ವಿರಾಟ್, ರೋಹಿತ್ ಅಲ್ವಂತೆ... ಟೀಂ ಇಂಡಿಯಾದ ನಿಜವಾದ 'ಸೂಪರ್ ಸ್ಟಾರ್' ಈತ ಎಂದ ಆರ್‌. ಅಶ್ವಿನ್! ಭಾರತದ ಸ್ಪಿನ್‌ ಮಾಸ್ಟರ್‌ ಕೊಂಡಾಡಿದ್ದು ಯಾರನ್ನು?

R Ashwin statement about T Dilip: ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಆಗಿದ್ದಾಗ ಆರ್ ಶ್ರೀಧರ್ ಬದಲಿಗೆ ದಿಲೀಪ್ ಭಾರತ ತಂಡದ ಫೀಲ್ಡಿಂಗ್ ಕೋಚ್ ಆದರು. ಮುಖ್ಯ ಕೋಚ್ ಆದ ನಂತರವೂ ಗೌತಮ್ ಗಂಭೀರ್ ಅವರನ್ನು ಉಳಿಸಿಕೊಳ್ಳಲು ತಂಡದ ಆಡಳಿತ ಮಂಡಳಿ ನಿರ್ಧರಿಸಿತ್ತು. ದಿಲೀಪ್ ತಂಡದ ಫೀಲ್ಡಿಂಗ್ ನಲ್ಲಿ ಹೊಸ ಪ್ರಯೋಗಗಳನ್ನು ಮಾಡಿ ಸಾಕಷ್ಟು ಯಶಸ್ವಿಯಾಗಿದ್ದಾರೆ.  

Written by - Bhavishya Shetty | Last Updated : Sep 23, 2024, 07:32 PM IST
    • ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರವಿಚಂದ್ರನ್ ಅಶ್ವಿನ್
    • ಆರ್ ಶ್ರೀಧರ್ ಬದಲಿಗೆ ದಿಲೀಪ್ ಭಾರತ ತಂಡದ ಫೀಲ್ಡಿಂಗ್ ಕೋಚ್ ಆದರು
    • ಜೈಸ್ವಾಲ್‌ ಮತ್ತು ಕೆಎಲ್‌ ರಾಹುಲ್‌ ಬಗ್ಗೆ ಮಾತನಾಡಿದ ಅಶ್ವಿನ್
ವಿರಾಟ್, ರೋಹಿತ್ ಅಲ್ವಂತೆ... ಟೀಂ ಇಂಡಿಯಾದ ನಿಜವಾದ 'ಸೂಪರ್ ಸ್ಟಾರ್' ಈತ ಎಂದ ಆರ್‌. ಅಶ್ವಿನ್! ಭಾರತದ ಸ್ಪಿನ್‌ ಮಾಸ್ಟರ್‌ ಕೊಂಡಾಡಿದ್ದು ಯಾರನ್ನು?  title=
R Ashwin Statement on T Dilip

R Ashwin Statement on T Dilip: ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರವಿಚಂದ್ರನ್ ಅಶ್ವಿನ್ ಟೀಂ ಇಂಡಿಯಾದ ಬಗ್ಗೆ ಬಿಗ್ ರಿವೀಲ್ ಮಾಡಿದ್ದಾರೆ. ಸ್ಲಿಪ್ʼನಲ್ಲಿ ಫೀಲ್ಡಿಂಗ್ ಮಾಡುವ ಬಗ್ಗೆ ವಿವರವಾಗಿ ಮಾತನಾಡಿದ ಅವರು, ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಅವರ ಟೆಕ್ನಿಕ್‌ಗಳಿಗೆ ಫಿದಾ ಆಗಿದ್ದು, ಇವರನ್ನು ಕೊಂಡಾಡಿದ್ದಾರೆ.

ಇದನ್ನೂ ಓದಿ: ಮಜ್ಜಿಗೆಗೆ ಇದೊಂದು ಪದಾರ್ಥ ಬೆರೆಸಿ ಕುಡಿಯಿರಿ: ಕೇವಲ 5 ದಿನದಲ್ಲಿ ಸೊಂಟ ಸುತ್ತ ತುಂಬಿರುವ ಬೊಜ್ಜು ಬೆಣ್ಣೆ ಕರಗಿದಂತೆ ಕರಗುತ್ತೆ!

ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಆಗಿದ್ದಾಗ ಆರ್ ಶ್ರೀಧರ್ ಬದಲಿಗೆ ದಿಲೀಪ್ ಭಾರತ ತಂಡದ ಫೀಲ್ಡಿಂಗ್ ಕೋಚ್ ಆದರು. ಮುಖ್ಯ ಕೋಚ್ ಆದ ನಂತರವೂ ಗೌತಮ್ ಗಂಭೀರ್ ಅವರನ್ನು ಉಳಿಸಿಕೊಳ್ಳಲು ತಂಡದ ಆಡಳಿತ ಮಂಡಳಿ ನಿರ್ಧರಿಸಿತ್ತು. ದಿಲೀಪ್ ತಂಡದ ಫೀಲ್ಡಿಂಗ್ ನಲ್ಲಿ ಹೊಸ ಪ್ರಯೋಗಗಳನ್ನು ಮಾಡಿ ಸಾಕಷ್ಟು ಯಶಸ್ವಿಯಾಗಿದ್ದಾರೆ.

ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 113 ರನ್ ಗಳಿಸಿ ಎರಡನೇ ಇನಿಂಗ್ಸ್‌ʼನಲ್ಲಿ ಆರು ವಿಕೆಟ್ ಪಡೆದಿದ್ದ ಅಶ್ವಿನ್ ಅವರನ್ನು ಪತ್ರಿಕಾಗೋಷ್ಠಿಯಲ್ಲಿ ಫೀಲ್ಡಿಂಗ್ ಕುರಿತು ಕೇಳಿದಾಗ, “ದಿಲೀಪ್ ಸರ್ ಇಂಟರ್ನೆಟ್ ಸೆಲೆಬ್ರಿಟಿ ಅಲ್ಲ. ಅವರು ನಮ್ಮ 'ಸೆಲೆಬ್ರಿಟಿ' ಫೀಲ್ಡಿಂಗ್ ಕೋಚ್. ಅವರು ಸೂಪರ್ಸ್ಟಾರ್" ಎಂದಿದ್ದಾರೆ.

ಇದನ್ನೂ ಓದಿ: iPhone ಬಳಕೆದಾರರಿಗೆ ಹೈ ಅಲರ್ಟ್​! ಭಾರತದಲ್ಲಿ ಈ ಆವೃತ್ತಿಗಳು ಹ್ಯಾಕ್‌ ಆಗುವ ಸಾಧ್ಯತೆ..!

ಈ ಬಳಿಕ ಜೈಸ್ವಾಲ್‌ ಮತ್ತು ಕೆಎಲ್‌ ರಾಹುಲ್‌ ಬಗ್ಗೆ ಮಾತನಾಡಿದ ಅವರು, "ಒಂದೆರಡು ವರ್ಷಗಳ ಹಿಂದೆ, ಸ್ಲಿಪ್ ಏರಿಯಾಗಳಲ್ಲಿ ಕ್ಯಾಚ್‌ ಹಿಡಿಯುವುದು ನಮಗೆ ಸವಾಲಾಗಿತ್ತು.  ಆದರೆ ಆ ಬಳಿಕ ಯಶಸ್ವಿ ಜೈಸ್ವಾಲ್‌, ದಿಲೀಪ್‌ ನೀಡಿದ ತರಬೇತಿಯಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ನಂತರ ಉತ್ತಮ ಪ್ರದರ್ಶನ ನೀಡಲು ಪ್ರಾರಂಭಿಸಿದರು. ಈಗ ಜೈಸ್ವಾಲ್ ಅತ್ಯುತ್ತಮರಾಗಿದ್ದಾರೆ. ಎರಡನೇ ಸ್ಲಿಪ್‌ಗೆ ಕೆಎಲ್ ರಾಹುಲ್ ಉತ್ತಮ ಆಯ್ಕೆ, ನನ್ನ ಪ್ರಕಾರ ಇಬ್ಬರೂ ತುಂಬಾ ಕಷ್ಟಪಟ್ಟಿದ್ದಾರೆ" ಎಂದಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News