ಒಂದು ರೂಪಾಯಿ ಖರ್ಚು ಮಾಡದೆ AC ಕ್ಲೀನ್ ಮಾಡಬಹುದು! ಸುಲಭವಾದ ಹಂತಗಳು ಇಲ್ಲಿವೆ

Tips To Clean Air Conditioner: ಯಾವುದೇ ವೆಚ್ಚವಿಲ್ಲದೆ ನಿಮ್ಮ AC ಅನ್ನು ಸ್ವಚ್ಛಗೊಳಿಸಬಹುದು ಎಂಬುದು ಇಲ್ಲಿದೆ.

Written by - Chetana Devarmani | Last Updated : Apr 1, 2024, 01:53 PM IST
  • AC ಸ್ವಚ್ಛಗೊಳಿಸುವುದು ಹೇಗೆ?
  • ಎಸಿ ಕ್ಲೀನ್ ಮಾಡುವ ವಿಧಾನ
  • ಹಣ ಖರ್ಚಿಲ್ಲದೆ ಎಸಿ ಕ್ಲೀನ್ ಮಾಡಿ
ಒಂದು ರೂಪಾಯಿ ಖರ್ಚು ಮಾಡದೆ AC ಕ್ಲೀನ್ ಮಾಡಬಹುದು! ಸುಲಭವಾದ ಹಂತಗಳು ಇಲ್ಲಿವೆ   title=

How To Clean AC:‌ ದಶಕಗಳ ಹಿಂದೆ‌ ಮನೆಯಲ್ಲಿ ಟಿವಿ, ಫ್ರಿಜ್, ಗ್ರೈಂಡರ್, ಫ್ಯಾನ್ ಇತ್ಯಾದಿ ಇರುತ್ತಿತ್ತು. ಆದರೆ ಎಸಿ ಹೆಚ್ಚು ಜನರ ಮನೆಯಲ್ಲಿ ಇರುತ್ತಿರಲಿಲ್ಲ. ಆದರೆ ಇಂದಿನ ದಿನಗಳಲ್ಲಿ ಎಸಿ ಅತ್ಯಂತ ಅಗತ್ಯ ಗೃಹೋಪಯೋಗಿ ವಸ್ತುವಾಗಿದೆ. ವಿಶೇಷವಾಗಿ ಬೇಸಿಗೆಯಲ್ಲಿ AC ಪ್ರಧಾನ ಸ್ಥಾನವನ್ನು ತೆಗೆದುಕೊಳ್ಳುತ್ತಿದೆ.

ಬೇಸಿಗೆಯ ಶಾಖವನ್ನು ನಿಭಾಯಿಸಲು ಮತ್ತು ರಾತ್ರಿ ಹೊತ್ತು ಮಲಗಿದಾಗ ಶೆಕೆ ತಪ್ಪಿಸಲು ಮನೆಯಲ್ಲಿ ಎಸಿ ಹಾಕುತ್ತಾರೆ. ಪ್ರಸ್ತುತ ಅವಧಿಯಲ್ಲಿ ಎಸಿ ಬಳಕೆ ಹೆಚ್ಚಾಗಿದೆ. ಅಂದಹಾಗೆ, ಈ ಬೇಸಿಗೆ ಕಾಲದಲ್ಲಿ ಎಸಿ  ಹೊಂದಿರುವವರು ಹಲವಾರು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
 
ಎಸಿ ಯನ್ನು ಖರೀದಿಸಿದ ನಂತರವೂ ಚೆನ್ನಾಗಿ ನಿರ್ವಹಿಸಬೇಕು. ನಿಮ್ಮ ಬಳಿ ಕವರ್ ಇಲ್ಲದ ಎಸಿ ಇದ್ದರೆ ಅದನ್ನು ಆಗಾಗ ಸ್ವಚ್ಛಗೊಳಿಸಬೇಕು. ಹೆಚ್ಚಾಗಿ ನೀವು ಮಾನ್ಸೂನ್ ಮತ್ತು ಚಳಿಗಾಲದಲ್ಲಿ AC ಅನ್ನು ಬಳಸುವುದಿಲ್ಲ. ಹಾಗಾಗಿ, ಅದರ ಮೇಲೆ ಸಾಕಷ್ಟು ಧೂಳು ಬೀಳುವ ಸಾಧ್ಯತೆಯಿದೆ. ಆ ಸಮಯದಲ್ಲಿ ನೀವು ಬೇಸಿಗೆಯಲ್ಲಿ ಇದನ್ನು ಇದ್ದಕ್ಕಿದ್ದಂತೆ ಬಳಸಿದಾಗ ಅದರಲ್ಲಿರುವ ಧೂಳು ಮತ್ತು ಸೂಕ್ಷ್ಮಜೀವಿಗಳು ಗಾಳಿಯಲ್ಲಿ ಬೆರೆತು ನಿಮ್ಮ ಶ್ವಾಸಕೋಶದ ಮೇಲೆ ಪರಿಣಾಮ ಬೀರಬಹುದು ಮತ್ತು ಸೋಂಕನ್ನು ಉಂಟುಮಾಡಬಹುದು. ಧೂಳಿನಿಂದ ಕೂಡಿದ್ದರೆ ಎಸಿ ಸರಿಯಾಗಿ ಕೆಲಸ ಮಾಡುವುದಿಲ್ಲ. ಎಸಿಯನ್ನು ಮನೆಯಲ್ಲಿಯೇ ಕ್ಲೀನ್ ಮಾಡಬಹುದು. ಹಣ ಖರ್ಚಿಲ್ಲದೆ ಎಸಿ ಕ್ಲೀನ್ ಮಾಡುವುದು ಹೇಗೆ ಇಲ್ಲಿದೆ.

ಇದನ್ನೂ ಓದಿ: ಹೀರೆಕಾಯಿ ಸೇವನೆಯು ದೇಹವನ್ನು ಈ ರೋಗದಿಂದ ಕಾಪಾಡುತ್ತದೆ! 

ನಿಮ್ಮ AC ದೀರ್ಘಕಾಲದವರೆಗೆ ಉತ್ತಮವಾಗಿ ಕಾರ್ಯನಿರ್ವಹಿಸಲು ಅದನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅತ್ಯಗತ್ಯ. ಹಾಗಾಗಿ ಎರಡರಿಂದ ಮೂರು ತಿಂಗಳಿಗೊಮ್ಮೆ ಎಸಿ ಕ್ಲೀನ್ ಮಾಡಿ. ಎಸಿ ಒಳಗೆ ಹೆಚ್ಚು ಧೂಳು ಮತ್ತು ಕೊಳಕು ಸಂಗ್ರಹವಾದಾಗ ಹೊರಗಡೆ ಕಲೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಅದರೊಳಗಿನ ಏರ್ ಫಿಲ್ಟರ್ ಅತಿಯಾದ ಕೊಳಕು ಮತ್ತು ಧೂಳಿನಿಂದ ಕಪ್ಪು ಬಣ್ಣಕ್ಕೆ ತಿರುಗುತ್ತದೆ.

ಈ ಕೊಳಕು ಮತ್ತು ಧೂಳಿನ ಉಪಸ್ಥಿತಿಯು ಎಸಿ ಗಾಳಿಯನ್ನು ಹೆಚ್ಚು ತಂಪಾಗಿಸಲು ಸಾಧ್ಯವಾಗುವುದಿಲ್ಲ. ಈ ಹಂತದಲ್ಲಿ ಎಸಿಯನ್ನು ಸ್ವಚ್ಛಗೊಳಿಸಬೇಕು. ಅಲ್ಲದೆ, ಎಸಿ  ಶಬ್ದ ಮಾಡಲು ಪ್ರಾರಂಭಿಸಿದರೆ ಅಥವಾ ಕೆಟ್ಟ ವಾಸನೆ ಬರುತ್ತಿದ್ದರೆ ತಕ್ಷಣವೇ ಸ್ವಚ್ಛಗೊಳಿಸಲು ಮರೆಯದಿರಿ.

ಎಸಿ ಕ್ಲೀನ್ ಮಾಡುವುದು ಹೇಗೆ?

ಮೊದಲು AC ಅನ್ನು ಸ್ವಿಚ್ ಆಫ್ ಮಾಡಿ ಮತ್ತು ಸ್ಕ್ರೂಡ್ರೈವರ್‌ ಸಹಾಯದಿಂದ ಅದನ್ನು ಬಿಚ್ಚಿ. ಅದರ ನಂತರ ಅದರಿಂದ ಏರ್ ಫಿಲ್ಟರ್ ಅನ್ನು ತೆಗೆಯಿರಿ. ಹಲ್ಲುಜ್ಜುವ ಬ್ರಷ್‌ನಿಂದ ಅದನ್ನು ನಿಧಾನವಾಗಿ ಬ್ರಷ್ ಮಾಡಿ. ಅದರ ನಂತರ, ನೀರಿನಿಂದ ಒಮ್ಮೆ ತೊಳೆದು ಒಣಗಿಸಿ. ನೀರು ಒಣಗಿದ ನಂತರ ಅದು ಇದ್ದ ಸ್ಥಳದಲ್ಲಿ ಇರಿಸಿ ಮತ್ತೆ ಮುಚ್ಚಿ.

ಎಸಿ ಹೊರಭಾಗವನ್ನು ಸ್ವಚ್ಛಗೊಳಿಸಲು ಹಸಿರು ಕವರ್ ತೆಗೆದುಹಾಕಿ ಮತ್ತು ಫ್ಯಾನ್ ತೆಗೆಯಿರಿ. ಇದನ್ನು ಮಾಡುವ ಮೊದಲು ಎಸಿ ಸ್ವಿಚ್ ಆಫ್ ಮಾಡಿ. ಮೃದುವಾದ ಬಟ್ಟೆಯಿಂದ ಒರೆಸಿ.  

ಇದನ್ನೂ ಓದಿ: Summer Protection Tips: ಬಿಸಿಲಿನ ಪ್ರಖರತೆ ತಪ್ಪಿಸಿಕೊಳ್ಳಲು ಈ ಕ್ರಮಗಳನ್ನು ಅನುಸರಿಸಿ...! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News