ಕರಾವಳಿ ಕುವರಿ ಪೂಜಾ ಹೆಗ್ಡೆ ಮದುವೆ ಯಾವಾಗ ಗೊತ್ತಾ? ಶೀಘ್ರದಲ್ಲೇ ಜರುಗುವುದು ಅದ್ಧೂರಿ ವಿವಾಹ!!

Pooja Hegde Dating: ಇತ್ತೀಚಿನ ದಿನಗಳಲ್ಲಿ ನಟಿ ಪೂಜಾ ಹೆಗ್ಡೆ ಲವ್‌ ಲೈಫ್‌ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. 

Written by - Chetana Devarmani | Last Updated : Apr 2, 2024, 03:35 PM IST
  • ಕರ್ನಾಟಕದ ಕರಾವಳಿ ಕುವರಿ ನಟಿ ಪೂಜಾ ಹೆಗ್ಡೆ
  • ನಟಿ ಪೂಜಾ ಹೆಗ್ಡೆ ಬಾಲಿವುಡ್‌ನ ಅತ್ಯುತ್ತಮ ನಟಿಯರಲ್ಲಿ ಒಬ್ಬರು
  • ಶೀಘ್ರದಲ್ಲೇ ಮದುವೆ ಆಗಲಿದ್ದಾರಾ ನಟಿ ಪೂಜಾ ಹೆಗ್ಡೆ
ಕರಾವಳಿ ಕುವರಿ ಪೂಜಾ ಹೆಗ್ಡೆ ಮದುವೆ ಯಾವಾಗ ಗೊತ್ತಾ? ಶೀಘ್ರದಲ್ಲೇ ಜರುಗುವುದು ಅದ್ಧೂರಿ ವಿವಾಹ!! title=

Pooja Hegde Marriage: ಕರ್ನಾಟಕದ ಕರಾವಳಿ ಕುವರಿ ನಟಿ ಪೂಜಾ ಹೆಗ್ಡೆ ಬಾಲಿವುಡ್‌ನ ಅತ್ಯುತ್ತಮ ನಟಿಯರಲ್ಲಿ ಒಬ್ಬರು. ಪೂಜಾ 2014 ರಲ್ಲಿ ಹೃತಿಕ್ ರೋಷನ್ ಜೊತೆಗಿನ ಮೊಹೆಂಜೋದಾರೋ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಸಲ್ಮಾನ್ ಖಾನ್ ಜೊತೆ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದಲ್ಲಿ ಇತ್ತೀಚೆಗೆ ನಟಿಸಿದ್ದರು. ಪ್ರಸ್ತುತ ನಟಿ ಶಾಹಿದ್ ಕಪೂರ್ ಜೊತೆ 'ದೇವ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. 

ಇತ್ತೀಚಿನ ದಿನಗಳಲ್ಲಿ ನಟಿ ಪೂಜಾ ಹೆಗ್ಡೆ ಲವ್‌ ಲೈಫ್‌ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಪೂಜಾ ದಿವಂಗತ ನಟ ವಿನೋದ್ ಮೆಹ್ರಾ ಅವರ ಪುತ್ರ ರೋಹನ್ ಮೆಹ್ರಾ ಅವರೊಂದಿಗೆ ಕಾರಿನಲ್ಲಿ ಹೋಗುತ್ತಿರುವುದು ಕಂಡುಬಂದಿದೆ. ಬಾಂದ್ರಾದಲ್ಲಿ ಪೂಜಾ ಹೆಗ್ಡೆ ಮತ್ತು ರೋಹನ್‌ ಮೆಹ್ರಾ ಓಡಾಡುವ ವಿಡಿಯೋ ವೈರಲ್‌ ಆಗಿದೆ.

ಪೂಜಾ ಹೆಗ್ಡೆ ಯಾವಾಗಲೂ ತಮ್ಮ ವೈಯಕ್ತಿಕ ಜೀವನವನ್ನು ಗುಟ್ಟಾಗಿಡಲು ಇಷ್ಟಪಡುತ್ತಾರೆ. ಆದರೆ ಈಗ ಪಾಪರಾಜಿಗಳು ಈ ಜೋಡಿಯ ಫೋಟೋ ಸೆರೆ ಹಿಡಿದಿದ್ದಾರೆ. ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಚಿತ್ರದ ಬಿಡುಗಡೆಯ ಸಮಯದಲ್ಲಿ ಸಲ್ಮಾನ್ ಖಾನ್ ಮತ್ತು ಪೂಜಾ ಹೆಗ್ಡೆ ಅವರ ಡೇಟಿಂಗ್ ವದಂತಿಗಳು ಮುಖ್ಯಾಂಶಗಳನ್ನು ಪಡೆದಿತ್ತು.  

ಇದನ್ನೂ ಓದಿ: ಗರ್ಲ್‌ ಫ್ರೆಂಡ್ಸ್‌ಗೆ ಗಿಫ್ಟ್ ಕೊಡಲು ಸೋದರಿಯ ಬಟ್ಟೆ, ಅಮ್ಮನ ಒಡವೆ ಕದಿಯುತ್ತಿದ್ದ ಸ್ಟಾರ್ ಹೀರೋ! 

ಇದೀಗ ಮತ್ತೊಮ್ಮೆ ಪೂಜಾ ಹೆಗ್ಡೆ ಲವ್‌ ಲೈಫ್‌ ಸುದ್ದಿಯಲ್ಲಿದೆ. ಪೂಜಾ ಹೆಗ್ಡೆ ಮತ್ತು ರೋಹನ್‌ ಮೆಹ್ರಾ ಪರಸ್ಪರ ಡೇಟಿಂಗ್‌ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಪೂಜಾ ಹೆಗ್ಡೆ ಮತ್ತು ರೋಹನ್‌ ಮೆಹ್ರಾ ಮದುವೆ ಕೂಡ ಆಗಲಿದ್ದಾರೆ ಎಂಬ ವದಂತಿಗಳು ಹಬ್ಬುತ್ತಿವೆ. ಶೀಘ್ರದಲ್ಲೇ ಅದ್ಧೂರಿ ವಿವಾಹ ಸಮಾರಂಭದಲ್ಲಿ ಈ ಜೋಡಿ ಅಪ್ತಪದಿ ತುಳಿಯಬಹುದು ಎಂದು ಫ್ಯಾನ್ಸ್‌ ಊಹಿಸುತ್ತಿದ್ದಾರೆ. ಆದರೆ ಪೂಜಾ ಹೆಗ್ಡೆ ಮತ್ತು ರೋಹನ್‌ ಮೆಹ್ರಾ ಈ ಬಗ್ಗೆ ಯಾವುದೆ ಸ್ಪಷ್ಟನೆ ನೀಡಿಲ್ಲ. 

ನಟ ರೋಹನ್ ಮೆಹ್ರಾ 2018 ರಲ್ಲಿ ಬಜಾರ್ ಚಿತ್ರದ ಮೂಲಕ ನಟನೆಗೆ ಪದಾರ್ಪಣೆ ಮಾಡಿದರು. ಇದರಲ್ಲಿ ರಾಧಿಕಾ ಆಪ್ಟೆ ಮತ್ತು ಚಿತ್ರಾಂಗದಾ ಸಿಂಗ್ ಜೊತೆಗೆ ಸೈಫ್ ಅಲಿ ಖಾನ್ ಪ್ರಮುಖ ಪಾತ್ರದಲ್ಲಿದ್ದರು. ನಟ ದಿವಂಗತ ವಿನೋದ್ ಮೆಹ್ರಾ ಅವರ ಮಗ. ರೋಹನ್ ಅವರು ಸಂಜಯ್ ಲೀಲಾ ಬನ್ಸಾಲಿಯವರ ಬಾಜಿರಾವ್ ಮಸ್ತಾನಿ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: ಜೂ.ಎನ್‌ಟಿಆರ್‌ ಪತ್ನಿ ಯಾರು ಗೊತ್ತೇ... ಮುದ್ದಿನ ಮಡದಿಯನ್ನು ತಾರಕ್‌ ಏನೆಂದು ಕರೆಯುತ್ತಾರೆ ನೋಡಿ! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News