Davanagere Lok Sabha Constituency: ಇಬ್ಬರು ಮಹಿಳೆಯರಲ್ಲಿ ಜನರಿಗೆ ಯಾರ ಪರ ಒಲವಿದೆ?

Written by - Manjunath N | Last Updated : Apr 13, 2024, 01:54 AM IST
  • ದಾವಣಗೆರೆ ರಣಕಣ. ಭಾರೀ ಸದ್ದು ಮಾಡುತ್ತಿರುವ ಚುನಾವಣೆಯ ಸ್ಪರ್ಧಾ ಅಖಾಡ.
  • ಬಿಜೆಪಿಯಿಂದ ಹಾಲಿ ಸಂಸದ, ಜಿ.ಎಂ ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಜನರ ಬಳಿಗೆ ತೆರಳಿದ್ದಾರೆ.
  • ಕಾಂಗ್ರೆಸ್‌ ಪಕ್ಷದಿಂದ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ್ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ.
 Davanagere Lok Sabha Constituency: ಇಬ್ಬರು ಮಹಿಳೆಯರಲ್ಲಿ ಜನರಿಗೆ ಯಾರ ಪರ ಒಲವಿದೆ? title=

ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಭರಾಟೆ ಆರಂಭವಾಗಿದೆ. ಏಳು ಹಂತಗಳ ಉಮೇದುವಾರಿಕೆಯಲ್ಲಿ ಹಲವು ಏರಿಳಿತ ಕಾಣುತ್ತಿದ್ದು ಮತಬೇಟೆ ಕೂಡ ಬಿರುಸಾಗಿ ಸಾಗಿದೆ. ಈ ಹಂತದಲ್ಲಿ ಸೂಕ್ತ ಅಭ್ಯರ್ಥಿಗಳ ಆಯ್ಕೆಗೆ ಮತದಾರರ ಜಾಗೃತಿ ಕೂಡ ಜೀ ಕನ್ನಡ ನ್ಯೂಸ್‌ ನಡೆಸುತ್ತಿದ್ದು ಜೊತೆಗೆ ಕ್ಷೇತ್ರ ಪರಿಚಯ ಕೂಡ ಆರಂಭವಾಗಿದೆ. ಸಂಸತ್‌ ಕ್ಷೇತ್ರದಲ್ಲಿ ಕಾಡುತ್ತಿರುವ ಸಮಸ್ಯೆಗಳು, ಹಿಂದೆ ಗೆದ್ದಿರೋ ಪಕ್ಷ ಮತ್ತು ನಾಯಕರ ಸಾಧನೆ, ಜಾತಿವಾರು ಶಕ್ತಿ ಹೇಗೆ ಪ್ರಭಾವ ಬೀರಲಿದೆ..? ನಿರ್ಣಾಯಕ ಸಾಮಾಜಿಕ ಅಂಶ ಹಾಗೂ ಕ್ಷೇತ್ರದ ಭೌಗೋಳಿಕ ಹಿನ್ನೆಲೆ ಹೇಗಿದೆ..? ಅಭ್ಯರ್ಥಿಗಳ ಗೆಲುವಿಗೆ ಮತದಾರನ ಮೇಲೆ ಪ್ರಭಾವ ಬೀರುವ ಅಂಶಗಳನ್ನು ನಿಮ್ಮ ಮುಂದಿಡುವ ಕಾರ್ಯಕ್ರಮವೇ ಕ್ಷೇತ್ರ ಪರಿಚಯ

ದಾವಣಗೆರೆ ರಣಕಣ. ಭಾರೀ ಸದ್ದು ಮಾಡುತ್ತಿರುವ ಚುನಾವಣೆಯ ಸ್ಪರ್ಧಾ ಅಖಾಡ. ಬಿಜೆಪಿಯಿಂದ ಹಾಲಿ ಸಂಸದ, ಜಿ.ಎಂ ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ  ಜನರ ಬಳಿಗೆ ತೆರಳಿದ್ದಾರೆ. ಕಾಂಗ್ರೆಸ್‌ ಪಕ್ಷದಿಂದ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ್  ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಇಬ್ಬರು ಮಹಿಳಾ ಅಭ್ಯರ್ಥಿಗಳು ಪ್ರತಿಷ್ಠಿತ ಹಾಗೂ ಪ್ರಭಾವ ರಾಜಕೀಯ ಕುಟುಂಬದಿಂದ ಬಂದ ಹಿನ್ನೆಲೆಯಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಜೊತೆಗೆ ಎಂಟು ಅಸೆಂಬ್ಲಿ ಕ್ಷೇತ್ರಗಳ ಹಿನ್ನೋಟ ಮನ್ನೋಟ ಮತ್ತು ಸಮಗ್ರ ಪರಿಚಯ ಹೇಗಿದೆ ಅಂತ ನೋಡೋಣ..

ದಾವಣಗೆರೆ ಎಂದರೆ ಒಂದು ಕಾಲದಲ್ಲಿ ಮ್ಯಾಂಚೇಸ್ಟರ್ ನಗರವಾಗಿತ್ತು. ಕಾಲಾನಂತರ ಹತ್ತಿ ಗಿರಣಿ ವಿನಾಶಕ್ಕೆ ತಲುಪಿ, ಇದೀಗ ಬೆಣ್ಣೆ ನಗರಿ, ವಿದ್ಯಾಕಾಶಿ ಎಂದು ಹೆಸರು ಪಡೆದಿದೆ. ಈ ಜಿಲ್ಲೆ ಮೊದಲು ಚಿತ್ರದುರ್ಗ ಜಿಲ್ಲೆಯ ವ್ಯಾಪ್ತಿಗೆ ಒಳಪಟ್ಟಿತ್ತು. ನಂತರ ಜೆ.ಹೆಚ್ ಪಟೇಲರು ಮುಖ್ಯಮಂತ್ರಿಯಾಗಿದ್ದ ವೇಳೆ ದಾವಣಗೆರೆಯನ್ನ ಜಿಲ್ಲೆಯನ್ನಾಗಿ ಮಾಡಿದರು. ಲೋಕಸಭಾ ಚುನಾವಣೆ ಇತಿಹಾಸ ನೋಡಿದರೆ. 1971 ರಿಂದ ಲೋಕಸಭಾ ಚುನಾವಣೆ ನಡೆದಿದೆ. 18ನೇ ಲೋಕಸಭಾ ಚುನಾವಣೆ ಕ್ಷೇತ್ರವಾರು ಅಂಕಿ ಅಂಶ ಇಲ್ಲಿದೆ ನೋಡಿ

ಸಂಸತ್‌ ಕ್ಷೇತ್ರ ಪರಿಚಯ: 

1 ದಾವಣಗೆರ ದಕ್ಷಿಣ : ದಾವಣಗೆರೆ ನಗರದ ದಕ್ಷಿಣ ಭಾಗ
2 ದಾವಣಗರೆ ಉತ್ತರ : ದಾವಣಗೆರೆ ನಗರದ ಉತ್ತರ ಭಾಗ
3 ಮಾಯಕೊಂಡ (ಎಸ್.ಸಿ ) : ದಾವಣಗೆರೆ ತಾಲ್ಲೂಕು
4 ಜಗಳೂರು (ಎಸ್.ಟಿ) : ಜಗಳೂರು ತಾಲೂಕು
5 ಚನ್ನಗಿರಿ : ಚನ್ನಗಿರಿ ತಾಲೂಕು
6 ಹರಿಹರ : ಹರಿಹರ ತಾಲೂಕು
7 ಹೊನ್ನಾಳಿ : ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕು
8 ಹರಪನಹಳ್ಳಿ - ವಿಜಯನಗರ ಜಿಲ್ಲೆ : ಹರಪನಹಳ್ಳಿ ತಾಲೂಕು

ಮತದಾರರ ಅಂಕಿ ಅಂಶ 
ದಾವಣಗೆರೆ ಲೋಕಸಭಾ ಕ್ಷೇತ್ರ  ಒಟ್ಟು ಮತದಾರರು
     ಲಿಂಗ             ಮತಗಳು
    ಪುರುಷ        8,38,705
    ಮಹಿಳೆ        84,03,340
    ಇತರೆ        136
    ಸರ್ವಿಸ್ ಮತ    565
    ಒಟ್ಟು        16,79,746

ಕಳೆದ 6 ಚುನಾವಣೆಯಿಂದ ಶಾಮನೂರು ಮತ್ತು ಜಿ.ಎಂ ಸಿದ್ಧೇಶ್ವರ ಕುಟುಂಬದ ನಡುವೆ ಲೋಕ ಕದನ ನಡೆಯುತ್ತಿದೆ. ಅದರಲ್ಲೂ ಎರಡು ದಶಕಗಳಿಂದ ಜಿ.ಎಂ.ಸಿದ್ದೇಶ್ವರ್ ಸತತವಾಗಿ 4 ಬಾರಿ ಗೆದ್ದಿದ್ದಾರೆ. ಈ ಎರಡು ಪ್ರತಿಷ್ಠತ ರಾಜಕೀಯ ಕುಟುಂಬಗಳನಡುವೆ ಜಿದ್ದಾಜಿದ್ದಿ ನಡೆಯುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಮಾತ್ರ ಸತತವಾಗಿ ಶಾಮನೂರು ಕುಟುಂಬ ಜಿ.ಎಂ ಸಿದ್ಧೇಶ್ವರ ವಿರುದ್ಧ ಮಂಡಿಯೂರುತ್ತಲೇ ಬಂದಿದ. ಗೆಲುವಿನ ನಾಗಲೋಟ ಮುಂದುವರೆಸಿರುವ ಕಮಲ ಪಕ್ಷಕ್ಕೆ ಕೈ ಈ ಬಾರಿ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗದುಕೊಳ್ಳುವ ಅನಿವಾರ್ಯತೆ ಎದುರಾಗಿದೆ.

ನಿರ್ಣಾಯಕ ಸಾಮಾಜಿಕ ಅಂಶಗಳು 
ಮತದಾರನಿಗೆ ಕನೆಕ್ಟಿಂಗ್‌ ವಿಚಾರ..?  
1. ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ತ್ವರಿತವಾಗಿ ಜಾರಿ ಅಗತ್ಯ
2. ದವಣಗೆರೆ -ಚಿತ್ರದುರ್ಗ ಮೂಲಕ ನೇರ ರೈಲು ಮಾರ್ಗ ಆಗಬೇಕು 
3. ವಿಮಾನ ನಿಲ್ದಾಣ ಸ್ಥಾಪನೆ ಕೂಗಿಗೆ ಸಿಗದ ಸ್ಪಂದನೆ
4. ಫ್ಲೋರೈಡ್‌ಯುಕ್ತ ನೀರಿನ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ
5. ಜಿಲ್ಲೆಯಲ್ಲಿ ಶಾಂತಿ ಸಾಗರ ಅಭಿವೃದ್ಧಿ ಮಾಡಿ ಪ್ರವಾಸಿ ತಾಣ ಮಾಡಬೇಕು
6. ಹರಪನಹಳ್ಳಿ ತಾಲ್ಲೂಕು ಜನರು ಗುಳೆ ತಪ್ಪಿಸಲು ಕೈಗಾರಿಕೆ ಸ್ಥಾಪಿಸುವುದು
7. ಅಡಿಕೆ ಬೆಳೆಯ ವೈಜ್ಞಾನಿಕ ಸಂಸ್ಕರಣ ಘಟಕ ಸ್ಥಾಪನೆ 
8. ರೈತರ ಬೆಳೆ ಸಂರಕ್ಷಣೆಗೆ ಶಿಥಲೀಕರಣ ಘಟಕ ಸ್ಥಾಪನೆ 
9. ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆ ಪೂರ್ಣಗೊಳಿಸಬೇಕು
10. IIT ಸ್ಥಾಪನೆಯಾಗಬೇಕು ಎಂಬುದು ಜಿಲ್ಲೆಯ ಜನರ ಕನಸು

ಜಾತಿವಾರು ಪ್ರಬಲತೆ
1 ದಾವಣಗೆರೆ - ದಕ್ಷಿಣ : ಶೇಕಡ 60 ರಷ್ಟು ಮುಸ್ಲಿಮರ ಪ್ರಾಬಲ್ಯ, ಪಂಚಮಸಾಲಿ ಲಿಂಗಾಯತರು ಹೆಚ್ಚಿದ್ದು ಕಾಂಗ್ರೆಸ್ ಭದ್ರಕೋಟೆ
2 ದಾವಣಗೆರೆ - ಉತ್ತರ: ಲಿಂಗಾಯತರು ಮತ್ತು ನಾಯಕರು ಹೆಚ್ಚಿನ ಸಂಖ್ಯೆಯಲ್ಲಿದ್ದು ಇವರೇ ಗೆಲುವಿನ ಹಣೆಬರಹ ಬರೆಯಬಲ್ಲರು
3 ಮಾಯಕೊಂಡ (ಎಸ್.ಸಿ) : ಪರಿಶಿಷ್ಟ ಜಾತಿಯವರೇ ಹೆಚ್ಚಿನ ಸಂಖ್ಯೆಯಲ್ಲಿದ್ದು ಇವರೇ ನಿರ್ಣಾಯಕ
4 ಜಗಳೂರು (ಎಸ್.ಟಿ) : ಪರಿಶಿಷ್ಟ ಪಂಗಡ ಜನಾಂಗ ಜಾಸ್ತಿಯಿದ್ದು ಇವರೇ ಅಂತಿಮ ನಿರ್ಣಾಯಕರ
5 ಚನ್ನಗಿರಿ : ಲಿಂಗಾಯತರು ಮತ್ತು ಹಿಂದುಳಿದ ವರ್ಗದ ಮತಗಳು ಹೆಚ್ಚಿದ್ದು ಇವರೇ ನಿರ್ಣಾಯಕ
6 ಹೊನ್ನಾಳಿ-ನ್ಯಾಮತಿ : ಲಿಂಗಾಯತರು ಮತ್ತು ಕುರುಬ ಮತದಾರರು ನಿರ್ಣಾಯಕ
7 ಹರಿಹರ : ಪಂಚಮಸಾಲಿ ಮತ್ತು ಕುರುಬರೇ ಇಲ್ಲಿ ನಿರ್ಣಾಯಕರು 
8 ಹರಪನಹಳ್ಳಿ : ಪಂಚಮಸಾಲಿ ಮತ್ತು ಪರಿಶಿಷ್ಟ ಜಾತಿ (ಲಂಬಾಣಿ) ಜನರೇ ನಿರ್ಣಾಯಕರು  

ಜಾತಿವಾರು ಲೆಕ್ಕಚಾರ 
    ಜಾತಿ    ಮತಗಳು
    ಲಿಂಗಾಯತ    3.6 ಲಕ್ಷ
    ಕುರುಬ     : 3 ಲಕ್ಷ
    ನಾಯಕ     : 2.19ಲಕ್ಷ
    ಮುಸ್ಲಿಂ      : 2 ಲಕ್ಷ
    ದಲಿತ     : 3 ಲಕ್ಷ
    ಉಪ್ಪಾರ     : 1 ಲಕ್ಷ 
    ಗಂಗಮತ : 1 ಲಕ್ಷ
    ದೇವಾಂಗ : 1 ಲಕ್ಷ
    ಒಟ್ಟು    16,79,746

 ಬಿಜೆಪಿ ಸತತ ಗೆಲುವು ಪಡೆದಿದ್ದು, ಮತ್ತೊಮ್ಮೆ ಮೋದಿ ಹೆರಸಲ್ಲಿ ಗೆಲ್ಲಬಹುದೆಂಬ ಲೆಕ್ಕಾಚಾರದಲ್ಲಿದೆ. ಪಕ್ಷದ ಕಾರ್ಯಕರ್ತರು ಹಿಂದೂ ಟ್ರಂಪ್ ಕಾರ್ಡ್ ಗಾಯತ್ರಿ ಸಿದ್ಧೇಶ್ವರ ಅವರ ಬೆಂಬಲಕ್ಕಿದೆ. ಇನ್ನೂ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಗೆ ಸರ್ಕಾರದ 5 ಗ್ಯಾರಂಟಿಗಳು, 8 ಕ್ಷೇತ್ರಗಳಲ್ಲಿ 6 ರಲ್ಲಿ ಕಾಂಗ್ರೆಸ್ ಮತ್ತು ಹರಪನಹಳ್ಳಿ ಪಕ್ಷೇತರ ಬೆಂಬಲಕ್ಕಿರುವುದು ಗೆಲ್ಲುವ ವಿಶ್ವಾಸ ಹೊಂದಿದೆ. ಇಬ್ಬರ ನಡುವೆ ಭಾರೀ ಪೈಪೋಟಿಯಿದ್ದು, ಈ ಬಾರಿ ಗೆದ್ದು ಬಿಜೆಪಿ ಭದ್ರಕೋಟೆ ಛಿದ್ರ ಮಾಡುವ ಹುಮ್ಮಸ್ಸಿನಲ್ಲಿದೆ ಕಾಂಗ್ರೆಸ್.

ಚುನಾವಣೆ ಹಿನ್ನೋಟ
2014ರ ಲೋಕಸಭೆ 
* ಜಿ.ಎಂ.ಸಿದ್ದೇಶ್ವರ್‌, ಬಿಜೆಪಿ - 423447
* ಎಸ್‌.ಎಸ್‌.ಮಲ್ಲಿಕಾರ್ಜುನ್‌, ಕಾಂಗ್ರೆಸ್‌
* ಮಹಿಮಾ ಪಟೇಲ್‌, ಜೆಡಿಎಸ್

ಚುನಾವಣೆ ಹಿನ್ನೋಟ
2019ರ ಲೋಕಸಭೆ
* 1,69,702 ಮತಗಳ ಅಂತರದಲ್ಲಿ ಬಿಜೆಪಿಯ ಸಿದ್ದೇಶ್ವರ್‌ ಜಯ
* ಸಿದ್ದೇಶ್ವರ್‌, ಸಾದುಲಿಂಗಾಯತ    -ಬಿಜೆಪಿ    6,52,996     ಶೇ.54.66    
* ಹೆಚ್. ಬಿ ಮಂಜಪ್ಪ, ಕುರುಬ    -ಕಾಂಗ್ರೆಸ್     4,83,294      ಶೇ.40.66    

ಚುನಾವಣೆ ಮುನ್ನೋಟ
2024ರ ಸಾರ್ವತ್ರಿಕ ಚುನಾವಣೆ 
ಬಿಜೆಪಿ  - ಗಾಯತ್ರಿ ಸಿದ್ದೇಶ್ವರ 
ಕಾಂಗ್ರೆಸ್- ಡಾ.ಪ್ರಭಾ ಮಲ್ಲಿಕಾರ್ಜುನ್

ಈ ವಿಶೇಷ ಎಂದರೆ ಇಬ್ಬರು ಮಹಿಳೆಯರು ಕಣದಲ್ಲಿರುವುದು. ಸಂಬಂಧದಲ್ಲಿ ಮಾವ-ಅಳಿಯ ಎಂದರೂ ರಾಜಕೀಯ ಬದ್ಧ ವೈರಿಗಳ ನಡುವೆ ನಡೆಯುತ್ತಿರುವ ಕದನ. ಬಿಜೆಪಿ ಮತ್ತೊಮ್ಮೆ ಗೆದ್ದು ಮೋದಿಯವರನ್ನ ಪ್ರಧಾನಿ ಮಾಡಬೇಕೆಂದರೆ, ಕಾಂಗ್ರೆಸ್ ಬಿಜೆಪಿ ಭದ್ರಕೋಟೆಗೆ ಲಗ್ಗೆಯಿಡಲು ಭರ್ಜರಿ ತಂತ್ರಗಾರಿಕೆ ಮಾಡಿರುವುದು ಸತ್ಯ.
 

Trending News