9 ನಿಂಬೆ ಹಣ್ಣು 2 ಲಕ್ಷಕ್ಕೆ ಹರಾಜು ! ಈ ದೇವಾಲಯದ ನಿಂಬೆಗಾಗಿ ಜನ ಮುಗಿ ಬೀಳುವುದು ಈ ಪವಾಡಕ್ಕಾಗಿ !

Tamil Nadu Temple Lemon Auction:ದೇವಸ್ಥಾನದಲ್ಲಿ ನಡೆದ ನಿಂಬೆಹಣ್ಣು ಹರಾಜಿನಲ್ಲಿ 9 ನಿಂಬೆಹಣ್ಣು 2.3 ಲಕ್ಷಕ್ಕೆ ಹರಾಜಾಗಿದೆ. ಕೇವಲ 20-30 ರೂ.ಗೆ ಸಿಗುವ ಈ ನಿಂಬೆಹಣ್ಣುಗಳು 2 ಲಕ್ಷ ರೂಪಾಯಿಗೆ ಹರಾಜಾಗಿರುವುದು ನಿಜಕ್ಕೂ ವಿಶೇಷ.  

Written by - Ranjitha R K | Last Updated : Mar 28, 2024, 11:48 AM IST
  • ತಮಿಳುನಾಡಿನ ದೇವಾಲಯಗಳು ಪ್ರಪಂಚದಾದ್ಯಂತ ಹೆಸರಾಗಿದೆ.
  • ಈ ದೇವಾಲಯಗಳಿಗೆ ಹರಿದು ಬರುವ ಭಕ್ತರ ಸಂಖ್ಯೆ ಕೂಡಾ ಅಪಾರ.
  • ವಿಲ್ಲುಪುರಂ ದೇವಾಲಯ ಕೂಡಾ ಬಹಳ ಹೆಸರುವಾಸಿಯಾದ ಮಂದಿರ
9 ನಿಂಬೆ ಹಣ್ಣು 2 ಲಕ್ಷಕ್ಕೆ ಹರಾಜು ! ಈ ದೇವಾಲಯದ ನಿಂಬೆಗಾಗಿ ಜನ ಮುಗಿ ಬೀಳುವುದು ಈ ಪವಾಡಕ್ಕಾಗಿ !  title=

Tamil Nadu Temple Lemon Auction : ತಮಿಳುನಾಡಿನ ದೇವಾಲಯಗಳು ತಮ್ಮ ಭವ್ಯತೆ, ಸೌಂದರ್ಯ ಮತ್ತು ಸಮೃದ್ಧಿಗಾಗಿ ಪ್ರಪಂಚದಾದ್ಯಂತ ಹೆಸರಾಗಿದೆ.  ಇದರಿಂದಾಗಿ ಈ ದೇವಾಲಯಗಳಿಗೆ ಹರಿದು ಬರುವ ಭಕ್ತರ ಸಂಖ್ಯೆ ಕೂಡಾ ಅಪಾರ. ತಮಿಳುನಾಡಿನ ಅಂತಹ ಪ್ರಸಿದ್ಧ ದೇವಾಲಯವೆಂದರೆ ವಿಲ್ಲುಪುರಂ ದೇವಾಲಯ. ಈ ದೇವಾಲಯವು ಇದೀಗ ಭಾರೀ ಸುದ್ದಿಯಲ್ಲಿದೆ. ಇತ್ತೀಚೆಗಷ್ಟೇ ಇಲ್ಲಿ ಪಂಗುನಿ ಉತಿರಂ ಜಾತ್ರೆ ಮುಗಿದಿದೆ. ಇದಾದ ನಂತರ ಈ ದೇವಾಲಯದಲ್ಲಿ 9 ನಿಂಬೆಹಣ್ಣುಗಳನ್ನು ಹರಾಜಿಗೆ ಇಡಲಾಯಿತು. ದೇವಸ್ಥಾನದಲ್ಲಿ ನಡೆದ ನಿಂಬೆಹಣ್ಣು ಹರಾಜಿನಲ್ಲಿ 9 ನಿಂಬೆಹಣ್ಣು 2.3 ಲಕ್ಷಕ್ಕೆ ಹರಾಜಾಗಿದೆ. ಕೇವಲ 20-30 ರೂ.ಗೆ ಸಿಗುವ ಈ ನಿಂಬೆಹಣ್ಣುಗಳು 2 ಲಕ್ಷ ರೂಪಾಯಿಗೆ ಹರಾಜಾಗಿರುವುದು ನಿಜಕ್ಕೂ ವಿಶೇಷ. ಅಷ್ಟಕ್ಕೂ ಈ ನಿಂಬೆಹಣ್ಣನ್ನು ಇಷ್ಟು ಹೆಚ್ಚು ಮೊತ್ತಕ್ಕೆ ಹರಾಜು ಹಾಕಿರುವ ಹಿಂದಿನ ಕಾರಣ ಏನು? ಈ ನಿಂಬೆಹಣ್ಣಿನ ವಿಶೇಷತೆ ಏನು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.  

ದೇವರ ಪವಿತ್ರ ಈಟಿಗೆ ಜೋಡಿಸಲಾದ ನಿಂಬೆ ಹಣ್ಣು : 
ವಿಲ್ಲುಪುರಂ ದೇವಸ್ಥಾನದಲ್ಲಿ ಪ್ರತಿ ವರ್ಷ ಪಂಗುನಿ ಉತಿರಂ ಜಾತ್ರೆ ನಡೆಯುತ್ತದೆ.  ಈ ಜಾತ್ರೆ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಈ ಉತ್ಸವದ  ಕೊನೆಯ ದಿನದಂದು ಪೂಜೆಗೆ ಬಳಸುವ ನಿಂಬೆಹಣ್ಣುಗಳನ್ನು ಹರಾಜು ಹಾಕಲಾಗುತ್ತದೆ. ಅದರಂತೆಯೇ ಈ ಬಾರಿ ದೇವಸ್ಥಾನದ 9 ನಿಂಬೆಹಣ್ಣುಗಳನ್ನೂ ಹರಾಜಿಗೆ ಇಡಲಾಯಿತು. ಈ 9 ನಿಂಬೆ ಹಣ್ಣುಗಳು 2.3 ಲಕ್ಷಕ್ಕೆ ಹರಾಜಾಗಿದೆ.ಈ ನಿಂಬೆಹಣ್ಣುಗಳನ್ನು ದೇವರ ಪವಿತ್ರ ಈಟಿಗೆ ಜೋಡಿಸಲಾಗಿದೆ. ಈ ನಿಂಬೆಹಣ್ಣಿನಿಂದ ತಯಾರಿಸಿದ ನಿಂಬೆ ಪಾನಕವನ್ನು ಸೇವಿಸುವುದರಿಂದ ಬಂಜೆತನ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆಯಿದೆ. ಅಲ್ಲದೆ ಇದು ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿಯ ಹೆಚ್ಚಳಕ್ಕೆ ಕಾರಣವಾಗುತ್ತದೆಯಂತೆ. ಹಾಗಾಗಿ ಮಕ್ಕಳಿಲ್ಲದ ದಂಪತಿಗಳು ಹರಾಜಿನಲ್ಲಿ ಈ ನಿಂಬೆಹಣ್ಣುಗಳನ್ನು ಖರೀದಿಸಲು ಮುಗಿ ಬೀಳುತ್ತಾರೆ. ಮುರುಗ ಸ್ವಾಮಿಯ ಈಟಿಗೆ ಅಂಟಿಕೊಂಡಿರುವ ಈ ನಿಂಬೆಹಣ್ಣುಗಳು ಮಾಂತ್ರಿಕ ಶಕ್ತಿಯನ್ನು ಹೊಂದಿರುತ್ತವೆ ಎನ್ನುವುದು ಇಲ್ಲಿನ ಜನರ ಬಲವಾದ ನಂಬಿಕೆ. 

ಇದನ್ನೂ ಓದಿ : Samudrika Shastra: ದೇಹದ ಈ ಭಾಗದಲ್ಲಿ ಮಚ್ಚೆ ಇರುವ ಮಹಿಳೆಯರಿಗೆ ಬೇಗ ಸಂತಾನ ಸುಖ ಪ್ರಾಪ್ತಿಯಾಗುತ್ತದೆ!

ತಮಿಳುನಾಡಿನಲ್ಲಿರುವ ಈ ದೇವಾಲಯದ ಪವಿತ್ರ ನಿಂಬೆಹಣ್ಣನ್ನು ಹರಾಜು ಹಾಕುವ ಘಟನೆ ಮಾತ್ರ ವಿಶಿಷ್ಟವಲ್ಲ, ನಿಂಬೆಹಣ್ಣುಗಳನ್ನು ಹರಾಜು ಹಾಕುವ ವಿಧಾನವೂ ವಿಶೇಷವಾಗಿದೆ.ಈ ಹಬ್ಬಕ್ಕೆ ಸಂಬಂಧಿಸಿದ ವಿವಿಧ ಆಚರಣೆಗಳನ್ನು ನಡೆಸಿದ ನಂತರ, ದೇವಾಲಯದ ಅರ್ಚಕರು ಈ ನಿಂಬೆಹಣ್ಣುಗಳನ್ನು ಮೊಳೆ   ತುಂಬಿದ ವೇದಿಕೆಯ ಮೇಲೆ ನಿಂತು ಹರಾಜು ಹಾಕುತ್ತಾರೆ.ಇದರ ನಂತರ, ಜನರು ಈ ನಿಂಬೆಹಣ್ಣುಗಳನ್ನು ಅತಿ ಹೆಚ್ಚು ಬಿಡ್ ಮಾಡುವ ಮೂಲಕ ಖರೀದಿಸುತ್ತಾರೆ. 9 ದಿನಗಳ ಉತ್ಸವದಲ್ಲಿ ದೇವಸ್ಥಾನದ ಅರ್ಚಕರು ಪ್ರತಿದಿನ ನಿಂಬೆ ಹಣ್ಣನ್ನು ಈಟಿಯಿಂದ ಚುಚ್ಚುತ್ತಾರೆ.ನಂತರ ಹಬ್ಬದ ಕೊನೆಯ ದಿನದಂದು ದೇವಾಲಯದ ಆಡಳಿತ ಮಂಡಳಿ ನಿಂಬೆಹಣ್ಣುಗಳನ್ನು ಹರಾಜು ಹಾಕುತ್ತದೆ.ಇದರಲ್ಲಿ ಮೊದಲ ದಿನದ ನಿಂಬೆಯನ್ನು ಅತ್ಯಂತ ಶಕ್ತಿಶಾಲಿ ಎಂದು ಪರಿಗಣಿಸಲಾಗುತ್ತದೆ. 

ಈ ವರ್ಷ ಕುಳತ್ತೂರು ಗ್ರಾಮದ ದಂಪತಿ 50,500 ರೂ.ಗೆ ಮೊದಲ ದಿನದ ನಿಂಬೆಹಣ್ಣು ಖರೀದಿಸಿದ್ದಾರೆ. ಎಲ್ಲಾ 9 ನಿಂಬೆಹಣ್ಣುಗಳು ಒಟ್ಟು 2,36,100 ರೂ.ಗೆ ಹರಾಜಾಗಿದೆ. 

ಇದನ್ನೂ ಓದಿ : Chanakya Niti: ಚಾಣಕ್ಯನ ಈ 5 ಮಾತುಗಳನ್ನು ನೆನಪಿನಲ್ಲಿಡಿ, ನಿಮ್ಮ ಜೇಬು ಎಂದಿಗೂ ಖಾಲಿ ಉಳಿಯುವುದಿಲ್ಲ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News