ಭಾರತದ ಅತಿದೊಡ್ಡ ಫ್ಲಾಪ್ ಸಿನಿಮಾ ಯಾವುದು ಗೊತ್ತೆ..? ಸೋನು ನಿಗಮ್‌ ಈ ಚಿತ್ರದಲ್ಲಿದ್ದರು..

Indian flop movies list : ಕೆಲವು ಮಲ್ಟಿ-ಸ್ಟಾರರ್ ಚಲನಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ಕಂಡಿವೆ. ಇನ್ನೂ ಕೆಲವು ದಿಗ್ಗಜ ನಟರಿದ್ದರೂ ಮಕಾಡೆ ಮಲಗಿವೆ. ಈ ಪೈಕಿ 20 ಸ್ಟಾರ್‌ ನಟರಿದ್ದ ಸಿನಿಮಾವೊಂದು ಪ್ಲಾಪ್‌ ಆಗಿದ್ದಲ್ಲದೇ, ಅನೇಕ ನಟರ ವೃತ್ತಿ ಕೊನೆಗೊಳ್ಳಲು ಕಾರಣವಾಯಿತು.. 

Written by - Krishna N K | Last Updated : Mar 8, 2024, 06:42 PM IST
  • ಅನೇಕ ಮಲ್ಟಿ-ಸ್ಟಾರರ್ ಚಲನಚಿತ್ರಗಳು ಬಾಕ್ಸ್‌ ಆಫೀಸ್‌ನಲ್ಲಿ ಅದ್ಭುತ ಗಳಿಕೆ ಕಂಡಿವೆ.
  • 2002 ರಲ್ಲಿ ರಿಲೀಸ್‌ ಆದ 22 ಸ್ಟಾರ್‌ಗಳನ್ನೊಂಡ ಸಿನಿಮಾ ಸೂಪರ್ ಫ್ಲಾಪ್ ಆಗಿತ್ತು.
  • ಅಲ್ಲದೆ, ಈ ಸಿನಿಮಾ ಕೆಲವು ನಟರ ವೃತ್ತಿಜೀವನವನ್ನು ಶಾಶ್ವತವಾಗಿ ಕೊನೆಗೊಳಿಸಿತು.
ಭಾರತದ ಅತಿದೊಡ್ಡ ಫ್ಲಾಪ್ ಸಿನಿಮಾ ಯಾವುದು ಗೊತ್ತೆ..? ಸೋನು ನಿಗಮ್‌ ಈ ಚಿತ್ರದಲ್ಲಿದ್ದರು.. title=
Trending news

Indian flop movies : 70 ರ ದಶಕದಲ್ಲಿ ಬಾಲಿವುಡ್‌ನಲ್ಲಿ ಮಲ್ಟಿ-ಸ್ಟಾರರ್ ಚಲನಚಿತ್ರಗಳನ್ನು ಮಾಡುವ ಪ್ರವೃತ್ತಿಯು ಪ್ರಾರಂಭವಾಯಿತು. ಕೆಲವು ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ಕಂಡವು. ಬಾಲಿವುಡ್‌ನಲ್ಲಿ ಅನೇಕ ಮಲ್ಟಿ-ಸ್ಟಾರರ್ ಚಲನಚಿತ್ರಗಳು ಬಾಕ್ಸ್‌ ಆಫೀಸ್‌ನಲ್ಲಿ ಅದ್ಭುತ ಗಳಿಕೆ ಕಂಡಿದ್ದವು. ಇನ್ನು ಕೆಲವು ಭಾರಿ ನಷ್ಟವನ್ನು ಅನುಭವಿಸಿವೆ.. ಈ ಪೈಕಿ 2002 ರಲ್ಲಿ ರಿಲೀಸ್‌ ಆದ 22 ಸ್ಟಾರ್‌ಗಳನ್ನೊಂಡ ಸಿನಿಮಾ ಸೂಪರ್ ಫ್ಲಾಪ್ ಆಗಿತ್ತು. ಅಲ್ಲದೆ, ಕೆಲವು ನಟರ ವೃತ್ತಿಜೀವನವನ್ನು ಶಾಶ್ವತವಾಗಿ ಕೊನೆಗೊಳಿಸಿತು.

ಹೌದು ನಾವು ಮಾತನಾಡುತ್ತಿರುವುದು 'ಜಾನಿ ದುಷ್ಮನ್-ಏಕ್ ಅನೋಖಿ ಕಹಾನಿ' ಸಿನಿಮಾದ ಬಗ್ಗೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್, ಸುನೀಲ್ ಶೆಟ್ಟಿ ಮತ್ತು ಸನ್ನಿ ಡಿಯೋಲ್ ಅವರಂತಹ ಅನೇಕ ಸೂಪರ್‌ಸ್ಟಾರ್‌ಗಳು ನಟಿಸಿದ್ದರು.. ಸಾಕಷ್ಟು ಪ್ರಚಾರದ ನಡುವೆ ಈ ಸಿನಿಮಾವನ್ನು ಸೂಪರ್‌ ಹಿಟ್‌ ಮಾಡಲು ನಿರ್ಮಾಪಕರು ಶತ ಪ್ರಯತ್ನ ಮಾಡಿದ್ದರು. ಆದ್ರೆ ಚಿತ್ರ ಅಟ್ಟರ್‌ ಪ್ಲಾಪ್‌ ಕಂಡಿತ್ತು.

ಇದನ್ನೂ ಓದಿ:ಪಾಕಿಸ್ತಾನದಲ್ಲಿ ರಾಮ್‌ ಚರಣ್‌ ಬಗ್ಗೆ ಹೆಚ್ಚುತ್ತಿದೆ ಚರ್ಚೆ..! ವಿಡಿಯೋ ವೈರಲ್ 

ಅರ್ಷದ್ ವಾರ್ಸಿ, ಸೋನು ನಿಗಮ್, ಆದಿತ್ಯ ಪಾಂಚೋಲಿ, ರಾಜ್ ಬಬ್ಬರ್, ಅರ್ಮಾನ್ ಕೊಹ್ಲಿ, ಮನಿಶಾ ಕೊಯಿರಾಲಾ, ಶರದ್ ಕಪೂರ್, ಸಿದ್ಧಾರ್ಥ್ ರೇ, ರಜತ್ ಬೇಡಿ, ರಂಭಾ, ಕಿರಣ್ ರಾಥೋಡ್, ಪಿಂಕಿ ಕ್ಯಾಂಪ್‌ಬೆಲ್, ಅಫ್ತಾಬ್ ಶಿವದಾಸನಿ, ಅಮರೀಶ್ ಪುರಿ, ಜಾನಿ ಲಿವರ್, ಉಪಾಸನಾ ಸಿಂಗ್ ಮುಂತಾದ ಅನೇಕ ನಟರು, ಅಮನ್ ವರ್ಮಾ ಮತ್ತು ಶಹಬಾಜ್ ಖಾನ್ ಕೂಡ ಈ ಚಿತ್ರದಲ್ಲಿ ನಟಿಸಿದ್ದರು. 

ಚಿತ್ರದಲ್ಲಿ ಅರ್ಮಾನ್ ಕೊಹ್ಲಿ 'ಇಚ್ಛಧಾರಿ ನಾಗ್' ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರವನ್ನು ರಾಜ್ ಕುಮಾರ್ ಕೊಹ್ಲಿ ಅವರು 18 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ದೇಶಿದ್ದರು. ವರದಿಗಳ ಪ್ರಕಾರ ಈ ಸಿನಿಮಾ ಆಫೀಸ್‌ನಲ್ಲಿ ಕೇವಲ 11 ಕೋಟಿ ಗಳಿಸಿತು ಎಂದು ಹೇಳಲಾಗಿದೆ. 

ಇದನ್ನೂ ಓದಿ: ʼಕಣ್ಣಪ್ಪʼ ಚಿತ್ರದ ಫಸ್ಟ್‌ ಲುಕ್‌..! ವಿಷ್ಣು ಮಂಚು ಅವತಾರಕ್ಕೆ ಫ್ಯಾನ್ಸ್‌ ಫಿದಾ

ಅಲ್ಲದೆ, ಗಾಯಕ ಸೋನು ನಿಗಮ್ ಕೂಡ ಈ ಚಿತ್ರದ ಮೂಲಕ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. 'ಜಾನಿ ದುಷ್ಮನ್' ರಾಜ್‌ಕುಮಾರ್ ಕೊಹ್ಲಿ ಅವರ ಕೊನೆಯ ಚಿತ್ರವಾಗಿದೆ. ಅರ್ಮಾನ್ ಕೊಹ್ಲಿ, ಸೋನು ನಿಗಮ್, ಸಿದ್ಧಾರ್ಥ್ ರೇ, ರಜತ್ ಬೇಡಿ, ರಂಭಾ, ಕಿರಣ್ ರಾಥೋಡ್, ಪಿಂಕಿ ಕ್ಯಾಂಪ್‌ಬೆಲ್ ಮತ್ತು ಅಫ್ತಾಬ್ ಶಿವದಾಸನಿ ಅವರ ನಟನಾ ವೃತ್ತಿಜೀವನವು ಈ ಚಿತ್ರದ ವೈಫಲ್ಯದ ನಂತರ ಕೊನೆಗೊಂಡಿತು. 'ಜಾನಿ ದುಷ್ಮನ್-ಏಕ್ ಅನೋಖಿ ಕಹಾನಿ' ಭಾರತದ ಅತಿದೊಡ್ಡ ಫ್ಲಾಪ್ ಚಿತ್ರಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News