Hair Fall Home Remedies: ಕೂದಲು ಉದುರುವ ಸಮಸ್ಯೆಗೆ ಮತ್ತು ಕೂದಲಿನ ಆರೋಗ್ಯ ರಕ್ಷಣೆಗೆ ನೀವು ಸೊಂಫು ಬಳಸಬಹುದು: ಸಾಮಾನ್ಯವಾಗಿ ಪೋಷಕಾಂಶಗಳ ಕೊರತೆ ಮತ್ತು ಆರೈಕೆಯ ಕೊರತೆಯಿಂದ ಕೂದಲು ಅತಿಯಾಗಿ ಉದುರಲು ಪ್ರಾರಂಭಿಸುತ್ತದೆ. ಅನೇಕ ಸಂದರ್ಭಗಳಲ್ಲಿ, ಹಾರ್ಮೋನುಗಳ ಬದಲಾವಣೆಗಳು, ಆನುವಂಶಿಕ ಸಮಸ್ಯೆಗಳು ಅಥವಾ ಹವಾಮಾನದಲ್ಲಿನ ಬದಲಾವಣೆಗಳು ಕೂಡ ಕೂದಲು ಉದುರುವಿಕೆಗೆ ಕಾರಣವಾಗಬಹುದು. ಕೂದಲು ಉದುರುವುದನ್ನು ತಡೆಯಲು ಜನರು ಹಲವಾರು ಪ್ರಯತ್ನಗಳನ್ನು ಮಾಡುತ್ತಾರೆ. ದುಬಾರಿ ಕೂದಲ ರಕ್ಷಣೆಯ ಉತ್ಪನ್ನಗಳಿಂದ ಹಿಡಿದು ಕೂದಲಿಗೆ ಚಿಕಿತ್ಸೆ ನೀಡುವವರೆಗೆ ಅನೇಕ ಸಂಗತಿಗಳನ್ನು ಜನರು ಟ್ರೈ ಮಾಡುತ್ತಲೇ ಇರುತ್ತಾರೆ. ಆದರೆ ಅವುಗಳಲ್ಲಿರುವ ರಾಸಾಯನಿಕಗಳಿಂದಾಗಿ ಅವು ಅನೇಕರಿಗೆ ಹೊಂದುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನೀವು ಸೊಂಫು ಅನ್ನು ಬಳಸಬಹುದು. ಇದರಲ್ಲಿರುವ ಅಗತ್ಯ ಸಂಯುಕ್ತಗಳು ಕೂದಲು ಉದುರುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ (How To Use Fennel Seeds To Stop Hair Fall). ಕೂದಲು ಉದುರುವ ಸಮಸ್ಯೆಗೆ ಫೆನ್ನೆಲ್ ಅನ್ನು ಹೇಗೆ ಬಳಸಬೇಕು ತಿಳಿದುಕೊಳ್ಳೋಣ ಬನ್ನಿ, (Lifestyle News In Kannada)
ಕೂದಲು ಉದುರುವಿಕೆಗೆ ಪ್ರಯೋಜನಕಾರಿ Fennel Seeds Use To Stop Hair Fall
ಸೊಂಫುವಿನಲ್ಲಿ ಅಗತ್ಯ ಜೀವಸತ್ವಗಳು ಮತ್ತು ಖನಿಜಗಳು ಕಂಡುಬರುತ್ತವೆ. ಅವು ನೈಸರ್ಗಿಕ ಎಣ್ಣೆಯನ್ನು ಹೊಂದಿರುತ್ತದೆ, ಹೀಗಾಗಿ ಸೊಂಫು ಕೂದಲಿನ ಕಿರುಚೀಲಗಳನ್ನು ಬಲಪಡಿಸುತ್ತದೆ. ಇದು ಕೂದಲಿನಲ್ಲಿ ತೇವಾಂಶವಿರುವಂತೆ ನೋಡಿಕೊಳ್ಳುತ್ತದೆ. ಇದರಿಂದಾಗಿ ಕೂದಲಿನ ಬೇರುಗಳು ಗಟ್ಟಿಯಾಗುತ್ತವೆ. ಇದರಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಪೋಷಕಾಂಶಗಳು ಸಹ ಕಂಡುಬರುತ್ತವೆ, ಅವೂ ಕೂಡ ಕೂದಲನ್ನು ಬುಡದಿಂದ ಬಲಪಡಿಸಲು ಸಹಾಯ ಮಾಡುತ್ತವೆ.
ಕೂದಲು ಉದುರುವಿಕೆ ತಡೆಗಟ್ಟಲು ಸೊಂಫು ಹೇಗೆ ಬಳಸಬೇಕು? (How To Use Fennel Seeds To Stop Hair Fall)
ಫೆನ್ನೆಲ್ ನೀರಿನಿಂದ ಕೂದಲನ್ನು ತೊಳೆಯಿರಿ (Fennel Seed Water For Hair Fall)
ನಿಮ್ಮ ಕೂದಲನ್ನು ಸೊಂಫು ನೀರಿನಿಂದ ತೊಳೆಯುವುದರಿಂದ ನೀವು ಬಹಳಷ್ಟು ಪ್ರಯೋಜನಗಳನ್ನು ಪಡೆಯಬಹುದು. ಇದು ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ ಮತ್ತು ನೆತ್ತಿಯಲ್ಲಿ ತೇವಾಂಶವನ್ನು ಕಾಪಾಡುತ್ತದೆ. ನೀವು ವಾರದಲ್ಲಿ ಎರಡರಿಂದ ಮೂರು ಬಾರಿ ಈ ವಿಧಾನವನ್ನು ಅಳವಡಿಸಿಕೊಳ್ಳಬಹುದು. ಇದಕ್ಕಾಗಿ ನೀವು 3 ರಿಂದ 4 ಚಮಚ ಸೊಂಫು ಅನ್ನು ನೀರಿನಲ್ಲಿ ಕುದಿಸಬೇಕು. ಈಗ ಅದನ್ನು ತಣ್ಣಗಾಗಿಸಿ ಮತ್ತು ಕೂದಲನ್ನು ತೊಳೆಯಲು ಬಳಸಿ. ಇದಲ್ಲದೇ ಸ್ಪ್ರೇ ಬಾಟಲಿಯಲ್ಲಿ ಹಾಕಿ ಇಟ್ಟುಕೊಳ್ಳಬಹುದು. ಕೆಲವೇ ತಿಂಗಳುಗಳಲ್ಲಿ ನೀವು ವ್ಯತ್ಯಾಸವನ್ನು ಗಮನಿಸಬಹುದು.
ಫೆನ್ನೆಲ್ ಎಣ್ಣೆಯನ್ನು ತಯಾರಿಸಿ (Fennel Seed Oil For Hair Fall)
ಸಾಮಾನ್ಯ ಕೂದಲು ಎಣ್ಣೆಯ ಬದಲಿಗೆ ನೀವು ಫೆನ್ನೆಲ್ ಎಣ್ಣೆಯನ್ನು ಬಳಸಬಹುದು. ಇದಕ್ಕಾಗಿ ನೀವು ಯಾವುದೇ ಬೇಸ್ ಎಣ್ಣೆ ಉದಾಹರಣೆಗೆ ಕೊಬ್ಬರಿ ಎಣ್ಣೆಯಲ್ಲಿ ಸೊಂಫು ನೀರನ್ನು ಹಾಕಿ ಬಿಸಿ ಮಾಡಿ. ಶಾಂಪೂ ಮಾಡುವ ಎರಡು ಗಂಟೆಗಳ ಮೊದಲು ಈ ಎಣ್ಣೆಯಿಂದ ಮಸಾಜ್ ಮಾಡಿ. ನಂತರ ಸೌಮ್ಯವಾದ ಶಾಂಪೂವಿನಿಂದ ಕೂದಲನ್ನು ಚೆನ್ನಾಗಿ ತೊಳೆಯಿರಿ.
ಇದನ್ನೂ ಓದಿ-Samudrika Shastra: ದೇಹದ ಈ ಭಾಗದಲ್ಲಿ ಮಚ್ಚೆ ಇರುವ ಮಹಿಳೆಯರಿಗೆ ಬೇಗ ಸಂತಾನ ಸುಖ ಪ್ರಾಪ್ತಿಯಾಗುತ್ತದೆ!
ಫೆನ್ನೆಲ್ ಹೇರ್ ಮಾಸ್ಕ್ ಮಾಡಿ- Fennel Seed Hair Mask For Hair Fall
ಫೆನ್ನೆಲ್ ಹೇರ್ ಮಾಸ್ಕ್ ಅನ್ನು ವಾರಕ್ಕೆ ಎರಡು ಬಾರಿ ಅನ್ವಯಿಸಿ. ಇದು ನೆತ್ತಿಯಲ್ಲಿ ತೇವಾಂಶವನ್ನು ಕಾಪಾಡುತ್ತದೆ ಮತ್ತು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ. ಫೆನ್ನೆಲ್ ಹೇರ್ ಮಾಸ್ಕ್ ತಯಾರಿಸಲು, ನೀವು ರಾತ್ರಿಯಿಡೀ ನೀರಿನಲ್ಲಿ ಸೊಂಫು ಅನ್ನು ನೆನೆಸಿಡಬೇಕು. ಬೆಳಗ್ಗೆ ಅದರ ಪೇಸ್ಟ್ ತಯಾರಿಸಿ. ಅಲ್ಲದೆ, ಅದರಲ್ಲಿ ಮೊಸರು ಮಿಶ್ರಣ ಮಾಡಿ ಮತ್ತು ಈ ಹೇಯರ್ ಮಾಸ್ಕ್ ಅನ್ನು ಕೂದಲುಗಳಿಗೆ ಬುಡದಿಂದ ಅನ್ವಯಿಸಿ. ಕನಿಷ್ಠ 30 ನಿಮಿಷಗಳ ಕಾಲ ಅದನ್ನು ಹಾಗೆಯೇ ಇರಿಸಿ ನಂತರ ತೊಳೆದುಕೊಳ್ಳಿ.
ಇದನ್ನೂ ಓದಿ-White Hair Home Remedy: ವಾರದಲ್ಲಿ ನೈಸರ್ಗಿಕವಾಗಿ ಕೂದಲನ್ನು ಕಂಪ್ಲೇಟ್ ಕಪ್ಪಾಗಿಸಲು ಇಲ್ಲಿವೆ ಶಾಶ್ವತ ಉಪಾಯಗಳು!
ದೈನಂದಿನ ಆಹಾರಕ್ಕೆ ಸೇರಿಸಿ - Eat Fennel Seed Every Day To Stop Hair Fall
ಕೂದಲು ಉದುರುವುದನ್ನು ತಡೆಯಲು, ನಿಮ್ಮ ಆಹಾರದಲ್ಲಿ ಸೊಂಫು ಅನ್ನು ಸೇರಿಸಿ. ನೀವು ಪ್ರತಿದಿನ ಒಂದರಿಂದ ಎರಡು ಚಮಚ ಫೆನ್ನೆಲ್ ಅನ್ನು ಸೇವಿಸಬೇಕು. ನೀವು ತರಕಾರಿಗಳನ್ನು ತಯಾರಿಸಲು ಬಳಸಬಹುದು. ಇದಲ್ಲದೆ, ಇದನ್ನು ಬೆಳಗಿನ ಪಾನೀಯವಾಗಿ ಅಥವಾ ಊಟದ ನಂತರ ಮೌತ್ ಫ್ರೆಶ್ನರ್ ಆಗಿ ಇದನ್ನು ಸೇವಿಸಬಹುದು.
(Disclaimer- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು ಸಂಪರ್ಕಿಸಿ.)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ