ಲಕ್ನೋದಲ್ಲಿ ಡೆಂಗ್ಯೂ ಹಾವಳಿ; ಕೇವಲ 4 ದಿನಗಳಲ್ಲಿ 61 ಪ್ರಕರಣಗಳು ದಾಖಲು

ರಾಜ್ಯ ರಾಜಧಾನಿಯ ಇಂದಿರಾ ನಗರ ಪ್ರದೇಶದಿಂದ ಗರಿಷ್ಠ ಸಂಖ್ಯೆಯ ರೋಗಿಗಳು ದಾಖಲಾಗಿದ್ದು, ಜನವರಿಯಿಂದ ರಾಜ್ಯದಲ್ಲಿ 4,000 ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ.

Last Updated : Oct 31, 2019, 01:05 PM IST
ಲಕ್ನೋದಲ್ಲಿ ಡೆಂಗ್ಯೂ ಹಾವಳಿ; ಕೇವಲ 4 ದಿನಗಳಲ್ಲಿ 61 ಪ್ರಕರಣಗಳು ದಾಖಲು title=

ಲಕ್ನೋ: ಕಳೆದ ನಾಲ್ಕು ದಿನಗಳಲ್ಲಿ 61 ಡೆಂಗ್ಯೂ ಪ್ರಕರಣಗಳು ದಾಖಲಾಗಿರುವ ಬಗ್ಗೆ ವರದಿಯಾಗಿದೆ. 

ಆರೋಗ್ಯ ಇಲಾಖೆಯ ವರದಿಯ ಪ್ರಕಾರ, ಶನಿವಾರದಿಂದ ಬುಧವಾರದವರೆಗೆ 61 ಪ್ರಕರಣಗಳು ದಾಖಲಾಗಿದ್ದು, ಈ ಮೂಲಕ ಲಕ್ನೋದಲ್ಲಿ ಜನವರಿಯಿಂದ ದಾಖಲಾದ ಡೆಂಗ್ಯೂ ಪ್ರಕರಣಗಳ ಸಂಖ್ಯೆ 811ಕ್ಕೆ ಏರಿಕೆಯಾಗಿದೆ. 

ರಾಜ್ಯ ರಾಜಧಾನಿಯ ಇಂದಿರಾ ನಗರ ಪ್ರದೇಶದಿಂದ ಗರಿಷ್ಠ ಸಂಖ್ಯೆಯ ರೋಗಿಗಳು ದಾಖಲಾಗಿದ್ದು, ಜನವರಿಯಿಂದ ರಾಜ್ಯದಲ್ಲಿ 4,000 ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ಅಧಿಕಾರಿ ನಿರ್ದೇಶಕ ವಿಕಾಸ್ ಸಿಂಘಾಲ್ ತಿಳಿಸಿದ್ದಾರೆ.

ನಿರಂತರವಾಗಿ ಸುರಿದ ಮಳೆಯಿಂದಾಗಿ ಅಲ್ಲಲ್ಲಿ ನೀರು ನಿಂತು ಸೊಳ್ಳೆಗಳು ಹೆಚ್ಚಿರುವ ಕಾರಣ ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳ ಏರಿಕೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಜನತೆಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಸಿಂಘಾಲ್ ಹೇಳಿದ್ದಾರೆ.

Trending News