ನವದೆಹಲಿ: ಆನ್ಲೈನ್ನಲ್ಲಿ ಅನೇಕ ಬಾರಿ ಆರ್ಡರ್ ಮಾಡಿದ ವಸ್ತುಗಳ ಬದಲು ಬೇರೆ ವಸ್ತುಗಳ ಬಂದಿರುವ ಅನೇಕ ಘಟನೆಗಳು ನಡೆದಿವೆ. ಮೊಬೈಲ್ ಆರ್ಡರ್ ಮಾಡಿದವರಿಗೆ ಸೋಪುಗಳು ಬಂದಿರುವ ಘಟನೆಗಳು ಸಹ ನಡೆದಿವೆ. ಇಂದು ಅನೇಕರು ಮೊಬೈಲ್ ಸೇರಿದಂತೆ ಅನೇಕ ವಸ್ತುಗಳನ್ನು ಆನ್ಲೈನ್ನಲ್ಲಿ ಆರ್ಡರ್ ಮಾಡುತ್ತಾರೆ. ಹೀಗೆ ಆರ್ಡರ್ ಮಾಡುವ ವ್ಯಕ್ತಿಗಳು ಆನ್ಲೈನ್ ವಂಚನೆಗೆ ತುತ್ತಾಗುತ್ತಾರೆ.
ಒಂದು ಐಟಂ ಆರ್ಡರ್ ಮಾಡಿದರೆ, ಇನ್ನೊಂದು ಐಟಂ ಮನೆಗೆ ಬರುತ್ತವೆ. ಅದೇ ರೀತಿ ಮತ್ತೊಂದು ಘಟನೆ ನಡೆದಿದೆ. ಫ್ಲಿಪ್ಕಾರ್ಟ್ನಲ್ಲಿ ನಥಿಂಗ್ ಫೋನ್(2A) ಆರ್ಡರ್ ಮಾಡಿದ್ದ ಯುವನಿಕೆ ಶಾಕ್ ಆಗಿದೆ. 2 ದಿನಗಳ ನಂತರ ಬಂದ ಪಾರ್ಸೆಲ್ ತೆರೆದು ನೋಡಿ ಆತನಿಗೆ ನಥಿಂಗ್ ಫೋನ್ ಬದಲು ನಕಲಿ ಬ್ರ್ಯಾಂಡ್ ಫೋನ್ ಇರುವುದು ಗೊತ್ತಾಗಿದೆ.
First, your seller rejected my return request on some whimsical grounds, providing one reason in the in-app reply and different reasons in the email response.
(2/n) pic.twitter.com/jqR7g4LUjj— Tuyyab (@MalikTuyyab) March 18, 2024
ಇದನ್ನೂ ಓದಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅರೆಸ್ಟ್ ; ಮದ್ಯ ಹಗರಣ ಕೇಸ್ ಟೈಮ್ ಲೈನ್ ಇಲ್ಲಿದೆ
ಅಮಾಲಿಕ್ ತುಯ್ಯಬ್ ಎಂಬುವರು ಫ್ಲಿಪ್ಕಾರ್ಟ್ನಲ್ಲಿ ನಥಿಂಗ್ ಫೋನ್(2A) ಆರ್ಡರ್ ಮಾಡಿದ್ದರು. 2 ದಿನಗಳ ನಂತರ ಬಂದ ಪಾರ್ಸೆಲ್ ತೆರೆದು ನೋಡಿದಾಗ ಅವರಿಗೆ ಶಾಕ್ ಆಗಿತ್ತು. ಯಾಕೆಂದರೆ ನಥಿಂಗ್ ಫೋನ್ ಬದಲಿಗೆ ನಕಲಿ ಬ್ರ್ಯಾಂಡ್ನ (iKall) ಫೋನ್ ಕಂಡು ಅವಾಕ್ಕಾಗಿದ್ದಾರೆ.
ಫ್ಲಿಪ್ಕಾರ್ಟ್ ಸೇವಾ ಕೇಂದ್ರವನ್ನು ಸಂಪರ್ಕಿಸಿದ ಅವರಿಗೆ ಯಾವುದೇ ಉತ್ತರ ಬಂದಿಲ್ಲ. ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಕೂಡಲೇ ತನಗೆ ಒರಿಜಿನಲ್ ಫೋನ್ ಒದಗಿಸುವಂತೆ ಆಗ್ರಹಿಸಿದ್ದಾರೆ. ಅವರ ಈ ಟ್ವೀಟ್ಗೆ ಅನೇಕರು ಕಾಮೆಂಟ್ ಮಾಡಿದ್ದು, ಫ್ಲಿಪ್ಕಾರ್ಟ್ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಕೂಡಲೇ ಗ್ರಾಹಕರಿಗೆ ಒರಿಜಿನಲ್ ಫೋನ್ ಒದಗಿಸುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: Special Train : ಮಂಗಳೂರಿನಿಂದ ನವದೆಹಲಿಗೆ ವಿಶೇಷ ರೈಲು ಸೇವೆ-ಸಮಯ, ಟಿಕೆಟ್ ದರಗಳ ವಿವರ ಇಲ್ಲಿದೆ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ