ್ತದೆ.ಇದನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯನ್ನು ತ್ವರಿತವಾಗಿ ಹೆಚ್ಚಿಸಬಹುದು. 

ಇದನ್ನೂ ಓದಿ : Constipation Remedies : ಉಗುರು ಬೆಚ್ಚಗಿನ ನೀರಿಗೆ ಈ ವಸ್ತುವನ್ನು ಬೆರೆಸಿ ಕುಡಿದರೆ ಸಂಪೂರ್ಣವಾಗಿ ಸ್ವಚ್ಚವಾಗುವುದು ಹೊಟ್ಟೆ !

ದುರ್ಬಲ ಜೀರ್ಣಾಂಗ ವ್ಯವಸ್ಥೆಯನ್ನು ಹೊಂದಿರುವವರು : 
ದುರ್ಬಲ ಜೀರ್ಣಾಂಗ ವ್ಯವಸ್ಥೆ ಇರುವವರು ಕಬ್ಬಿನ ರಸವನ್ನು ಸೇವಿಸಬಾರದು.  ಇದರಲ್ಲಿರುವ ಪೋಲಿಕೋಸನಾಲ್ ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದ ಹೊಟ್ಟೆನೋವು, ವಾಂತಿ, ಭೇದಿ ಮುಂತಾದ ಹಲವು ಸಮಸ್ಯೆಗಳು ಎದುರಾಗುತ್ತವೆ. 

ಬೊಜ್ಜಿನ ಸಮಸ್ಯೆ : 
ಸ್ಥೂಲಕಾಯತೆಯಿಂದ ಬಳಲುತ್ತಿರುವವರು ಕಬ್ಬಿನ ರಸವನ್ನು ಸೇವಿಸದಿದ್ದರೆ ಒಳ್ಳೆಯದು. ಇದು ಹೆಚ್ಚಿನ ಕ್ಯಾಲೋರಿ ಅಂಶವನ್ನು ಹೊಂದಿದೆ. ಹಾಗಾಗಿ ಇದನ್ನು ಸೇವಿಸುವುದರಿಂದ ನಿಮ್ಮ ತೂಕ ಹೆಚ್ಚಾಗಬಹುದು. ಅಲ್ಲದೆ, ಇದು ಹೆಚ್ಚಿನ ಪ್ರಮಾಣದ ಸಕ್ಕರೆಯನ್ನು ಹೊಂದಿರುವುದರಿಂದ ದೇಹದ ಕೊಬ್ಬನ್ನು ಹೆಚ್ಚಿಸುತ್ತದೆ.  ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದರೆ ತಪ್ಪಿಯೂ ಕಬ್ಬಿಣ ಹಾಲನ್ನು ಸೇವಿಸಬಾರದು. 

ಇದನ್ನೂ ಓದಿ : ಮೊದಲ ಬಾರಿ ʼಸೆಕ್ಸ್‌ʼ ಮಾಡುವಾಗ ಈ 5 ತಪ್ಪುಗಳನ್ನು ಮಾಡಬೇಡಿ..! 

ಶೀತ ಮತ್ತು ಕೆಮ್ಮು ಇದ್ದಾಗ : 
ನೆಗಡಿ ಇದ್ದರೂ ಕಬ್ಬಿನ ರಸವನ್ನು ಕುಡಿಯಬಾರದು. ಇದರ ಸೇವನೆಯಿಂದ ನೆಗಡಿ ಮತ್ತು ಕೆಮ್ಮಿನ ಸಮಸ್ಯೆ ಹೆಚ್ಚಾಗಬಹುದು. ಇದರ ಸೇವನೆಯಿಂದ ಗಂಟಲು ನೋವು ಮತ್ತು ತಲೆನೋವು ಕೂಡಾ ಉಂಟಾಗುತ್ತದೆ.

ನಿದ್ರಾಹೀನತೆಯ ಸಮಸ್ಯೆ : 
ನೀವು ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದರೆ, ಕಬ್ಬಿನ ರಸವನ್ನು ಕುಡಿಯಬಾರದು. ಅದರಲ್ಲಿರುವ ಪೋಲಿಕೋಸನಾಲ್ ನಿದ್ರೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ ನೀವು ನಿದ್ರಾಹೀನತೆ ಮತ್ತು ಒತ್ತಡದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. 

(ಸೂಚನೆ : ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee Kannada News ಅದನ್ನು ಅನುಮೋದಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News